ಬೆಂಗಳೂರು(Bengaluru): ನಿದ್ರಿಸುತ್ತಿದ್ದ ಪತ್ನಿಯನ್ನು ಚಾಕುವಿನಿಂದ ಇರಿದು ಪತಿ ಕೊಲೆ ಮಾಡಿರುವ ಘಟನೆ ಯಶವಂತಪುರದ ಮತ್ತಿಕೆರೆ ಬಳಿ ಬುಧವಾರ ನಡೆದಿದೆ.
ಅನುಸೂಯಾ (42) ಕೊಲೆಯಾದ ಮಹಿಳೆ. ಆರೋಪಿ ಧನೇಂದ್ರ (49)ನನ್ನು ಪೊಲೀಸರು ಬಂಧಿಸಿದ್ದಾರೆ. ಟೈಲರಿಂಗ್ ಕೆಲಸ ಮಾಡುತ್ತಿದ್ದ ಧನೇಂದ್ರ ಸಾಲ ಮಾಡಿಕೊಂಡಿದ್ದ. ಈ ವಿಷಯದಲ್ಲಿ ಪತಿ–ಪತ್ನಿ ಮಧ್ಯೆ ಇತ್ತೀಚೆಗೆ ಜಗಳ ನಡೆದಿತ್ತು.
ಬುಧವಾರ ಬೆಳಗ್ಗಿನ ಜಾವ ಪತ್ನಿಗೆ ಚೂರಿಯಿಂದ ಇರಿದ ಧನೇಂದ್ರ, ಬಳಿಕ ತನ್ನ 14 ವರ್ಷದ ಮಗಳ ಮೇಲೂ ಹಲ್ಲೆ ನಡೆಸಿದ್ದ. ತೀವ್ರ ರಕ್ತಸ್ತಾವದಿಂದ ಪತ್ನಿ ಮೃತಪಟ್ಟರೆ, ಮಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.