ಮನೆ ರಾಜ್ಯ ಬಾಲಕನ ಪುಂಡಾಟ ತಾಳಲಾರದೇ ಸರಪಳಿಯಿಂದ ಬಂಧಿಸಿಟ್ಟ ಪೋಷಕರು

ಬಾಲಕನ ಪುಂಡಾಟ ತಾಳಲಾರದೇ ಸರಪಳಿಯಿಂದ ಬಂಧಿಸಿಟ್ಟ ಪೋಷಕರು

0

ಸಕಲೇಶಪುರ: ಬಾಲಕನ ಪುಂಡಾಟ ತಾಳಲಾರದೆ ಪೋಷಕರೇ ಆತನನ್ನು ಕಬ್ಬಿಣದ ಸರಪಳಿಯಿಂದ ಬಂಧಿಸಿ ಮನೆಯಲ್ಲಿ ಕೂಡಿಟ್ಟ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ತಾಲೂಕಿನ ಕ್ಯಾನಹಳ್ಳಿಯ ಕಾಫಿತೋಟ ದಲ್ಲಿ ಕಾರ್ಮಿಕರಾಗಿರುವ ಅಸ್ಸಾಂ ಮೂಲದ ಹಸೀನಾಬಾನು-ಅಮೀರ್‌ ಹುಸೇನ್‌ ದಂಪತಿಗೆ 7 ಮಕ್ಕಳಿದ್ದು, 6ನೇ ಮಗನಾದ ಉಬೇದುಲ್ಲಾ (11) ಅತ್ಯಂತ ತುಂಟನಾಗಿದ್ದ. ಪೋಷಕರು ಕೆಲಸಕ್ಕೆ ತೆರಳಿದ ಬಳಿಕ ಮನೆಬಿಟ್ಟು ಹೋಗುತ್ತಿದ್ದ ಈತನನ್ನು 2-3 ದಿನಗಳ ಕಾಲ ಹುಡುಕಿ ಕರೆತಂದಿದ್ದರು.

10 ದಿನಗಳಿಂದ ಈತನನ್ನು ಸರಪಳಿಯಿಂದ ಬಂಧಿಸಿದ್ದರು. ಬುಧವಾರ ಅದ್ಹೇಗೋ ಮನೆಯಿಂದ ಹೊರಬಂದ ಬಾಲಕ ಸರಪಳಿ ಸಹಿತ ಸಮೀಪದ ರಸ್ತೆಯಲ್ಲಿ ಕುಳಿತಿದ್ದ. ಇದನ್ನು ಗಮನಿಸಿದ ದಾರಿಹೋಕರು ಪೊಲೀಸರಿಗೆ ತಿಳಿಸಿದ್ದರು. ಪೋಲಿಸರು ಆಗಮಿಸಿ ಬಾಲಕನನ್ನು ರಕ್ಷಿಸಿದ್ದು, ಆತನನ್ನು ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಹಸ್ತಾಂತರಿಸಿದ್ದಾರೆ.

ಹಿಂದಿನ ಲೇಖನಮರಕ್ಕೆ ಕಾರು ಡಿಕ್ಕಿ: ನವ ವಿವಾಹಿತ ಸೇರಿ 3 ಮಂದಿ ಸಾವು
ಮುಂದಿನ ಲೇಖನರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧ: 1 ರಿಂದ 3 ವರ್ಷದವರೆಗೆ ಜೈಲು- 1 ಲಕ್ಷ ರೂ.ವರೆಗೆ ದಂಡ