ಕರ್ಕ ಸಂಕ್ರಾಂತಿಯು ಕರ್ಕೆ ರವಿ ಶನಿವಾರ, ರವಿವಾರ ಇಲ್ಲವೆ ಮಂಗಳವಾರಗಳಲ್ಲಿ ಬಂದರೆ ಆಷಾಢ ಶ್ರಾವಣ,ಬಾದ್ರಪದ ಈ ಮೂರು ತಿಂಗಳಲ್ಲಿ ಬೆಲ್ಲ, ಸಕ್ಕರೆ, ಶುಂಠಿ, ಕೊಬ್ಬರಿ,ಅಡಿಗೆ ಕರ್ಪೂರ, ಚಂದನ ಮುಂತಾದ ರಸ ಪದಾರ್ಥಗಳು ಹಾಗೂ ಆಹಾರ ಧಾನ್ಯಗಳು ತೇಜಿಯಲ್ಲಿ ಸಾಗುವವು. ಕಂಬಳಿ,ಉಣ್ಣೆ,ಉಲ್ಲನ್ ಜವಳಿ, ಶೃಂಗಾರ ವಸ್ತುಗಳು ಮಂದಿ.
ಉಪ್ಪು,ಅರಿಷಿಣ, ಫಲ ಪುಷ್ಪಗಳು ಸಮ ಧರಣಿಯಲ್ಲಿರುವವು ತಾಮ್ರ ಹಿತ್ತಾಳೆ, ಕಂಚು, ಸ್ಟೆನ್ ಲೇಸ್ ಸ್ಟಿಲ್ ಲ ಇತ್ಯಾದಿ ಲೋಹದ ಪಾತ್ರೆ ಪಡಗಗಳು, ಬಂಗಾರ ಬೆಳ್ಳಿ ಯಥಾರೀತಿಯಲ್ಲಿ ಸ್ವಲ್ಪ ಹೆಚ್ಚು ಕಡಿಮೆ ತೇಜಿ ಮಂದಿಯಲ್ಲಿರುತ್ತವೆ. ಬ. 8ರಂದು ಶನಿವಾರ ಬಂದರೆ ಈ ಮಾಸದಲ್ಲಿ ಗೋದಿ ಸಂಗ್ರಹಿಸಿ ಕಾರ್ತಿಕದಲ್ಲಿ ಮಾರಿದರೆ ಲಾಭವಿದೆ.
ಆದರೆ ಬ.30 ಸೋಮವಾರವಿದ್ದು, ಅಂದು ಮೃಗಶಿರಾದಿ ಮುಂದಿನ ಏಳು ನಕ್ಷತ್ರಗಳಲ್ಲಿ ಯಾವ ನಕ್ಷತ್ರವಿದ್ದರೂ ಗೋಧಿಯ ಧಾರಣೆ ಮಂದಿಯಾಗುವುದು, ಬ ಒಂದು 1.2.3. ರಂದು ಶ್ರಾವಣಾ ದನಿಷ್ಠ ನಕ್ಷತ್ರಗಳಿದ್ದರೆ ಈಗ ಧ್ಯಾನ ಸಂಗ್ರಹ ಮಾಡಿ ಮುಂದಿನ ತಿಂಗಳುಗಳಲ್ಲಿ ಮಾರಿದರೆ ಲಾಭವಿದೆ ಆಷಾಢ 5ನೇ ತಿಥಿಯ ದಿವಸ ಪಶ್ಚಿಮ ದಿಕ್ಕಿನಿಂದ ಗಾಳಿ ಬೀಸುತ್ತಿದ್ದರೆ ಅಥವಾ ಈ ದಿಕ್ಕಿನಲ್ಲಿ ಇಂದ್ರ ಧನುಷ ಮೂಡಿದರೆ ಇಲ್ಲವೇ ಮಳೆಯಾದರೆ ಆಗ ಧ್ಯಾನಗಳನ್ನು ಸಂಗ್ರಹಿಸಿ ಭಾದ್ರಪದ, ಅಶ್ವಿಜ, ಕಾರ್ತಿಕಗಳಲ್ಲಿ ಮಾರಿದರೆ ತುಂಬಾ ಲಾಭವಿದೆ.