ಮನೆ ಸುದ್ದಿ ಜಾಲ ಸಮಾಜದ ಆರೋಗ್ಯಕ್ಕೆ ಪೂರಕವಾಗಿ ಮಾದ್ಯಮಗಳು ಕೆಲಸ ಮಾಡಬೇಕು: ಹೆಚ್.ವಿಶ್ವನಾಥ್

ಸಮಾಜದ ಆರೋಗ್ಯಕ್ಕೆ ಪೂರಕವಾಗಿ ಮಾದ್ಯಮಗಳು ಕೆಲಸ ಮಾಡಬೇಕು: ಹೆಚ್.ವಿಶ್ವನಾಥ್

0

ಮೈಸೂರು(Mysuru): ಸಮಾಜದ ಆರೋಗ್ಯಕ್ಕೆ ಪೂರಕವಾಗಿ ಮಾದ್ಯಮಗಳು ಕೆಲಸ ಮಾಡಬೇಕು ಸಮಾಜದ ಸತ್ವವನ್ನು ಹಾಳುಮಾಡುವಂತಾಗಬಾರದು ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ನುಡಿದರು.

ಮೈಸೂರಿನ ಮಾನಸ ಗಂಗೋತ್ರಿಯ ಪತ್ರಿಕೋದ್ಯಮ ವಿಭಾಗದಿಂದ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ  ಹೆಚ್.ವಿಶ್ವನಾಥ್ ಅವರೊಂದಿಗೆ ಪ್ರಚಲಿತ ವಿದ್ಯಮಾನಗಳ, ರಾಜಕೀಯ , ಪತ್ರಿಕೋದ್ಯಮ ಸಂವಾದ ಕಾರ್ಯಕ್ರಮ ಆಯೋಜಿಸಿತ್ತು. ಸಂವಾದದಲ್ಲಿ ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪುಟ್ಟಸ್ವಾಮಿ  ಸೇರಿದಂತೆ ವಿದ್ಯಾರ್ಥಿಗಳು ಪ್ರಾಧ್ಯಾಪಕರು ಭಾಗಿಯಾಗಿದ್ದರು.

ಸಂವಾದದಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್,  ಸ್ಟೂಡೆಂಟ್ ಲೀಡಗಳಾಗಿದ್ದವರು ರಾಜಕೀಯಕ್ಕೆ ಬರುತ್ತಿದ್ದರು. ಈಗ ಸ್ಟೂಡೆಂಟ್ ಯೂನಿಯನ್ ಎಲೆಕ್ಸನ್ ರದ್ದು ಯಾಕೆ ಮಾಡಿದರು ಗೊತ್ತಿಲ್ಲ. ಸ್ಟೂಡೆಂಟ್ ಲೀಡರ್ ಆಗಿದ್ದವರು ರಾಜಕೀಯದಲ್ಲಿ ಸಾಕಷ್ಟು ಯಶಸ್ಟಿ ಆಗಿದ್ದಾರೆ. ದೆಹಲಿ, ಜವಹರಲಾಲ್ ವಿವಿಗಳಲ್ಲಿ ಈಗಲೂ ಎಲಕ್ಷನ್ ಇದೆ. ಪತ್ರಿಕೋದ್ಯಮ ಜನತಂತ್ರ ವ್ಯವಸ್ಥೆ ಬಹಳ ದೊಡ್ಡ ಪಾತ್ರ ಇದೆ. ಇದು ನಾಲ್ಕನೆ ಅಂಗ. ಮೂರು ಅಂಗಳ ತಪ್ಪು ಒಪ್ಪುಗಳನ್ನು ತಿವಿದು ಸರಿ ಮಾಡುವುದೇ ಈ ಪತ್ರಿಕಾರಂಗ. ಗ್ರೀನ್ ರೆವಲೂಷನ್ ಗೆ ಆಕಾಶವಾಣಿ ಸಾಕಷ್ಟು ಕೆಲಸ ಮಾಡಿದೆ. ಇಂದು ಅದನ್ನ ಮರೆತಿದ್ದೇವೆ. ಮಾದ್ಯಮ ಕೂಡ ದೇಶದ ಬೆಳವಣಿಗೆಗೆ ಪೂರಕ ಕೆಲಸ ಮಾಡಿದೆ.  ಆದರೆ ಈಗ ಎಲ್ಲ ಅವಸರ ಅವಸರ ಇದೆ. ಮೊದಲು ನಾನು ವರದಿ ಕೊಡಬೇಕು ಎಂಬ ಕಾಂಪಿಟೇಷನ್ ಏರ್ಪಟ್ಟಿದೆ ಎಂದು ಬೇಸರಿಸಿದರು.

ಧೈರ್ಯದಿಂದ ಯುದ್ದ ಭೂಮಿಯಲ್ಲಿ ನಿಂತು ವರದಿ ಮಾಡುವುದು ಸುಲಭ ಅಲ್ಲ‌. ಮಾದ್ಯಮಗಳು ಸಮಾಜ ಆರೋಗ್ಯಕ್ಕೆ ಪೂರಕವಾಗಿ ಕೆಲಸ ಮಾಡಬೇಕು. ಎಂದು ಹೆಚ್.ವಿಶ್ವನಾಥ್ ಸಲಹೆ ನೀಡಿದರು.