ಮನೆ ಅಪರಾಧ ಅಮಾವಾಸ್ಯೆ ನಿಮಿತ್ತ ದೇವಸ್ಥಾನಕ್ಕೆ ಬಂದಿದ್ದ ಯುವಕನ ಕೊಲೆ

ಅಮಾವಾಸ್ಯೆ ನಿಮಿತ್ತ ದೇವಸ್ಥಾನಕ್ಕೆ ಬಂದಿದ್ದ ಯುವಕನ ಕೊಲೆ

0

ಮೂಡಲಗಿ: ಅಮವಾಸ್ಯೆ ನಿಮಿತ್ತ ದೇವಸ್ಥಾನಕ್ಕೆ ಬಂದಿದ್ದ ಯುವಕನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ವಡೇರಾ ಹಳ್ಳಿ ಗ್ರಾಮದಲ್ಲಿ ನಡೆದಿದೆ.

Join Our Whatsapp Group

ಕೊಲೆಯಾದ ಯುವಕನನ್ನು ಶಂಕರ್ ಸಿದ್ದಪ್ಪ ಜಗಮಟ್ಟಿ (29) ಎಂದು ಗುರುತಿಸಲಾಗಿದೆ.  ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.    

ಅಧಿಕಮಾಸದ ಅಮಾವಾಸ್ಯೆ ನಿಮಿತ್ತ ಪತ್ನಿ ಸಮೇತ ಬೆಳಗ್ಗೆ 6 ಗಂಟೆ ಸುಮಾರಿಗೆ ಗ್ರಾಮದ ಬನಸಿದ್ದೇಶ್ವರ ದೇವಸ್ಥಾನಕ್ಕೆ ಬಂದಿದ್ದಾರೆ. ದೇವರ ದರ್ಶನ ಮುಗಿಸಿ ಇನ್ನೇನು ಮನೆ ಹಿಂದಿರುಗಬೇಕು ಎನ್ನುವಷ್ಟರಲ್ಲಿ ದೇವಸ್ಥಾನದ ಆವರಣದಲ್ಲಿ ಮಚ್ಚಿನಿಂದ ಹಲ್ಲೆ ಮಾಡಲಾಗಿದೆ.     

ಗಂಭೀರವಾಗಿ ಗಾಯಗೊಂಡ ಪರಿಣಾಮ ಯುವಕ ಸ್ಥಳದಲ್ಲಿಯೇ ಅಸುನೀಗಿದ್ದಾನೆ ಎಂದು ಹೇಳಲಾಗುತ್ತಿದೆ.ಯುವಕ ಶಂಕರ ಜಗಮಟ್ಟಿ ಕಳೆದ ಐದು-ಆರು ತಿಂಗಳ ಹಿಂದೆಯೇಷ್ಟೆ ಮದುವೆಯಾಗಿದ್ದ ಎಂದು ತಿಳಿದುಬಂದಿದೆ.

ಘಟನೆ ಸ್ಥಳಕ್ಕೆ ಮೂಡಲಗಿ ಪೊಲೀಸ್ ಠಾಣಾ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ವಿಷಯ ತಿಳಿದು ಬೆಳಗಾವಿ ಎಸ್ ಪಿ ಡಾ. ಸಂಜೀವ ಪಾಟೀಲ್ ಸ್ಥಳಕ್ಕೆ ದೌಡಾಯಿಸಿದ್ದಾರೆ.