ಮನೆ ಮನೆ ಮದ್ದು ಅಮೃತ ಬಳ್ಳಿ

ಅಮೃತ ಬಳ್ಳಿ

0

ದೇಶದ್ಯಂತ ಬೆಳೆಯುವ ಒಂದು ತರಹದ ಕಾಡು ಬಳ್ಳಿಯಾಗಿದೆ. ಇದು ಸಾರ್ವತ್ರಿಕ ಉಪಯೋಗ ಗುರುತಿಸಿದ ನಿಘಂಟುಕಾರರು ಬಳ್ಳಿಯ ಉತ್ಪತ್ತಿ ಬಗ್ಗೆ ಕಥೆಯೊಂದನು ವಿವರಿಸುತ್ತಾರೆ. ರಾಮ ರಾವಣ ಯುದ್ಧದಲ್ಲಿ ಮಡಿದ ಕಪಿ ವೀರನನ್ನು ಬದುಕಿಸಲು ಇಂದ್ರನ ಅಮೃತ ಕಂಬವನ್ನು ಭೂಲೋಕಕ್ಕೆ ಕಳಿಸುತ್ತಾನೆ ಹಾಗೆ ಅಮೃತವನ್ನು ಭೂಮಿಗೆ ತಂದರು.

ಮಾಡಿದ ಕಪಿಗಳ ಮೈಮೇಲೆ ಚುಮುಕಿಸುವರು. ಹಾಗೆ, ಕಪಿಗಳ ಮೈಯಿಂದ ನೆಲಕ್ಕೆ ಬಿದ್ದ ಅಮೃತ ಬಿಂದುಗಳೇ, ಅಮೃತ ಬಳ್ಳಿ ಸಸಿ ಆಯಿತು. ಗುಡುಚಿ, ಮಧುಪರ್ಣಿ, ಅಮೃತ, ಅಮೃತವಲ್ಲಿ, ಛೀನ್ನಾ, ಛೀನ್ನಾರೋಹ, ಛೀನ್ನೋದ್ಭವ, ವತ್ಸಾದನಿ, ಜೀವಂತಿ, ತಂತ್ರಿಕಾ, ಸೋಮ, ಕುಂಡಲಿ, ಚಕ್ರಲಕ್ಷಣೀಕ, ವೀರಾ, ವಿಶಲ್ಯಾ, ರಸಾಯನಿ, ಚಂದ್ರಹಾಸ, ಬಯಸ್ಥಾ, ಮಂಡಲೀ, ದೇವನಿರ್ಮಿತ, ಎಂಬ ಸಂಸ್ಕೃತ ಹೆಸರುಗಳ ಭಾರಿ ಮಸಾ ಮರಸುತ್ತು ಬಳ್ಳಿ ಇದು. ಹೃದಯಕಾರದ ಎಲೆ, ಎಲೆಕಾಂಡ ಹಸಿರು, ಬಲಿತ ಕಾಂಡ, ಸುತ್ತ ತೆಳು. ಕಾಗದದಂತಿರುವ ಸಿಪ್ಪೆ. ಕಾಂಡದ ಒಳಕೊಟ್ಟದಲ್ಲಿ ಚಕ್ರಾಕಾರ, ಬೆರಳು ಗಾತ್ರದ ಕಾಂಡ, ಎಸೆದರು ಮತ್ತು ಚಿಗುರುವಾ ಸ್ವಭಾವ ಬಲಿತ ಕಾಂಡ, ಬಾರಿ ಎತ್ತರ ಏರಿದರೂ ನೆಲದ ಸಂಪರ್ಕ ಕತ್ತರಿಸಿದರು ಬಾರಿ ಎತ್ತರದಿಂದ ತಂತು ಬೇರು ನೆಲಕ್ಕೆ ಹಸಿರು ಪುನಹ ಜೀವ ಪಡೆಯಬಲ್ಲ ಅದ್ಭುತ ಲಕ್ಷಣಗಳುಳ್ಳ ಸಸ್ಯ.
ಎಲ್ಲಿ ಕಂಕುಗಳಲ್ಲಿ ಪುಟಾಣಿ ಹಸಿರು ಹೂ. ಅನಂತರ ನೇತ್ತರು ಬಣ್ಣದ ದುಂಡುಕಾಯಿ, ಗೊಂಚಲು ಬಟಾಣಿ ಗಾತ್ರದ ಹಣ್ಣು ಒಳಗೆ ಚಿಕ್ಕ ಅಂಕು-ಡೊಂಕು ಬೀಜಗಳು ಅಮೃತ ಬಳ್ಳಿಯಲ್ಲಿ ಎರಡು ಜಾತಿಗಳಿವೆ. ಟಿನೊಸ್ಪೊರಾ ಮಲಬಾರಿಕಾ ಮತ್ತು ಟಿ. ಕಾರ್ಡಿಪೋಲಿಯ. ಟೀ ಮಲಬಾರಿಕ ಎಲೆಗಳಲ್ಲಿ ಸ್ವಲ್ಪ ಮಿದುಗೂದಲುಗಳಿವೆ… ಎರಡನ್ನು ಅಮೃತ ಬಳ್ಳಿ ಎಂದು ಬಳಸುವರು ಕೆಲವರ ಪ್ರಕಾರ ಮಲಭಾರಿಕ ಪ್ರಭೇದವನ್ನು ಸುದರ್ಶನ ಎಂದು ಗುರುತಿಸುವರು. ಗಿಲೋಯಿನ್, ಗಿಲೋಯಿನಿನ್, ಗಿಲೋಸ್ಟಿರಾಲ್,ಬರ್ಬೆರಿನ್ ಗಳನ್ನು ಬಳ್ಳಿಯಲ್ಲಿ ಪತ್ತೆ ಹಚ್ಚಿದ್ದಾರೆ.
ಮರುಕಳಿಸಿದ ಜ್ವರ, ಚರ್ಮ ವ್ಯಾಧಿ, ಹಳೆಯ ಜ್ವರ, ಕೀಲುವಾತ, ಮಧುಮೇಹ, ಮೂತ್ರಕಟ್ಟು, ಕಾಮಾಲೆ, ರಕ್ತ ಹೀನತೆ, ಮಂದಾಗ್ನಿ, ವಾಂತಿ ಅತಿ ಬಾಯಾರಿಕೆ, ರಕ್ತ ಬೀಳುವ ಮೂಲವ್ಯಾಧಿ, ಪ್ಲೀಹವೃದ್ದಿ, ಮರಕಳಿಸುವ ಭೇದಿ, ಹುಳಿತೇಗು ಮತ್ತು ಧಾತು ಕ್ಷಯಾ ವ್ಯವಸ್ಥೆಯಲ್ಲಿ ಅಮೃತಬಳ್ಳಿಯ ಬಳಕೆ ಬಹಳ ಉತ್ತಮ.
ಔಷಧೀಯ ಗುಣಗಳು :-
*ನಿರಂತರ ಅಮೃತಬಳ್ಳಿ ಸ್ವರಸ ಸೇವಿಸುವುದರಿಂದ ಆಯುಷ್ಯವೃದ್ಧಿ, ಮುಪ್ಪು ದೂರವಾಗುತ್ತದೆ…
*ಹೆಬ್ಬೆರಳು ಗಾತ್ರದ ಕಾಂಡ ಚೆನ್ನಾಗಿ ಕತ್ತರಿಸಿ, ನೀರಿನಲ್ಲಿ ಹಾಕಿ ಕಿವುಚಿರಿ, ಅನಂತರ ಮೇಲಿನ ರಾಡಿ ಎಲ್ಲಾ ತೆಗೆದು ಕೇವಲ ನೀರನ್ನು ತಂಗಲು ಬಿಡಿ, ತಳದಲ್ಲಿ ಬಿಳಿ ಹಿಟ್ಟು ಲಭ್ಯ. ಇದು ಅಮೃತ ಸತ್ವ, ಕಹಿ, ಕಡಿಮೆ ಪ್ರಮಾಣದಲ್ಲಿ ಅತ್ಯಧಿಕ ಪ್ರಯೋಗಕ್ಕೆ ಸತ್ವ ಬಳಸಬಹುದಾಗಿದೆ. ಮಕ್ಕಳಿಗೆ ಪೋಷಣೆ ನೀಡುತ್ತದೆ. ರೋಗ ಪ್ರತಿರೋಧಕ ಕಸುವು ಹಚ್ಚಿರುತ್ತದೆ. 100 ಕಿ.ಲೋ ಮಾತ್ರ. ಹಾಗಾದರೂ ಇದು ಅತ್ಯುತ್ತಮ ಜೀವ ರಕ್ಷಕ ಔಷದ. ಭಾರತೀಯ ಕ್ಲೀನೀನು ಎಂದೇ ಅಮೃತ ಸತ್ವವನ್ನು ಗುರುತಿಸಬಹುದು.
*ಸೊಗದೆಬೇರು ಪುಡಿ ಮತ್ತು ತಾಜಾ ಅಮೃತಬಳ್ಳಿ ಕತ್ತರಿಸಿದ್ದನ್ನು ಸಮ ಪ್ರಮಾಣದಲ್ಲಿ ಬೆರೆಸಿ ಪಾತ್ರೆಗೆ ಹಾಕಿರೋದನ್ನು ಚೆನ್ನಾಗಿ ಹಿಸುಕಬೇಕು. ಬಳಿಕ ಇವೆರಡರ 10 ಪಟ್ಟು ಕುದಿಯುವ ನೀರು ಹಾಕಿ ಪುನಃ ತಂಗಲು ಬಿಡಿರಿ. ಆನಂತರ ಪುನಃ ಹಿಸುಖಿರಿ. ಶೀತ ಕಷಾಯ ರೂಪದಲ್ಲಿ ಸೋಸಿದ್ದನ್ನು ದಿನಕ್ಕೆರಡು ಮೂರು ಬಾರಿ ಕುಡಿಸಿರಿ. ಜ್ವರ ಅಥವಾ ಇತರೆ ಕಾಯಿಲೆಯ ಅನಂತರದ ಸುಸ್ತು ಮೂತ್ರ ತೊಂದರೆಗಳು, ಹಳೆಯ ಕೀಲು ಗಂಟು ನೋವು, ಗುಣವಾದ ಚರ್ಮದ ಕಾಯಿಲೆಗಳಿಗೆ ರಾಮಬಾಣ, ಮುಪ್ಪು ಮುಂದೂಡುತ್ತದೆ.

  • ಪದೇ ಪದೇ ಮೂತ್ರ ಮಾಡುವ ಮತ್ತು ಮೂತ್ರ ಕಟ್ಟಿ ಮೈಊತ ಬಂದಿರುವ ಕಾಯಿಲೆಗೆ ತೀವ್ರ ಮಲಬದ್ಧತೆಗೆ ಅಮೃತಬಳ್ಳಿರಸ ಕುಡಿಯಬಹುದು.
    *ಚರ್ಮರೋಗಕ್ಕೆ ನೆಲ್ಲಿಕಾಯಿ ಜೊತೆ ಇದನ್ನು ಸೇರಿಸಿ ಕುಡಿದರೆ ಗುಣಕಾರಿಯಾಗುತ್ತದೆ.
  • ಸಮೂಲ ಸಸ್ಯದ ಜಜ್ಜಿದ ರಸ ಕುಡಿದರೆ ಮರುಕಳಿಸುವ ಜ್ವರ ಪರಿಹಾರವಾಗುತ್ತದೆ.
  • ಪದೇ ಪದೇ ಮೂತ್ರ ಮಾಡುವ ಮತ್ತು ಮೂತ್ರ ಕಟ್ಟಿ ಮೈಊತ ಬಂದಿರುವ ಕಾಯಿಲೆಗೆ ತೀವ್ರ ಮಲಬದ್ಧತೆಗೆ ಅಮೃತಬಳ್ಳಿಯ ರಸ ಕುಡಿದರೆ ಪರಿಹಾರವಾಗುತ್ತದೆ.
    *ಮುಪ್ಪು ಮುಂದೂಡಲು ಮತ್ತು ರೋಗ ತಡೆಯಲು ಅಮೃತಬಳ್ಳಿ ಕಷಾಯ ಅಥವಾ ಸ್ವರಸ ಸಹಿತ ಜೇನುಗೂಡಿಸಿ ಸೇವಿಸಬೇಕು.
  • ಎದೆಹಾಲು ಹೆಚ್ಚಳಕ್ಕೆ ಮತ್ತು ಶುದ್ಧವಾಗಲು ಅಮೃತಬಳ್ಳಿ ಸೇವನೆಯಿಂದ ಹಿತಕರವಾಗಿದೆ.
ಹಿಂದಿನ ಲೇಖನಓಡಿ ಬಂದೆ
ಮುಂದಿನ ಲೇಖನಸೂರ್ಯಸ್ನಾನ (ಸನ್ ಬಾತ್)