ಮನೆ ಸ್ಥಳೀಯ ಸಂತಸ ಕವಿಗೋಷ್ಠಿಗೆ ಆಗಮಿಸಿದ ಕವಿಗಳಿಗೆ ಸಚಿವರಿಂದ ಗೌರವ ಸನ್ಮಾನ

ಸಂತಸ ಕವಿಗೋಷ್ಠಿಗೆ ಆಗಮಿಸಿದ ಕವಿಗಳಿಗೆ ಸಚಿವರಿಂದ ಗೌರವ ಸನ್ಮಾನ

0

ಮೈಸೂರು:  ಸಾಹಿತ್ಯ ಕ್ಷೇತ್ರದ ಎಲ್ಲಾ ಸಾಹಿತ್ಯ ದಿಗ್ಗಜರು ಒಂದೆಡೆ ಸೇರಿ ಸಾಹಿತ್ಯ ಹನಿಗವನ ಚುಟುಕು ಜುಗಲ್ ಬಂದಿಯ ಮೂಲಕ ನಗೆಯ ಹೋನಲಿಗೆ ಕರೆದೋಯ್ದ ಕವಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್. ಸಿ. ಮಹದೇವಪ್ಪ ಅವರು ಗೌರವ ಸನ್ಮಾನ ಮಾಡಿದರು.

Join Our Whatsapp Group

ಇಂದು ನಾಡಹಬ್ಬ ದಸರಾ ಮಹೋತ್ಸವವು ರಾಜ್ಯಾದ್ಯಂತ ಬಹುಮುಖಿಯಾಗಿ ಹರಡಿಕೊಂಡಿದ್ದು, ಅದರ ಒಂದು ಭಾಗವಾಗಿ, ಮೈಸೂರು ದಸರಾ ಕವಿಗೋಷ್ಠಿ ಉಪಸಮಿತಿ ವತಿಯಿಂದ ನಗರದ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಲಾಗಿದ್ದ ಸಂತಸ ಕವಿಗೋಷ್ಠಿಯನ್ನು ಹಿರಿಯ ಸಾಹಿತಿಗಳಾದ ನಾಡೋಜಾ ಹಂಪಾ ನಾಗರಾಜಯ್ಯ ಅವರು ಉದ್ಘಾಟಿಸಿದರು.

ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಬಸವರಾಜ ಸಾದಾರ ಅವರು, ಇಂದಿನ ಕವಿಗೋಷ್ಠಿಯು ಬಹಳ ಸಂತೋಷದಿಂದ ಆಯೋಜನೆಗೊಂಡಿದ್ದು, ಈ ರೀತಿಯ ಹಾಸ್ಯ ಸಂತಸ ಕವಿ ಗೋಷ್ಠಿಯನ್ನು ಸರ್ಕಾರ ಹೆಚ್ಚು ಹೆಚ್ಚು ಆಯೋಜಿಸಬೇಕು. ಜಗತ್ತಿನಲ್ಲಿ ಎಲ್ಲಾ ಮಾದರಿಯ ಮಹಾಕಾವ್ಯಗಳಿವೆ ಆದರೆ ಹಾಸ್ಯಮಯಉಳ್ಳ ಮಹಾಕಾವ್ಯ ಇನ್ನೂ ರಚನೆಗೊಂಡಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.

ದಸರಾ ಕವಿಗೋಷ್ಠಿ ಪಂಚ ಕಾವ್ಯೋತ್ಸವದ ಮೂರನೇ ದಿನವಾದ ಇಂದು ಸಂತಸ ಕವಿ ಗೋಷ್ಠಿಯಲ್ಲಿ ವೈ. ವಿ ಗುಂಡೂರವ್ ಅವರ ನೇತೃತ್ವದ ಎರಡು ತಂಡಗಳ ಸದಸ್ಯರು ಕನ್ನಡ ನಾಡು- ನುಡಿ ಅಂದು ಮತ್ತು ಇಂದು, ಮಕ್ಕಳು ಮತ್ತು ಶಿಕ್ಷಣ ಹಾಗೂ ಮಹಿಳೆಯರ ಸ್ಥಾನಮಾನ ವಿಷಯಾಧಾರಿತ ಒಟ್ಟು ಮೂರು ಸುತ್ತುಗಳಲ್ಲಿ ಹಾಸ್ಯ ಜುಗಲ್ಬಂದಿಯನ್ನು ಕಟ್ಟಿಕೊಡಲಾಗಿತ್ತು.

ಕನ್ನಡ ನಾಡು-ನುಡಿ ಅಂದು ಮತ್ತು ಇಂದು:

ಚುಟುಕು ಕವನ ವಾಚನದ ಜುಗಲ್ ಬಂದಿಯ ಮೊದಲನೇ ಸುತ್ತಾದ ಕನ್ನಡ ನಾಡು ನುಡಿ ಅಂದು ಮತ್ತು ಇಂದು ಎಂಬ ಸುತ್ತಿನಲ್ಲಿ, ನವೆಂಬರ್ ಒಂದರoದು ಕನ್ನಡಿಗರಾಗದೆ ನಂಬರ್ ಒನ್ ಕನ್ನಡಿಗರಾಗಬೇಕು. ಕರ್ನಾಟಕದಲ್ಲಿ ಕನ್ನಡ ಸಂಸ್ಕೃತಿ ನೆಲೆಯೂರಿದೆ ಇದಕ್ಕೆ ಉದಾಹರಣೆಯೇ ನಮ್ಮ ಹಂಪೆ, ಬೇಲೂರು ಎಂಬoತೆ ಕರ್ನಾಟಕದಲ್ಲಿ ಪ್ರತಿಯೊಬ್ಬರೂ “ಓಬಮಾ” ಅಂದರೆ ಕನ್ನಡವನ್ನು ಓದುವುದು, ಬರೆವುದು ಮತ್ತು ಮಾತನಾಡುವುದು ಎಂಬ ತಂತ್ರಗಳನ್ನು ಪ್ರತಿಯೊಬ್ಬ ಕನ್ನಡಿಗರು ಅಳವಡಿಸಿಕೊಳ್ಳಬೇಕು ಎಂಬ ಸಂದೇಶವನ್ನು ಸಾರಿದರು.

ಮಕ್ಕಳು ಮತ್ತು ಶಿಕ್ಷಣ:

ಚುಟುಕು ಕವನ ವಾಚನದ ೨ ನೇ ಸುತ್ತಾದ ಮಕ್ಕಳು ಮತ್ತು ಶಿಕ್ಷಣ ಕುರಿತಾಗಿ ಪ್ರಸ್ತುತ ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯನ್ನು ಇಂದಿನ ಮಕ್ಕಳ ಮೊಬೈಲ್ ಬಳಕೆಯ ಶಿಕ್ಷಣದ ಬಗ್ಗೆ, ಶಾಲೆಯಲ್ಲಿ ಮೊದಲು ಶಿಕ್ಷಕರು ಬರೆದಂತಹ ಅಕ್ಷರಗಳನ್ನ ಕಾಪಿ ಮಾಡಿ ಅಂತ ಹೇಳುವ ಶಿಕ್ಷಕರು ಪರೀಕ್ಷೆಯಲ್ಲಿ ಕಾಪಿ ಮಾಡಲು ಬಿಡದಿರುವುದು, ಎಕ್ಸಾಮ್ ಹಾಲ್ ನಲ್ಲಿ ಮಕ್ಕಳು ಕಾಪಿ ಮಾಡಿ ಬರೆಯುವ ಪರಿಯನ್ನು ಕವಿರತ್ನ ಕಾಳಿದಾಸ ಚಿತ್ರದ ಗೀತೆಯನ್ನು ‘ಕಾಪಿರತ್ನ ಕಾಳಿದಾಸ’ ಎಂಬ ಗೀತೆಯನ್ನು ಹಾಸ್ಯಮಾಯವಾಗಿ ವರ್ಣಿಸಿದ್ದು ನೆರೆದಿದ್ದವರ ಮುಖದಲ್ಲಿ ಮಂದಹಾಸ ಬೀರಲು ಕಾರಣವಾಯಿತು.

ಮಹಿಳೆಯರ ಸ್ಥಾನಮಾನ:

 ಇತ್ತೀಚೆಗೆ ಮಹಿಳೆಯರ ಹಾವ ಭಾವ, ದೇಹ ಸಮಾತೋಲನೆ ಕುರಿತು ಕಹಳೆ ಊದಿದರೆ ಚಂದ ಮಹಿಳೆ ಊದದಿದ್ದರೆ ಚಂದ ಎಂದು ಮಹಿಳೆ ಕುರಿತು ಹಾಸ್ಯಸ್ಪದವಾಗಿ ಕವನ ವಾಚಿಸದ ಪರಿ ಅಲ್ಲಿದ್ದವರ ಮುಖದಲ್ಲಿ ನಗು ತರಿಸಿತು.

ಮುಖ್ಯ ಅತಿಥಿಗಳಾದ ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ. ಲತಾ ರಾಜಶೇಖರ್ ಅವರು ಮಾತನಾಡಿ, ಎಲ್ಲಾ ಸಮಸ್ಯೆಗಳಿಗೆ ನಗು ಎಂಬುದು ಮಾನಸಿಕ ಔಷಧಿಯಾಗಿದೆ. ಜಗತ್ತಿನಲ್ಲಿ ಸಾಕ್ರೆಟಿಸ್ ನಿಂದ ಹಿಡಿದು ಗಾಂಧಿ ವರೆಗೂ ಹಾಸ್ಯದಲ್ಲಿ ಆಸಕ್ತಿ ಇರುವವರನ್ನು ಕಾಣಬಹುದು.

ಸಂತಸ ಕವಿಗೂಷ್ಠಿಯು ಸಾಹಿತ್ಯದ ಒಂದು ಪ್ರಕಾರವಾಗಿದೆ. ವಿನೋದ ಎಲ್ಲರಿಗೂ ಬೇಕು. ಸ್ವಲ್ಪ ಹೊತ್ತು ಮೈಮರೆತು ಮುಖದಲ್ಲಿ ನಗೆ ತುಂಬಲು ಬಯಸದವನು ಎಷ್ಟು ದುಃಖಿಯೋ! ನಗೆ ಆರೋಗ್ಯವಂತಿಗೆಯ ಲಕ್ಷಣ. ಹೃದಯದ ನಿರ್ಮಲ ಭಾವ ಮುಖದಲ್ಲಿ ಪ್ರಫುಲ್ಲಿತಗೊಳ್ಳುತ್ತದೆ. ಮನುಷ್ಯ ಯಾವ ಪರಿಸ್ಥಿತಿಯಲ್ಲಿ, ಯಾವ ಮೂಡಿನಲ್ಲಿದ್ದರೂ ಅವನ ಹೃದಯವನ್ನು ಹಗುರಗೊಳಿಸಬಲ್ಲ ಸಾಹಿತ್ಯದ ಯಾವುದೇ ತುಣುಕು ಹಾಸ್ಯವೆನಿಸುತ್ತದೆ. ಇದರಲ್ಲಿ ವ್ಯಕ್ತಿಯ ಸ್ಥಿತ ಭಾವವನ್ನು ಬದಿಗೆ ಸರಿಸಿ ನಗೆ ಬುಗ್ಗೆಯನ್ನು ಎಬ್ಬಿಸುವ ಸಾಮರ್ಥ್ಯವಿರುತ್ತದೆ ಎಂದರು.

ನಗು ಎಂಬುದು ಪ್ರತಿಯೊಬ್ಬ ಮನುಷ್ಯನಿಗೆ ಅತ್ಯಂತ ಅವಶ್ಯಕತೆಯಿದ್ದು, ಮನುಷ್ಯ ಎಷ್ಟೇ ಅಲಂಕಾರ ಮಾಡಿಕೊಂಡರು ನಗು ಎಂಬ ಆಭರಣ ಇಲ್ಲದಿದ್ದರೆ ಅಲಂಕಾರ ಪೂರ್ಣಗೊಳ್ಳುವುದಿಲ್ಲ. ಆದ್ದರಿಂದ ನಗುವೇ ಸ್ವರ್ಗ ಅಳುವೇ ನರಕ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ. ಎಂ. ಗಾಯತ್ರಿ, ಅಪರ ಜಿಲ್ಲಾಧಿಕಾರಿಗಳಾದ ಪಿ. ಶಿವರಾಜು, ಕವಿಗೋಷ್ಠಿ ಉಪ ಸಮಿತಿ ಕಾರ್ಯಾಧ್ಯಕ್ಷರಾದ ಪ್ರೊ.ಎನ್.ಕೆ.ಲೋಲಾಕ್ಷಿ, ಉಪ ವಿಶೇಷಾಧಿಕಾರಿ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಕಾರ್ಯದರ್ಶಿ ಸಿ.ಕೃಷ್ಣ, ಅಧಿಕಾರೇತರ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತಿತರರು ಹಾಜರಿದ್ದರು.