ಮನೆ ರಾಷ್ಟ್ರೀಯ ಮನೆಯಲ್ಲಿ ಮಲಗಿದ್ದ ಐವರನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಹಂತಕ

ಮನೆಯಲ್ಲಿ ಮಲಗಿದ್ದ ಐವರನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಹಂತಕ

0

ಉತ್ತರಪ್ರದೇಶ: ಮನೆಯಲ್ಲಿ ಮಲಗಿದ್ದ ಐದು ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಿ,  ಕೊನೆಗೆ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಿಷ್ನಿ ಪೊಲೀಸ್ ಠಾಣೆ ವ್ಯಾಪ್ತಿಯ ಗೋಕುಲಪುರ ಗ್ರಾಮದಲ್ಲಿ ನಡೆದಿದೆ.

Join Our Whatsapp Group

ಕೊಲೆಯಾದ ಮನೆಯಲ್ಲಿ ಮೂರು ದಿನಗಳ ಹಿಂದೆ ಮದುವೆ ಸಮಾರಂಭ ನಡೆದಿತ್ತು ಎಂದು ತಿಳಿದುಬಂದಿದೆ.

ಕೊಲೆಯಾದವರು ನವದಂಪತಿಯಾದ ಸೋನು ಯಾದವ್​ (21) ಮತ್ತು ಸೋನಿ (20), ಸಹೋದರನಾದ ಭುಲ್ಲನ್ ಯಾದವ್ (25) ಮತ್ತು ಸೋದರ ಮಾವ ಸೌರಭ್ (23) ಹಾಗು ಸ್ನೇಹಿತನಾದ ದೀಪಕ್ (20) ಎಂದು ತಿಳಿದು ಬಂದಿದೆ. ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಶಿವವೀರ್​ ಯಾದವ್​ ಎಂದು ಗುರುತಿಸಲಾಗಿದೆ.

ಘಟನೆ ವಿವರ:

ಗೋಕುಲಪುರ ಅರ್ಸರ ನಿವಾಸಿ ಸುಭಾಷ್​ ಯಾದವ್​ ಮಗನಾದ ಶಿವವೀರ್​ ಯಾದವ್​ ಅವರ ಸಹೋದರ ಸೋನು ಯಾದವ್​ ಅವರ ಮದುವೆ ಎರಡ್ಮೂರು ದಿನಗಳ ಹಿಂದೆ ಇಟವಾದಲ್ಲಿ ಅದ್ಧೂರಿಯಾಗಿ ನಡೆದಿತ್ತು. ಇಡೀ ಕುಟುಂಬ ನವದಂಪತಿಯೊಂದಿಗೆ ಶುಕ್ರವಾರದಂದು ಇಟವಾದಿಂದ ಆರ್ಸರ ಗ್ರಾಮಕ್ಕೆ ಮರಳಿತ್ತು. ಇದಾದ ಬಳಿಕ ಕುಟುಂಬಸ್ಥರು ಎಲ್ಲರೂ ಮನೆಯಲ್ಲಿ ಊಟ ಮಾಡಿ ಮಲಗಿದ್ದರು.

ಇಂದು ಬೆಳಗಿನ ಜಾವ ಶಿವವೀರ್​ ಯಾದವ್ ಏಕಾಏಕಿ​ ತನ್ನ ಸಹೋದರ, ನವದಂಪತಿ, ಸೋದರ ಮಾವ, ಸ್ನೇಹಿತ ಸೇರಿದಂತೆ ಮಲಗಿದ್ದ ಇನ್ನಿತರರ ಮೇಲೆ ಕೊಡಲಿಯಿಂದ ದಾಳಿ ನಡೆಸಿದ್ದಾನೆ. ದಾಳಿ ಬಳಿಕ ತಾನೂ ಸಹ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ.

ಈ ಘಟನೆಯಲ್ಲಿ ಶಿವವೀರ್​ ಪತ್ನಿ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ರಕ್ತಸಿಕ್ತವಾಗಿದ್ದ ಮನೆಯನ್ನು ನೋಡಿ ಬೆಚ್ಚಿಬಿದ್ದಿದ್ದರು. ಬಳಿಕ ಗ್ರಾಮಸ್ಥರ ಸಹಾಯದಿಂದ ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದರು.

ಸ್ಥಳೀಯ ಪೊಲೀಸ್ ಪಡೆ, ಪ್ರಭಾರಿ ಇನ್ಸ್‌ ಪೆಕ್ಟರ್, ಕಣ್ಗಾವಲು ತಂಡ ಮತ್ತು ಶ್ವಾನ ದಳದವರು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ ಎಂದು ಎ ಸ್‌ಪಿ ಹೇಳಿದರು.