ಮನೆ ಜ್ಯೋತಿಷ್ಯ ಭಾದ್ರಪದ ಮಾಸದ ಫಲವು

ಭಾದ್ರಪದ ಮಾಸದ ಫಲವು

0

ಈ ಮಾಸದ ಬ. 8 ಈ ದಿನ ಶನಿವಾರ ರೋಹಿಣಿ ನಕ್ಷತ್ರವಿದ್ದರೆ ಅಥವಾ ರವಿವಾರ ಶುಕ್ರವಾರದಿದ್ದರೆ ಗೋಧಿ, ಅರಿಶಿಣ, ಜೀರಿಗೆ, ಸೀಸ ಇವು ತೇಜಿ ; ಹಾಗೂ ಎಳ್ಳು, ಎಣ್ಣೆ, ಬೆಲ್ಲ,ಹಿಂಗುಗಳು ತೇಜಿಯಲ್ಲಿ ಮುಂದುವರೆಯುತ್ತವೆ.

Join Our Whatsapp Group

ಇವುಗಳನ್ನು ಈ ಮಾಸದಲ್ಲಿ ಸಂಗ್ರಹ ಮಾಡಿ, ಮಾರ್ಗಶಿರ ಮಾಸದಲ್ಲಿ ಮಾಡಿದರೆ ತುಂಬಾ ಲಾಭವಾಗುವುದು. ಶು. ಈ ಮಾಸದ 8 ದಿನ ಸೂರ್ಯ ಚಂದ್ರರು ಸ್ವಚ್ಛವಾಗಿ ಕಾಣುತ್ತಿದ್ದರೆ (ಮೋಡ ಮುಸುಕದೇ ಇದ್ದರೆ) ಈ ದಿನದಿಂದ 5  ತಿಂಗಳಿಗೆ ಸಕಲ ಆಹಾರ ಧಾನ್ಯಗಳು, ನೂಲು, ಸೈಂಧಲವಣ ಇವುಗಳು ತೇಜಿಯಾಗುವವು. ಈ ಮಾಸದಲ್ಲಿ ಬ.30 ಅಮಾವಾಸ್ಯೆ ದಿನ ರವಿವಾರ ಇದ್ದರೆ ಬೆಣ್ಣ,ತುಪ್ಪ, ತೇಜಿ. ಮಂಗಳವಾರ, ಬುಧವಾರ ಇದ್ದರೆ  ಧಾನ್ಯ, ತೇಜಿ. ಶನಿವಾರವಿದ್ದರೆ ಎಳ್ಳು ಎಣ್ಣೆ ತೇಜಿಯು ಶು.8 ಮತ್ತು ಶು. 14 ಈ ದಿನ ಮಂಗಳವಾರ ಬಂದರೆ ಈ ಮಾಸದಲ್ಲಿ ಜೀವನಾವಶ್ಯಕ ವಸ್ತುಗಳಾದ ಆಹಾರ ಸಾಮಗ್ರಿಗಳೆಲ್ಲವೂ ತೇಜಿ .