ಮನೆ ಜ್ಯೋತಿಷ್ಯ ಶ್ರಾವಣ ಮಾಸದ ಫಲವು

ಶ್ರಾವಣ ಮಾಸದ ಫಲವು

0

ಶ್ರಾವಣ ಶು. 7 ತಿಥಿಯ ದಿನ ಮಳೆಯಾದರೆ ಧಾನ್ಯದ ಮಾರಾಟದಲ್ಲಿ ತೇಜಿಯಿಲ್ಲ, ಮಂದಿ ಇದೆ ಇದೇ ಮಾಸದ ಪೂರ್ಣಿಮೆಯ ಶು. 15 ಶ್ರಾವಣ ನಕ್ಷತ್ರವಿದ್ದು, ಆ ದಿನ  ದಿನ ಮಳೆಯಾದರೆ ಧಾನ್ಯದ ಧರಣಿಯಲ್ಲಿ ಮಂದಿ ಕಾಣಿಸುವುದು.

Join Our Whatsapp Group

ಇದೇ ಪೌರ್ಣಿಮೆಯ ದಿನ ಗ್ರಹಣ, ಧೂಮಕೇತು ಮೂಡೋಣ ಮುಂತಾದ ಉತ್ಪಾದನೆಗಳಲ್ಲಿ ಯಾವುದಾದರೂಂದು ಉಂಟಾದರೆ ಧಾನ್ಯಗಳನ್ನೂ, ರಸ ಪದಾರ್ಥಗಳನ್ನು ಸಂಗ್ರಹಿಸಿ ಮೂರು ತಿಂಗಳಲ್ಲಿ ಮಾಡಿದರೆ ಲಾಭವಾಗುವುದು. ಶ್ರಾವಣ ಬ. 11 ತಿಥಿಯು ಇದ್ದ ದಿನ ರೋಹಿಣಿ ನಕ್ಷತ್ರ ಬಂದರೆ ಧಾನ್ಯಗಳನ್ನು ಖರೀದಿಸಿಟ್ಟು ಮಾಘ ಪಾಲ್ಗುಣ ಮಾಸಗಳಲ್ಲಿ ಮಾಡಿದರೆ ಲಾಭವಿದೆ.

ಶು. 5 ಬ 5, ಬ14 ರಂದು ಕ್ರಮವಾಗಿ ರವಿವಾರ,ಮಂಗಳವಾರ, ಶನಿವಾರಗಳು, ಬಂದರೆ ಜೋಳ, ರಾಗಿ,ಗೋಧಿ,ಬೇಳೆ, ಭತ್ತ ಎಳ್ಳು, ಗುರೆಳ್ಳು ಔಡಲ,ಹುರುಳಿ, ಉದ್ದು,  ಹೆಸರು,ಅವರೆ ಅಳಸಂದಿ, ಅಡಿಕೆ,ಮೆಣಸು, ಯಾಲಕ್ಕಿ, ಬೆಲ್ಲ, ಸಕ್ಕರೆ,ಎಣ್ಣೆ, ಮೆಣಸಿನಕಾಯಿ,ತಂಬಾಕು ಇವುಗಳು ಈ ಮಾಸದಲ್ಲಿ ತೇಜಯತ್ತ ಸಾಗುವವು. ಹತ್ತಿ, ಅರಳೆ, ನೂಲು, ರೇಷ್ಮೆ, ಕಂಬಳಿ,ಚರ್ಮ ಇವು ಯಥಾರೀತಿ ತೇಜಿಯಲ್ಲಿರುವವು, ಬೆಳ್ಳಿ, ಬಂಗಾರ, ಕಬ್ಬಿಣ, ತಾಮ್ರ, ಇತ್ಯಾದಿ ಧಾತುಗಳು ಸಮ ಸ್ಥಿತಿಯಲ್ಲಿರುವವವು.