ಮನೆ ಸುದ್ದಿ ಜಾಲ ತಾಯಾನೆಯಿಂದ ಬೇರ್ಪಟ್ಟು ಅಸ್ವಸ್ಥಗೊಂಡಿದ್ದ ಮರಿಯಾನೆಗೆ ಚಿಕಿತ್ಸೆ ನೀಡಿ ತಾಯಿ ಮಡಿಲು ಸೇರಿಸಿದ ಅರಣ್ಯ ಇಲಾಖೆ

ತಾಯಾನೆಯಿಂದ ಬೇರ್ಪಟ್ಟು ಅಸ್ವಸ್ಥಗೊಂಡಿದ್ದ ಮರಿಯಾನೆಗೆ ಚಿಕಿತ್ಸೆ ನೀಡಿ ತಾಯಿ ಮಡಿಲು ಸೇರಿಸಿದ ಅರಣ್ಯ ಇಲಾಖೆ

0

ಚಾಮರಾಜನಗರ: ತಾಯಾನೆಯಿಂದ ಬೇರ್ಪಟ್ಟು ಅಸ್ವಸ್ಥಗೊಂಡಿದ್ದ ಮರಿಯಾನೆಗೆ ಅರಣ್ಯ ಇಲಾಖೆ ಚಿಕಿತ್ಸೆ ಕೊಟ್ಟು ಆರೈಕೆ ಮಾಡಿ ಮತ್ತೆ ತಾಯಿಯ ಮಡಿಲು ಸೇರಿಸಿದ ಘಟನೆ ಬಿಆರ್​ಟಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಯಳಂದೂರು ವನ್ಯಜೀವಿ ವಲಯದಲ್ಲಿ ನಡೆದಿದೆ.

Join Our Whatsapp Group

ಅಂದಾಜು ಎರಡ್ಮೂರು ವರ್ಷದ ಗಂಡಾನೆ ಮರಿ ಮರಳಿ ತಾಯಾನೆ ಸೇರಿದೆ.

ಬೇತಾಳಕಟ್ಟೆ ಗಸ್ತಿನ ಗಂಜಿಗಟ್ಟಿ ಅರಣ್ಯ ಪ್ರದೇಶದಲ್ಲಿ ಜೂ.10ರಂದು ಇಲಾಖಾ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಜಯಣ್ಣ ಎಂಬವರ ಜಮೀನಿನಲ್ಲಿ ಮರಿಯಾನೆಯೊಂದು ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಕಂಡುಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಬಂಡೀಪುರದ ಅರಣ್ಯಾಧಿಕಾರಿಗಳು ಪಶು ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಮರಿ ಅರಸುತ್ತಾ ಬಂದ ತಾಯಾನೆ ಚಿಕಿತ್ಸೆ ಕೊಡಲು ಬಂದಿದ್ದ ಸಿಬ್ಬಂದಿ ಮೇಲೆ ದಾಳಿ ಮಾಡಲು ಮುಂದಾಯಿತು.

ಆದರೂ ಹರಸಾಹಸದಿಂದ ವೈದ್ಯರು ಮರಿಯಾನೆಗೆ ಆ್ಯಂಟಿಬಯೋಟಿಕ್, ಕಬ್ಬು, ಹಸಿ ಹುಲ್ಲು ಕೊಟ್ಟು ಆರೈಕೆ ಮಾಡಿದರು. ಮಂಗಳವಾರ ಸಂಜೆಯವರೆಗೂ ಆನೆ ಮರಿಗೆ ಆರೈಕೆ ಮಾಡಿ, ಚೇತರಿಕೆ ಕಂಡುಬಂದ ನಂತರ ತಾಯಾನೆ ಮಡಿಲಿಗೆ ಸೇರಿಸಿದ್ದಾರೆ. ಜೊತೆಗೆ, 24 ತಾಸು ಮರಿಯಾನೆ ಮೇಲೆ ನಿಗಾ ಇರಿಸಲು ಬಿಆರ್​ ಟಿ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.