ಮನೆ ರಾಷ್ಟ್ರೀಯ ಕಾಂಗ್ರೆಸ್​ ಪಕ್ಷದ ಬಹುನಿರೀಕ್ಷಿತ ಚುನಾವಣಾ ಪ್ರಣಾಳಿಕೆ ಬಿಡುಗಡೆ

ಕಾಂಗ್ರೆಸ್​ ಪಕ್ಷದ ಬಹುನಿರೀಕ್ಷಿತ ಚುನಾವಣಾ ಪ್ರಣಾಳಿಕೆ ಬಿಡುಗಡೆ

0

ನವದೆಹಲಿ: ಕಾಂಗ್ರೆಸ್​ ಪಕ್ಷವು ಇಂದು (ಶುಕ್ರವಾರ) ಬಹುನಿರೀಕ್ಷಿತ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿದೆ.

Join Our Whatsapp Group

ಕಾಂಗ್ರೆಸ್ ಪ್ರಣಾಳಿಕೆ ಕುರಿತು ಮಾತನಾಡಿದ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ , “ನಮ್ಮ ಈ ಪ್ರಣಾಳಿಕೆಯು ದೇಶದ ರಾಜಕೀಯ ಇತಿಹಾಸದಲ್ಲಿ ‘ನ್ಯಾಯ್ ಕಾ ದಾಸ್ತಾವೇಜ್’ ಯಾಗಲೂ ನೆನಪಿನಲ್ಲಿ ಉಳಿಯುತ್ತದೆ ಎಂದು ತಿಳಿಸಿದರು.

ವಿದ್ಯುನ್ಮಾನ ಮತಯಂತ್ರ ಇವಿಎಂ ದಕ್ಷತೆ ಮತ್ತು ಬ್ಯಾಲೆಟ್ ಪೇಪರ್‌ನಲ್ಲಿ ಪಾರದರ್ಶಕತೆಯನ್ನು ತರಲು ನಾವು ಚುನಾವಣಾ ಕಾನೂನುಗಳನ್ನು ತಿದ್ದುಪಡಿ ಮಾಡುತ್ತೇವೆ ಎಂದು ಕಾಂಗ್ರೆಸ್​​​​ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ​ ಮತದಾನವು ಇವಿಎಂ ಮೂಲಕವೇ ನಡೆಯುತ್ತದೆ ಆದರೆ, ಮತದಾರನು ಯಂತ್ರ – ರಚಿತ ಮತದಾನದ ಚೀಟಿಯನ್ನು ಮತದಾರ ಪರಿಶೀಲಿಸಬಹುದಾಗಿರುವಂತೆ ರೂಪಿಸಲಾಗುತ್ತದೆ. ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಘಟಕದಲ್ಲಿ ಅದನ್ನು ಹಿಡಿದಿಟ್ಟುಕೊಳ್ಳಲು ಮತ್ತು ಠೇವಣಿ ಮಾಡಲು ಸಾಧ್ಯವಾಗುವಂತೆ ರೂಪಿಸಲಾಗುತ್ತದೆ. ಎಲೆಕ್ಟ್ರಾನಿಕ್ ಮತ ಎಣಿಕೆಯನ್ನು ವಿವಿಪ್ಯಾಟ್ ಸ್ಲಿಪ್ ಟ್ಯಾಲಿ ಮಾಡಲಾಗುತ್ತದೆ ಎಂದು ಕಾಂಗ್ರೆಸ್​ ದೇಶದ ಜನರಿಗೆ ಭರವಸೆ ನೀಡಿದೆ.

ಆಹಾರ ಮತ್ತು ಉಡುಗೆ, ಪ್ರೀತಿಸುವುದು ಮತ್ತು ಮದುವೆಯಾಗುವುದು ಹಾಗೂ ಭಾರತದ ಯಾವುದೇ ಭಾಗದಲ್ಲಿ ಪ್ರಯಾಣಿಸಲು ಮತ್ತು ವಾಸಿಸಲು ವೈಯಕ್ತಿಕ ಆಯ್ಕೆಗಳಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ನಾವು ದೇಶದ ಜನರಿಗೆ ಭರವಸೆ ನೀಡುತ್ತೇವೆ ಎಂದು ಕಾಂಗ್ರೆಸ್​ ಹೇಳಿದೆ.

ವೈಯಕ್ತಿಕ ಸ್ವಾತಂತ್ರ್ಯಕ್ಕೆ ವಿನಾಕಾರಣ ಅಡ್ಡಿಪಡಿಸುವ ಎಲ್ಲಾ ಕಾನೂನುಗಳು ಮತ್ತು ನಿಯಮಗಳನ್ನು ರದ್ದುಗೊಳಿಸಲಾಗುವುದು ಎಂದು ಘೋಷಿಸಿದೆ. ನಾವು ಸಂವಿಧಾನದ ಹತ್ತನೇ ಶೆಡ್ಯೂಲ್ ಅನ್ನು ತಿದ್ದುಪಡಿ ಮಾಡುತ್ತೇವೆ ಮತ್ತು ಪಕ್ಷಾಂತರವನ್ನು (ಎಂಎಲ್ಎ ಅಥವಾ ಎಂಪಿ ಆಯ್ಕೆಯಾದ ಮೂಲ ಪಕ್ಷವನ್ನು ಬಿಟ್ಟು) ಸದಸ್ಯತ್ವದ ಸ್ವಯಂಚಾಲಿತ ಅನರ್ಹಗೊಳಿಸುವುದಾಗಿ ಭರವಸೆ ನೀಡುತ್ತೇವೆ ಎಂದು ಕಾಂಗ್ರೆಸ್​ ಪ್ರಕಟಿಸಿದೆ.

ಹಿಂದಿನ ಲೇಖನಸತತ ಏಳನೇ ಬಾರಿಗೆ ರೆಪೋ ದರ ಬದಲಾವಣೆ ಇಲ್ಲ: ಆರ್ ಬಿಐ ನಿರ್ಧಾರ
ಮುಂದಿನ ಲೇಖನಚುನಾವಣಾ ಕರ್ತವ್ಯ ನಿರ್ಲಕ್ಷ್ಯ ಆರೋಪ: ಉಪನ್ಯಾಸಕ ಅಮಾನತು