ಮನೆ ಮನರಂಜನೆ ಯೂಟ್ಯೂಬ್​ ನಲ್ಲಿ ಬಿಡುಗಡೆ ಆಗುತ್ತಿದೆ ‘ಸಾವಿತ್ರಿ’ ಸಿನಿಮಾ

ಯೂಟ್ಯೂಬ್​ ನಲ್ಲಿ ಬಿಡುಗಡೆ ಆಗುತ್ತಿದೆ ‘ಸಾವಿತ್ರಿ’ ಸಿನಿಮಾ

0

ವಿಜಯ್ ರಾಘವೇಂದ್ರ, ತಾರಾ, ಪ್ರಕಾಶ್ ಬೆಳವಾಡಿ ಇನ್ನಿತರರು ನಟಿಸಿರುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಸಾವಿತ್ರಿ ನೇರವಾಗಿ ಯೂಟ್ಯೂಬ್​ ನಲ್ಲಿ ಬಿಡುಗಡೆ ಆಗುತ್ತಿದೆ.

Join Our Whatsapp Group

ಜುಲೈ 7 ರಂದು ಸಂಜೆ 5:12ಕ್ಕೆ ಸಾವಿತ್ರಿ ಸಿನಿಮಾವನ್ನು ಎಸ್​ಆರ್​ಎಸ್ ವಿಷನ್ ಮೀಡಿಯಾ ಯೂಟ್ಯೂಬ್​ನಲ್ಲಿ ಚಾನೆಲ್​ನಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು, ಆಸಕ್ತರು ಉಚಿತವಾಗಿ ಸಿನಿಮಾವನ್ನು ಯೂಟ್ಯೂಬ್​ನಲ್ಲಿ ವೀಕ್ಷಿಸಬಹುದಾಗಿದೆ.

ಸಿನಿಮಾವನ್ನು ದಿನೇಶ್ ಎಂಬುವರು ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ಹೃದಯ ಶಿವ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಪ್ರಶಾಂತ್ ಕುಮಾರ್ ಹೀಲಲಿಗೆ.