ಮನೆ ಮನರಂಜನೆ ರವಿ ಬಸ್ರೂರು ನಿರ್ದೇಶನದ ‘ಕಡಲ್’ ಸಿನಿಮಾ ಜ.19ಕ್ಕೆ ಬಿಡುಗಡೆ

ರವಿ ಬಸ್ರೂರು ನಿರ್ದೇಶನದ ‘ಕಡಲ್’ ಸಿನಿಮಾ ಜ.19ಕ್ಕೆ ಬಿಡುಗಡೆ

0

ಚಂದನವನದ ಖ್ಯಾತ ಸಂಗೀತ ನಿರ್ದೇಶಕದ ರವಿ ಬಸ್ರೂರು ಸಂಗೀತ ನಿರ್ದೇಶಕರಾಗಿ ಈಗಾಗಲೇ ಸೈ ಎನಿಸಿಕೊಂಡಿದ್ದು ಗೊತ್ತೆ ಇದೆ. ಇದರ ನಡುವೆಯೂ ಗರ್ ಗರ್ ಮಂಡಲ, ಬಿಲಿಂದರ್, ಕಟಕ, ಗಿರ್ಮಿಟ್ ಸಿನಿಮಾ ನಿರ್ದೇಶನ ಮಾಡಿ ಜನರ ಮೆಚ್ಚುಗೆ ಗಳಿಸಿರುವ ಇವರು ಇದೀಗ ಕರಾವಳಿ ಬದುಕನ್ನು ಆಯ್ದುಕೊಂಡು ಮತ್ತೊಂದು ಸಿನಿಮಾದ ನಿರ್ದೇಶಕರಾಗಿ ಪ್ರೇಕ್ಷಕರ ಮುಂದೆ ಬಂದಿದ್ದು, ‘ಕಡಲ್’ ಸಿನಿಮಾದ ಟ್ರೇಲರ್ ಇದೀಗ ಬಿಡುಗಡೆಗೊಂಡಿದೆ.

ಅವರ ನಿರ್ದೇಶನದ ಹೊಸ ಸಿನಿಮಾ ‘ಕಡಲ್’ ಜನವರಿ 19ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ರವಿ ಬಸ್ರೂರು ಮ್ಯೂಸಿಕ್ ಚಾನಲ್‌ ನಲ್ಲಿ ಸಂಕ್ರಾಂತಿ ಹಬ್ಬದ ದಿನದಂದು ಟ್ರೇಲರ್ ಬಿಡುಗಡೆಯಾಗಿದೆ.

ಇದು ಮೀನುಗಾರರ, ಕರಾವಳಿ ಬದುಕಿನ ಸುತ್ತ ಹೆಣೆದ ಕಥೆಯಾಗಿದ್ದು, ಪ್ರೀತಿ, ಪ್ರೇಮ ದ್ವೇಷದ ಸುತ್ತಲೂ ಕಥೆ ಸಾಗುತ್ತದೆ. ಓಂಕಾರ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ಈ ಸಿನಿಮಾಕ್ಕೆ ಎನ್‌.ಎಸ್ ರಾಜ್ ಕುಮಾರ್ ಬಂಡವಾಳ ಹೂಡಿದ್ದು, ಸಚಿನ್ ಬಸ್ರೂರು ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ನಿರ್ದೇಶಕರಾಗಿ, ಸಂಗೀತ ನಿರ್ದೇಶಕರಾಗಿ ಹಾಗೂ ಸಂಕಲನಕಾರರಾಗಿ ರವಿ ಬಸ್ರೂರು ಅವರೇ ಕಾಣಿಸಿಕೊಂಡಿದ್ದಾರೆ.

ಈ ಸಿನಿಮಾದಲ್ಲಿ ನಾಯಕ ನಟನಾಗಿ ಸೌರಭ ಭಂಡಾರಿ, ನಾಯಕಿಯಾಗಿ ಚಿರಾಶ್ರೀ ಕಾಣಿಸಿಕೊಂಡಿದ್ದು, ಸುಚನ್ ಶೆಟ್ಟಿ, ಭಾಸ್ಕರ್ ಬಸ್ರೂರು, ನಾಗೇಂದ್ರ ಕೋಟೆ, ಸುಜಾತ ಅಂದ್ರದೆ, ವಿಜಯ್ ಬಸ್ರೂರು ಸೇರಿದಂತೆ ಹಲವರು ನಟಿಸಿದ್ದಾರೆ.

ಹಿಂದಿನ ಲೇಖನಪ್ರೇಮಿಗಳ ನಡುವೆ ಜಗಳ: ಯುವತಿಗೆ ಚಾಕುವಿನಿಂದ ಇರಿದ ಯುವಕ
ಮುಂದಿನ ಲೇಖನಒಂದು ವಾರದಲ್ಲಿ ರೈತರಿಗೆ ಬರ ಪರಿಹಾರದ ಮೊದಲ ಕಂತಿನ ಹಣ ಪಾವತಿ: ಸಚಿವ ಕೃಷ್ಣ ಬೈರೇಗೌಡ