ಮನೆ ರಾಷ್ಟ್ರೀಯ ಯೂಟ್ಯೂಬ್ ನೋಡಿ ಶೂಟಿಂಗ್ ಅಬ್ಯಾಸ ಮಾಡಿದ ಬಾಬಾ ಸಿದ್ದಿಕಿ ಹಂತಕರು

ಯೂಟ್ಯೂಬ್ ನೋಡಿ ಶೂಟಿಂಗ್ ಅಬ್ಯಾಸ ಮಾಡಿದ ಬಾಬಾ ಸಿದ್ದಿಕಿ ಹಂತಕರು

0

ಮಹಾರಾಷ್ಟ್ರ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದ ಆರೋಪಿಗಳು ಯೂಟ್ಯೂಬ್ ನೋಡಿ ಶೂಟಿಂಗ್ ಅಭ್ಯಾಸ ಮಾಡಿದ್ದರು ಎನ್ನುವ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.

Join Our Whatsapp Group

ಗುರ್ಮೈಲ್ ಸಿಂಗ್ ಮತ್ತು ಧರ್ಮರಾಜ್ ಕಶ್ಯಪ್ ಅವರು ಯೂಟ್ಯೂಬ್ ವೀಡಿಯೊಗಳನ್ನು ನೋಡುವ ಮೂಲಕ ಶೂಟ್ ಮಾಡಲು ಕಲಿತಿದ್ದರು ಎಂದು ಮುಂಬೈ ಪೊಲೀಸರು ಹೇಳಿದ್ದಾಗಿ ಮಾಡಿದೆ.

ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು  ಮುಂಬೈ ಪೊಲೀಸರು ಬಂಧಿಸಿದ್ದು, ಮೂವರು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಹಲವು ತಂಡಗಳನ್ನು ರಚಿಸಲಾಗಿದೆ. ಮುಂಬೈ ಪೊಲೀಸರ ಅಪರಾಧ ವಿಭಾಗವು ಪ್ರಕರಣದ ತನಿಖೆ ನಡೆಸುತ್ತಿದೆ ಮತ್ತು 7.62 ಎಂಎಂ ಗನ್ ಇರುವ ಕಪ್ಪು ಬ್ಯಾಗ್​ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆಯುವ 25 ದಿನಗಳ ಮೊದಲು ಶೂಟರ್‌ಗಳು ಅವರ ನಿವಾಸ ಮತ್ತು ಕಚೇರಿ ಎದುರು ಓಡಾಡಿದ್ದರು. ಮುಂಬೈನಲ್ಲಿ ಮ್ಯಾಗಜೀನ್ ಇಲ್ಲದೆ ಶೂಟಿಂಗ್ ಅಭ್ಯಾಸ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕ್ರಮ್ ಪುಣೆಯಲ್ಲಿ ಸ್ಕ್ರ್ಯಾಪ್ ಡೀಲರ್ ಆಗಿ ಕೆಲಸ ಮಾಡುತ್ತಿದ್ದು, ಪಿತೂರಿಯ ಭಾಗವಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ಮೂವರು ಆರೋಪಿಗಳ ಪೈಕಿ ಇಬ್ಬರು ಆರೋಪಿಗಳಾದ ಧರ್ಮರಾಜ್ ಮತ್ತು ಶಿವಪ್ರಸಾದ್ ಗೌತಮ್ ಅವರು ಬಾಲಕ್ರಮ್ ಅವರ ಸ್ಕ್ರ್ಯಾಪ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.

ಬಾಬಾ ಸಿದ್ದಿಕ್ (66) ಅವರನ್ನು ಮುಂಬೈನ ನಿರ್ಮಲ್ ನಗರ ಪ್ರದೇಶದಲ್ಲಿ ಅವರ ಶಾಸಕ ಪುತ್ರ ಜೀಶಾನ್ ಸಿದ್ದಿಕ್ ಅವರ ಕಚೇರಿಯ ಹೊರಗೆ ಮೂವರು ವ್ಯಕ್ತಿಗಳು ಶನಿವಾರ ರಾತ್ರಿ ಗುಂಡಿಕ್ಕಿ ಕೊಂದಿದ್ದಾರೆ. ಕೂಡಲೇ ಅವರನ್ನು ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಅವರನ್ನು ಭಾನುವಾರ ಅಂತ್ಯಕ್ರಿಯೆ ಮಾಡಲಾಯಿತು.