ಮೈಸೂರು: ಮುಡಾದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಹೊತ್ತಿರುವ ಮುಡಾ ಮಾಜಿ ಆಯುಕ್ತ, ಕೆಎಎಸ್ ಅಧಿಕಾರಿ ದಿನೇಶ್ ಕುಮಾರ್ ಜಿ.ಟಿ ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರಾಗಿ ನೇಮಕಗೊಂಡಿದ್ದಾರೆ.
ಮುಡಾದಲ್ಲಿ 50:50 ಅನುಪಾತದಡಿ ಸೈಟ್ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಅಕ್ರಮದಲ್ಲಿ ಅಂದಿನ ಮುಡಾ ಆಯಕ್ತ ದಿನೇಶ್ ಕುಮಾರ್ ಜಿ.ಟಿ ಅವರ ಪಾಲುಗಾರಿಕೆಯೂ ಇದೆ ಎಂಬ ಆರೋಪ ಕೇಳಿಬಂದಿತ್ತು. ಆರೋಪ ಕೇಳಿಬಂದ ತಕ್ಷಣ ಮೈಸೂರಿಗೆ ಆಗಮಿಸಿದ್ದ ಸಚಿವ ಭೈರತಿ ಸುರೇಶ್ ಸಭೆ ನಡೆಸಿ ಅಂದಿನ ಮುಡಾ ಆಯುಕ್ತರನ್ನು ಜಿಟಿ ದಿನೇಶ್ ಅವರ ವರ್ಗಾವಣೆಗೆ ಸೂಚಿಸಿದರು. ಅದರಂತೆ, ಸರ್ಕಾರ ದಿನೇಶ್ ಕುಮಾರ್ ಜಿಟಿ ಅವರನ್ನು ಮಾಡಿತ್ತು. ಆದರೆ, ಜಿಟಿ ದಿನೇಶ್ ಅವರಿಗೆ ಸ್ಥಳ ನಿಯೋಜನೆಯಾಗಿರಲಿಲ್ಲ. ಇದೀಗ, ಜಿ.ಟಿ.ದಿನೇಶ್ ಕುಮಾರ್ ಅವರನ್ನು ಹಾವೇರಿ ವಿಶ್ವ ವಿದ್ಯಾಲಯದ ಕುಲಸಚಿವರಾಗಿ ಸರ್ಕಾರ ನೇಮಕ ಮಾಡಿದೆ.
ಕೆಎಎಸ್ ಅಧಿಕಾರಿ ದಿನೇಶ್ ಕುಮಾರ್ ಜಿಟಿ ಸೇರಿದಂತೆ ಸರ್ಕಾರ ಒಟ್ಟು ಒಂಬತ್ತು ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.
ವರ್ಗಾವಣೆಯಾದ ಅಧಿಕಾರಿಗಳು
ವೀರಭದ್ರ ಹಂಚಿನಾಳ – ವ್ಯವಸ್ಥಾಪ ನಿರ್ದೇಶಕರು ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರಿಗೆ ವರ್ಗಾಯಿಸಲಾಗಿದೆ.
ಅನುರಾಧ ಜಿ – ಮುಖ್ಯ ಆಡಳಿತಾಧಿಕಾರಿ ವಿಜಯನಗರ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಬಳ್ಳಾರಿ.
ರಾಘವೇಂದ್ರ ಟಿ – ನಿರ್ದೇಶಕರು ವಿಕಲಚೇನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಬೆಂಗಳೂರು.
ಚಿದಾನಂದ ಸದಾಶಿವ ವಟಾರೆ – ಮುಖ್ಯ ಆಡಳಿತಾಧಿಕಾರಿ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟ್ರಾಲಜಿ ಸೈನ್ಸಸ್ ಆ್ಯಂಡ್ ಆರ್ಗನ್ ಟ್ರಾನ್ಸ್ಪ್ಲಾಂಟ್, ಬೆಂಗಳೂರು.
ಮಹದೇವ್ ಎ ಮುರಗಿ – ಕುಲಸಚಿವರು (ಆಡಳಿತ) ತೋಟಗಾರಿಕೆ ವಿಶ್ವವಿದ್ಯಾಲಯ ಬಾಗಲಕೋಟೆ. ಮತ್ತು ಪ್ರಾಭರಿ ಆಯುಕ್ತರು ಕೂಡಲಸಂಗಮ ಅಭಿವೃದ್ಧಿ ಮಂಡಳಿ, ಕೂಡಲಸಂಗಮ, ಬಾಗಲಕೋಟೆ.
ರವಿಕುಮಾರ್ ಪಿ – ಪ್ರಧಾನ ವ್ಯವಸ್ಥಾಪಕರು (ಆಡಳಿತ) ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಬೆಂಗಳೂರು.
ಡಾ. ಶಂಕರಪ್ಪ ವಣಿಕ್ಯಾಳ್ – ಪ್ರಧಾನ ವ್ಯವಸ್ಥಾಪಕರು (ಆಡಳಿತ) ರಾಯಚೂರು ವಿಶ್ವವಿದ್ಯಾಲಯ, ರಾಯಚೂರು.
ಗೀತಾ ಈ ಕೌಲಗಿ – ಕುಲಸಚಿವರು (ಆಡಳಿತ) ಬಾಗಲಕೋಟೆ ವಿಶ್ವವಿದ್ಯಾಲಯ, ಬಾಗಲಕೋಟೆ