ಮನೆ ದೇಶ ಇಂದು ರಾತ್ರಿ ಆಕಾಶದಲ್ಲಿ ಗೋಚರವಾಗಲಿದೆ ಈ ವರ್ಷದ ಮೊದಲ ‘ಸೂಪರ್ ಮೂನ್’

ಇಂದು ರಾತ್ರಿ ಆಕಾಶದಲ್ಲಿ ಗೋಚರವಾಗಲಿದೆ ಈ ವರ್ಷದ ಮೊದಲ ‘ಸೂಪರ್ ಮೂನ್’

0

ಬೆಂಗಳೂರು: ಜಗತ್ತಿನಾದ್ಯಂತ ಇಂದು (ಆಗಸ್ಟ್ 1) ಆಕಾಶದಲ್ಲಿ ಸೂಪರ್‌ ಮೂನ್ ದರ್ಶನವಾಗಲಿದೆ. ಈ ದಿನ ಚಂದ್ರನು ಸ್ವಲ್ಪ ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಗೋಚರಿಸುವುದರಿಂದ ಅದನ್ನು ಸೂಪರ್ ಮೂನ್ ಎಂದು ಕರೆಯಲಾಗುತ್ತದೆ.

Join Our Whatsapp Group

ಸೆಪ್ಟೆಂಬರ್‌ ವರೆಗೆ ಸೂಪರ್‌ ಮೂನ್‌ ಗಳ ಸರಣಿಯಲ್ಲಿ ಇಂದು ರಾತ್ರಿ ಮೊದಲ ಸೂಪರ್‌ ಮೂನ್ ಆಗಲಿದೆ. ಆಕಾಶದಲ್ಲಿ ಕಾಣುವ ಮುಂದಿನ ನಾಲ್ಕು ಪೂರ್ಣ ಹುಣ್ಣಿಮೆಗಳು ಸೂಪರ್ ಮೂನ್ ಆಗಲಿವೆ. ಇಂದು ಜುಲೈ 3, ಆಗಸ್ಟ್ 1, ಆಗಸ್ಟ್ 31 ಮತ್ತು ಸೆಪ್ಟೆಂಬರ್ 29 ರಂದು ಸೂಪರ್ ಮೂನ್ ವೀಕ್ಷಿಸಬಹುದು.

ಸೂಪರ್‌ ಮೂನ್ ಆಕಾಶದಲ್ಲಿ ನಡೆಯುವ ಒಂದು ಅದ್ಬುತ ಘಟನೆಯಾಗಿದ್ದು, ಈ ಆಕರ್ಷಕ ವಿದ್ಯಾಮಾನದ ವೇಳೆ ಚಂದ್ರನು ಭೂಮಿಗೆ ತುಂಬಾ ಹತ್ತಿರದಲ್ಲಿ ಇರುವಂತೆ ಕಾಣಿಸುತ್ತದೆ.

ಆಗಸ್ಟ್ ಒಂದು ವಿಶೇಷ ತಿಂಗಳಾಗಿದೆ. ಏಕೆಂದರೆ ಇದು ಎರಡು ಹುಣ್ಣಿಮೆಗಳನ್ನು ಹೊಂದಿದೆ. ಈ ತಿಂಗಳಲ್ಲಿ ಎರಡು ವಿಶೇಷವಾದ ಚಂದ್ರ ನಾವು ಕಾಣಬಹುದು. ಒಂದು ಸ್ಟರ್ಜನ್ ಮೂನ್ ಮತ್ತು ಬ್ಲೂ ಮೂನ್. ಸ್ಟರ್ಜನ್ ಮೂನ್ ಆಗಸ್ಟ್ ತಿಂಗಳ ಆರಂಭದಲ್ಲಿ ಅಂದರೆ ಆಗಸ್ಟ್ 1ರಂದು, ಬ್ಲೂ ಮೂನ್ ತಿಂಗಳ ಅಂತ್ಯದಲ್ಲಿ ಅಂದರೆ ಆಗಸ್ಟ್ 30ರಂದು ಸಂಭವಿಸುತ್ತದೆ.

ವರ್ಷದ ಮೊದಲ ಸೂಪರ್‌ ಮೂನ್ (ಬಕ್ ಮೂನ್) ಜುಲೈನಲ್ಲಿ ಸಂಭವಿಸಿತ್ತು. ಇದಲ್ಲದೆ 2023 ರ ನಾಲ್ಕನೇ ಮತ್ತು ಅಂತಿಮ ಸೂಪರ್‌ ಮೂನ್ ಸೆಪ್ಟೆಂಬರ್‌ನಲ್ಲಿ ಸಂಭವಿಸುತ್ತದೆ. ಆಗಸ್ಟ್ 2018 ರಲ್ಲಿ ಕೊನೆಯ ಎರಡು ಪೂರ್ಣ ಸೂಪರ್‌ಮೂನ್‌ ಗಳು ಆಕಾಶವನ್ನು ಅಲಂಕರಿಸಿದ್ದವು. ಈ ಘಟನೆಯು 2037 ರವರೆಗೆ ಮತ್ತೆ ಸಂಭವಿಸುವುದಿಲ್ಲ.

ಚಂದ್ರನು ಆಗಸ್ಟ್ 1 ರಂದು ಭೂಮಿಯ ಮೇಲ್ಮೈಯಿಂದ ಕೇವಲ 357,530 ಕಿಲೋಮೀಟರ್ ದೂರದಲ್ಲಿರುತ್ತದೆ. ಆಗಸ್ಟ್ 1 ರಂದು ಸೂಪರ್ ಮೂನ್ ಸೂರ್ಯಾಸ್ತದ ನಂತರ ಪ್ರಕಾಶಮಾನವಾಗಿ ಕಾಣಿಸುತ್ತದೆ. ಸೂಪರ್‌ಮೂನ್ ಆಗಸ್ಟ್ 1 ರಂದು 02:32 PM ET ಕ್ಕೆ ಉತ್ತುಂಗಕ್ಕೇರುತ್ತದೆ (ಭಾರತದಲ್ಲಿ ಆಗಸ್ಟ್ 2 ರಂದು 12:02 AM IST).

ಏನಿದು ಸೂಪರ್‌ಮೂನ್?

ಖಗೋಳ ತಜ್ಞ ರಿಚರ್ಡ್ ನೊಲ್ಲೆ ಅವರು 1979ರಲ್ಲಿ ಸೂಪರ್‌ಮೂನ್ ಪದವನ್ನು ಹುಟ್ಟುಹಾಕಿದ್ದರು. ಇದು ಚಂದ್ರ, ಭೂಮಿಯ ಅತಿ ಸಮೀಪ ಬಂದಾಗ, ಭೂಮಿಯ ಕಕ್ಷೆಯ ಶೇ 90ರಷ್ಟು ಸಮೀಪಿಸಿದಾಗ ಉಂಟಾಗುವ ಹುಣ್ಣಿಮೆಯಾಗಿದೆ. ಚಂದ್ರನ ಕಕ್ಷೆಯು ಭೂಮಿಗೆ ಅತ್ಯಂತ ಸಮೀಪ ಬಂದಾಗ, ಪೂರ್ಣ ಚಂದಿರ ಇರುವ ಸನ್ನಿವೇಶವನ್ನು ಸೂಪರ್‌ ಮೂನ್ ಎನ್ನಲಾಗುತ್ತದೆ. ಚಂದ್ರನು ಭೂಮಿಯ ಸುತ್ತ ಅಂಡಾಕಾರ ಹಾದಿಯಲ್ಲಿ ಸುತ್ತುವಾಗ, ಈ ಗ್ರಹಣದಲ್ಲಿನ ದೂರದ ಅಂಶವನ್ನು ತುತ್ತತುದಿ (Apogee) ಎಂದು ಕರೆಯಲಾಗುತ್ತದೆ.

ಸೂಪರ್‌ ಮೂನ್ ಅನ್ನು ವೀಕ್ಷಿಸುವುದು ಹೇಗೆ ?

ಭಾರತದಲ್ಲಿ ಸ್ಟರ್ಜನ್ ಚಂದ್ರನ ಗೋಚರತೆಯು ಆಗಸ್ಟ್ 1 ರಂದು ಮಧ್ಯರಾತ್ರಿಯ ಹವಾಮಾನ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿದೆ. ಬೈನಾಕ್ಯುಲರ್‌ ಗಳು ಅಥವಾ ಹಿಂಭಾಗದ ದೂರದರ್ಶಕಗಳನ್ನು ಬಳಸುವುದು ಸೂಪರ್‌ ಮೂನ್ ವೀಕ್ಷಿಸಲು ಉತ್ತಮ ಮಾರ್ಗವಾಗಿದೆ. ಸ್ಪಷ್ಟವಾದ ಆಕಾಶವನ್ನು ಹೊಂದಿರುವ ಪ್ರದೇಶಗಳಲ್ಲಿ ಇದನ್ನು ಸುಲಭವಾಗಿ ನೋಡಬಹುದು.