ಮನೆ ಜ್ಯೋತಿಷ್ಯ ಮಾಘ ಮಾಸದ ಪಲ

ಮಾಘ ಮಾಸದ ಪಲ

0

ಶು.15ರಂದು ಮಾಘಾ ನಕ್ಷತ್ರ ಶು 3  ರರಂದು ಶತತಾರಾ ನಕ್ಷತ್ರ ಹಾಗೂ ಚೌತಿ ಶು. 4 ಈ ತಿಥಿಗಳೊಳಗೆ ಯಾವುದಾದರೂಂದು ತಿಥಿಯು ಉಪರಿ ಲೋಪ ಬಂದರೆ ನಿತ್ಯೋ ಪಯೋಗಿ ವಸ್ತುಗಳಾದ,ಧಾನ್ಯಗಳೂ, ಹತ್ತಿ, ಅರಳೆ, ಲೋಹಗಳ ಧಾರಣೆಯಲ್ಲಿ ವಿಪರೀತ ತೇಜಿ ಇಲ್ಲವೆ ಮಂದಿ ಯಾಗುವುದು.

ಅಂದರೆ 1-2 ದಿನ ತೇಜಿ,ಮತ್ತೆ ಮಂದಿ ಹೀಗೆ ಅನಿಶ್ವಿತ ಧರಣಿಯಾಗಿ ವ್ಯಾಪಾರದಲ್ಲಿ ಗಡಿಬಿಡಿಯುಂಟಾಗುವದು. ಶು. 5 ಶು. 7 ಈ ತಿಥಿಗಳು  ರವಿವಾರ, ಮಂಗಳವಾರ ಬಂದರೆ ಗೋಧಿ, ಹಕ್ಕಿ,  ಹೆಸರು, ಅಕ್ಕಡಿಕಾಳು, ತೈಲ ಪದಾರ್ಥಗಳು ಮಾಘ ಮಾಸದಿಂದ 5 ನೇ ತಿಂಗಳಿಗೆ ವಿಶೇಷ ತೆಜೀಯು ಬ. 5-6-7 ಈ ತಿಥಿಗಳ ದಿನ ಶುಕ್ರ ಶನಿ ಸೋಮವಾರಗಳು ಬಂದರೆ ಗೋಧಿ. ಹೆಸರು, ಅಕ್ಕಿ, ಅಲಸಂದಿ, ಇವು ಮುಂದೆ ಚೈತ್ರ ವೈಶಾಖದಲ್ಲಿ ತೇಜಿಯು.

    ಮಾಘ ಶು. 1 ತಿಥಿಯು ಬುಧವಾರ ಬಂದರೆ ಧಾನ್ಯಗಳು ತೇಜಿಯಲ್ಲಿ ಮಾರುತ್ತವೆ. ಇದೆ ತಿಥಿ ದಿವಸ ಆಕಾಶದಲ್ಲಿ ಮೋಡ ಮುಂತಾದವುಗಳೇನೂ ಇಲ್ಲದೇ, ಗಾಳಿ ಮಾತ್ರ ಬೀಸಿದರೆ ಸುಗಂಧ ದವ್ಯಗಳು ತೇಜಿಯಾಗಿ ಮಾರುತ್ತವೆ. ಮಾಘ ಶ.3 ತಿಥಿಯ ದಿವಸ  ಮಳೆಯಾಗದೇ, ಕೇವಲ ಮೇಘ ಗರ್ಜನೆಯಾದರೆ ಗೋದಿ, ಜವೆ,  ಗೋಧಿಗಳನ್ನುಈ ಮಾಸದಲ್ಲಿ ಖರೀದಿಸಿಟ್ಟು ಮುಂದೆ ಮಾರಿದರೆ ತುಂಬಾ ಲಾಭವಿದೆ. ಮಾಘ ಶು. 4 ತಿಥಿಯ ದಿವಸ ಮಳೆಯಾದರೆ ತೆಂಗು, ತೆಂಗಿನ  ಪದಾರ್ಥಗಳು ತೇಜಿಯಲ್ಲಿ ಮುನ್ನಡೆಯುವುವು.