ಮೈಸೂರು: ಕಾಂತರಾಜ್ ಸಮೀಕ್ಷೆ ಇನ್ನೂ ಸರ್ಕಾರದ ಕೈ ಸೇರಿಲ್ಲ ಆಗಲೇ ಇದಕ್ಕೆ ವಿರೋಧ ಮಾಡೋದು ಎಷ್ಟು ಸರಿ ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಹೆಚ್. ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಎಂಎಲ್ ಸಿ ಹೆಚ್.ವಿಶ್ವನಾಥ್ ಕಾಂತರಾಜ್ ವರದಿ ಸಮೀಕ್ಷೆ ಪರ ಬ್ಯಾಟ್ ಬೀಸಿದ್ದಾರೆ.
ಕಾಂತರಾಜ್ ವರದಿ ಜಾತಿಗಣತಿ ಅಲ್ಲ ಸಮೀಕ್ಷೆ. ಕೇವಲ ಒಂದು ಸಮುದಾಯದ ಪರವಾಗಿ ಮಾಡಿಲ್ಲ. ಪ್ರತಿಯೊಂದು ಸಮುದಾಯದಲ್ಲಿರುವ ಬಡ ಜನರ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಮಾಡಿರುವುದು. ಕಾಂತರಾಜ್ ಸಮೀಕ್ಷೆ ಇನ್ನ ಸರ್ಕಾರದ ಕೈ ಸೇರಿಲ್ಲ ಆಗಲೇ ಇದಕ್ಕೆ ವಿರೋಧ ಮಾಡೋದು ಎಷ್ಟು ಸರಿ. ಕುಮಾರಸ್ವಾಮಿ ಸಿಎಂ ಆಗಿದ್ದವರು, ಆ ರ್ ಅಶೋಕ್ ಡಿಸಿಎಂ ಆಗಿದ್ದವರು. ಏನಾದರು ಹೇಳಿಕೆ ನೀಡುವಾಗ ಸಂವಿಧಾನ ಚೌಕಟ್ಟಿನ ಒಳಗೆ ನೀಡಬೇಕು. ಆರ್ ಅಶೋಕ್ ವಿಪಕ್ಷ ನಾಯಕರಾಗಿದ್ದಾರೆ. ಏನೇನೋ ಹೇಳಿಕೆ ನೀಡೋದಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವ ಆ ಸ್ಥಾನಕ್ಕೆ ತಕ್ಕಂತೆ ಮಾತನಾಡಬೇಕು. ಕಾಂತರಾಜ್ ವರದಿ ಸಮೀಕ್ಷೆಯನ್ನ ರಾಜ್ಯ ಸರ್ಕಾರ ಸ್ವೀಕಾರ ಮಾಡಬೇಕು. ತದ ನಂತರ ಅದನ್ನ ಅಧಿವೇಶನದಲ್ಲಿ ಚರ್ಚಿಸಬೇಕು ಎಂದರು.
ಶಾಸಕರು ಮತ್ತು ಸಚಿವರ ನಡುವೆ ಸಮನ್ವಯತೆ ಕೊರತೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಸಿಎಲ್ ಪಿ ಸಭೆ ಕರೆಯದಿರುವುದೇ ಇದಕ್ಕೆಲ್ಲ ಕಾರಣ. ಶಾಸಕರು ತಮ್ಮ ಅಭಿಪ್ರಾಯಗಳನ್ನ ಹೇಳುವ ಹಾಗೆಯೇ ಇಲ್ಲವಾ? ಸಚಿವರು ಶಾಸಕರಿಗೆ ಸ್ಪಂದಿಸದಿದ್ದಾಗ ಹೇಳಿಕೆ ನೀಡುತ್ತಾರೆ. ಕೆಲವೊಂದು ವಿಚಾರಗಳನ್ನ ಪಕ್ಷದ ಚೌಕಟ್ಟಿನ ಒಳಗೆ ಮಾತನಾಡಬೇಕು. ಬಿ. ಆರ್ ಪಾಟೀಲ್ ರನ್ನ ಸಿಎಂ ಕರೆದು ಮಾತನಾಡಿದ್ದಾರೆ. ಎಲ್ಲವು ಸರಿ ಹೋಗಿದೆ ಎಂದು ತಿಳಿಸಿದರು.