ಮನೆ Uncategorized ಸಂತೋಷದ ಸ್ವರೂಪ !

ಸಂತೋಷದ ಸ್ವರೂಪ !

0

ಇಬ್ಬರೂ ಋಷಿಗಳು ತಪಸ್ಸು ಮಾಡಿದ ಕಥೆ ನಿಮಗೆ ಗೊತ್ತಾ? ಒಮ್ಮೆ ಇಬ್ಬರು ಋಷಿಗಳು ದೇವರನ್ನು ಕುರಿತು ಒಟ್ಟಾಗಿ ತಪಸ್ಸು ಮಾಡಿದರಂತೆ. ದೀರ್ಘಕಾಲದ ತಪಸ್ಸು ಮಾಡಿದ ನಂತರ ದೇವರು ಪ್ರತ್ಯಕ್ಷನಾದನಂತೆ “ಭಕ್ತರೇ,.. ನಿಮ್ಮ ತಪಸ್ಸಿಗೆ ಮೆಚ್ಚಿದ್ದೇನೆ. ಏನು ಬೇಕು ಕೇಳಿ” ಎಂದರಂತೆ.

ಆಗ ಒಬ್ಬ ಋಷಿ “ಅವನಿಗೆ ಏನು ಬೇಕು ಕೊಟ್ಟು ಬಾ ನಂತರ ನನಗೇನು ಬೇಕೆಂದು ಕೇಳುತ್ತೇನೆ” ಎಂದರಂತೆ. “ಸರಿ” ಅಂದ ದೇವರು, ಇನ್ನೊಬ್ಬ ಋಷಿಯ ಬಳಿ ಹೋದನಂತೆ “ಇಲ್ಲ, ಇಲ್ಲ.. ಅವನೇ ಹಿರಿಯ. ಮೊದಲು ಅವನಿಗೆ ಏನು ಬೇಕು ಕೊಡಬೇಕು” ಎಂದನಂತೆ.

ಆಗ ದೇವರು “ಅವನಿಗೆ ಕೊಡೋಣವಂತೆ ,ಈಗ ನಿನ್ನ ಬಳಿ ಬಂದಿದ್ದೇನಲ್ಲ….. ನಿನಗೇನು ಬೇಕೆಂದು ಕೇಳು” ಎಂದನಂತೆ. ಈಗ ಋಷಿ ಬಹಳ ಯೋಚನೆ ಮಾಡಿ, ಕೇಳಿದ “ದೇವರೇ, ಆ ಇನ್ನೊಬ್ಬ ಋಷಿಗೆ ಏನನ್ನು ಕೊಡುತ್ತಿಯೋ, ಅದನ್ನೇ ಅವನಿಗೆ ಕೊಟ್ಟಿದ್ದಕ್ಕಿಂತ ಎರಡು ಪಟ್ಟು ಜಾಸ್ತಿ ನನಗೆ ಕೊಡು” ಎಂದು ಕೇಳಿದನಂತೆ. ಹಾಗೆ ಆಗಲಿ ಅಂದ ದೇವರು ಆ ಇನ್ನೊಬ್ಬ ಋಷಿಯ ಬಳಿ ಹೋದ.

ಋಷಿಗೆ ಈಗ ತುಂಬಾ ಪೇಚಾಟಕ್ಕಿಟ್ಟು ಕೊಂಡಿತು. ತಾನು ಏನನ್ನೇ ಕೇಳಿದರೂ ಎರಡು ಪಟ್ಟು ಜಾಸ್ತಿ ಇನ್ನೊಬ್ಬನಿಗೆ ಸಿಗುತ್ತದೆ. ಎಲಾ ಇವನಾ!.. ಬಾರಿ ಬುದ್ಧಿವಂತ ಎಂದುಕೊಂಡಿದ್ದಾನೆ. ಮಾಡ್ತೀನಿ ಅವನಿಗೆ ಎಂದುಕೊಂಡ ಋಷಿ “ದೇವರೇ..ನನಗೆ ಒಂದು ಕಾಲು, ಒಂದು ಕೈ, ಒಂದು ಕಣ್ಣು ಹೊರೆಟು ಹೋಗುವಂತೆ ಮಾಡು” ಎಂದನಂತೆ. ದೇವರು ಹಾಗೆ ಆಗಲಿ ಎಂದು ಅವನು ಒಂದು ಕಾಲು, ಒಂದು ಕೈ, ಒಂದು ಕಣ್ಣು ಹೊರಟುಹೋಯಿತು. ಆದರೂ ಅವನಿಗೆ ಸಂತೋಷ ಇನ್ನೊಬ್ಬ ಋಷಿಯ ಎರಡು ಕಾಲ್ಗಳು, ಎರಡು ಕೈಗಳು, ಎರಡು ಕಣ್ಣುಗಳು ಹೊರಟು ಹೋದವಲ್ಲ ಆದ್ದರಿಂದಾಗಿ ಅವನಿಗೆ ಸಂತೋಷ!

ಮನುಷ್ಯರು ಹೀಗೂ ಇರುತ್ತಾರೆ ಅಥವಾ ಮನುಷ್ಯರು ಇರುವುದೋ ಹೀಗೆ ಪಕ್ಕದವರಿಗೆ ಅಥವಾ ನಮಗೆ ಗೊತ್ತಿರುವ ಯಾರಿಗಾದರೂ ತೊಂದರೆ ಆದರೆ ನಮಗೆ ಏನೋ ಒಂದು ರೀತಿಯ ಸುಖಾನುಭವ ಆಗಲು ತೊಡಗುತ್ತದೆ. ಅಂತಹ ತೊಂದರೆಗಳು ಸ್ವಲ್ಪ ಒಳ್ಳೆಯ ಹೆಸರನ್ನು ತೆಗೆದುಕೊಂಡವರಿಗೆ ಆಗಿ ಬಿಟ್ಟರೆ ನಮಗಾದ ಸುಖದ ಅನುಭವ ಇನ್ನೂ ಜಾಸ್ತಿ ಆಗುತ್ತದೆ ನೀವು ಇದನ್ನು ಒಪ್ಪಿಕೊಳ್ಳದೆ ಇರಬಹುದು.

ಮೇಲ್ನೋಟಕ್ಕೆ ನಮಗೆ ಅರ್ಥವಾಗದಿರಬಹುದು ಆದರೆ ನಮಗೆ ಏನಾದರೂ ಬೇಕು ಎನಿಸಿದ್ದು ದೊರಕಿದಾಗ ಒಂದು ರೀತಿಯ ಸಂತೋಷವಾಗುತ್ತದೆ ಆದರೆ ನಮ್ಮ ಪಕ್ಕದವರಿಗೆ ಏನಾದರೂ ತೊಂದರೆಯಾದಾಗ ಅವರಿಗೆ ಆದಾಗ ತೊಂದರೆಯನ್ನು ನಾವು ಇನ್ನೊಬ್ಬರಿಗೆ ಹೇಳಲು ಉತ್ಸಾಹಿಗಳಾಗಿರುತ್ತೇವೆಯೋ, ನಿರುತ್ಸಹಿಗಳಾಗಿರುತ್ತೇವೆಯೋ, ಬಹುತೇಕರು ಇನ್ನೊಬ್ಬರಿಗೆ ಆದ ತೊಂದರೆಯನ್ನು ತುಂಬಾ ಉತ್ಸಾಹದಿಂದಲೇ ಎಲ್ಲರಿಗೂ ಹೇಳುತ್ತಾ ಬರುತ್ತಾರೆ ಅಂದರೆ ಅದರಲ್ಲಿ ವಿಚಿತ್ರ ರೀತಿಯ ಸುಖ ಸಂತೋಷದ ಅನುಭವವಾಗುತ್ತದೆ. ನಮ್ಮ ವ್ಯಕ್ತಿತ್ವ ಸರಿಯಾಗಿಲ್ಲದಿರುವುದನ್ನು ಈ ಪ್ರವೃತ್ತಿಯು ಸೂಚಿಸುತ್ತದೆ.

ಹಿಂದಿನ ಲೇಖನಗುಂಡ್ಲುಪೇಟೆ: ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ಮುಂದಿನ ಲೇಖನಬೈಕಿಗೆ ಬಸ್ ಡಿಕ್ಕಿ: ಇಬ್ಬರು ಸಾವು