ಮನೆ ರಾಷ್ಟ್ರೀಯ ಅನ್ಯ ಮಹಿಳೆಯ ಜತೆ ಕಾಣಿಸಿಕೊಂಡ ಪತಿ: ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಿದ ಟ್ರಾಫಿಕ್ ಕ್ಯಾಮರಾ!

ಅನ್ಯ ಮಹಿಳೆಯ ಜತೆ ಕಾಣಿಸಿಕೊಂಡ ಪತಿ: ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಿದ ಟ್ರಾಫಿಕ್ ಕ್ಯಾಮರಾ!

0

ತಿರುವನಂತಪುರಂ: ಕೇರಳ ರಾಜ್ಯದ ರಸ್ತೆಗಳಲ್ಲಿ ಅಳವಡಿಸಲಾಗಿರುವ ‘ರೋಡ್ ಸೇಫ್ಟಿ ಕ್ಯಾಮೆರಾದಿಂದಾಗಿ  ಗಂಡ ಹೆಂಡತಿ ನಡುವೆ ಜಗಳಕ್ಕೆ ಕಾರಣವಾಗಿ ಅವರಿಬ್ಬರೂ ದೂರವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

Join Our Whatsapp Group

ಅನ್ಯ ಮಹಿಳೆಯೊಂದಿಗೆ ತಮ್ನ ಪತಿ ಹೆಲ್ಮೆಟ್ ಧರಿಸದೆ ಗಾಡಿಯಲ್ಲಿ ಓಡಾಡುತ್ತಿರುವ ಫೋಟೋವನ್ನು ಸಂಚಾರಿ ಪೊಲೀಸರು ಆತನ ಮನೆಗೆ ಕಳುಹಿಸಿದ್ದು ಈಗ ಅವರ ಸಂಸಾರದಲ್ಲಿ ದೊಡ್ಡ ಬಿರುಗಾಳಿ ಎದ್ದಿದೆ.

ತಿರುವನಂತಪುರಂ ಸಂಚಾರಿ ಪೊಲೀಸರು ಹೆಲ್ಮೆಟ್ ಧರಿಸದೆ ವ್ಯಕ್ತಿ ಓಡಾಡಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಮಹಿಳೆ ಜೊತೆಗಿದ್ದ ಫೋಟೋವನ್ನು ಪೊಲೀಸರು ಅಪ್ಲೋಡ್ ಮಾಡಿದ್ದು ದಂಡ ಕಟ್ಟುವಂತೆ ಮನೆಗೆ ಚಲನ್

ಪರಸ್ತ್ರೀಯೊಂದಿಗೆ ಸುತ್ತಾಡುತ್ತಿರುವ ವಿಚಾರ ತಿಳಿದ ಪತ್ನಿ ನೇರ ಠಾಣೆ ಮೆಟ್ಟಿಲೇರಿದ್ದು ಪತಿ ವಿರುದ್ಧ ದೂರು ನೀಡಿದ್ಧಾಳೆ ಮತ್ತು ಪೊಲೀಸರು ಆತನನ್ನು ಬಂಧಿಸಿದ್ಧಾರೆ.

ಇಡುಕ್ಕಿ ನಿವಾಸಿಯಾದ ವ್ಯಕ್ತಿಯೂ ಏಪ್ರಿಲ್ 25ರಂದು ತಿರುವನಂತಪುರದ ರಸ್ತೆಗಳಲ್ಲಿ ತನ್ನ ಗೆಳತಿಯೊಂದಿಗೆ ಹೆಲ್ಮೆಟ್ ಧರಿಸದೆ ಅಡ್ಡಾಡಿದ್ದ.

ಗಾಡಿ ಹೆಂಡತಿಯ ಹೆಸರಿನಲ್ಲಿದ್ದ ಕಾರಣ ದಂಡ ಪಾವತಿದಸುವಂತೆ ಚಲನ್ಗಳನ್ನು ಮನೆಗೆ ಪೋಸ್ಟ್ ಮೂಲಕ ಕಳುಹಿಸಿದ್ದಾರೆ. ತನ್ನ ಪತಿ ಜೊತೆ ವೇರೊಂದು ಮಹಿಳೆ ಇದ್ದದನ್ನು ನೋಡಿದ ಪತ್ನಿ ಅಘಾತಕ್ಕೊಳಗಾಘಿದ್ದು ಆಕೆ ಯಾರೆಂದು ಪ್ರಶ್ನಿಸಿದ್ದಾಳೆ.

ಪತ್ನಿಯ ಪ್ರಶ್ನೆಗೆ ತಬ್ಬಿಬ್ಬುಗೊಂಡ ಪತಿ ಆ ಮಹಿಳೆಗೂ ನನಗೂ ಯಾವುದೇ ರೀತಿಯ ಸಂಬಂಧ ಇಲ್ಲ. ನಾನು ಅವರಿಗೆ ಲಿಫ್ಟ್ ಕೊಟ್ಟಿದ್ದೇನೆ ಅಷ್ಟೇ ಎಂದು ಹೇಳಿ ನಂಬಿಸಲು ಮುಂದಾಗಿದ್ದಾನೆ.

ಪತಿ ನೀಡಿದ ಜವಾಬಿಗೆ ಸಮಾಧಾನಗೊಳ್ಳದ ಪತ್ನಿ ಜಗಳವಾಡಿ ಅಂತಿಮವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ತನ್ನ ಹಾಗೂ 3 ವರ್ಷದ ಮಗುವಿನ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ಮಹಿಳೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.