ಮನೆ ಕಾನೂನು ಗುಂಡು ಹಾರಿಸಿ ಇಬ್ಬರ ಕೊಲೆಗೆ ಯತ್ನಿಸಿದವನಿಗೆ 3 ವರ್ಷ ಜೈಲು

ಗುಂಡು ಹಾರಿಸಿ ಇಬ್ಬರ ಕೊಲೆಗೆ ಯತ್ನಿಸಿದವನಿಗೆ 3 ವರ್ಷ ಜೈಲು

0

ಮಡಿಕೇರಿ: ಇಬ್ಬರು ವ್ಯಕ್ತಿಗಳ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದವನಿಗೆ ಪ್ರಧಾನ ಜಿರಳೆ ಮತ್ತು ಸೇಷನ್ಸ್ ನ್ಯಾಯಾಲಯ ಮೂರು ವರ್ಷ ಕಠಿಣ ಶಿಕ್ಷೆ ಮತ್ತು 5,000 ರೂ, ದಂಡ ವಿಧಿಸಿ ತೀರ್ಪು ನೀಡಿದೆ.

ವಿರಾಜಪೇಟೆ ಬೆಟ್ಟಂಗಾಲ ಗ್ರಾಮದ ಪಿ.ಎಸ್. ಲೊಕೇಶ್ ಎಂಬಾತನೇ ಶಿಕ್ಷೆಗೆ ಗುರಿಯಾದವನಾಗಿದ್ದು, ಪ್ರಕರಣದ ಮತ್ತೋರ್ವ ಆರೋಪಿ ಎಂ.ಎ. ಅಕ್ರಂ ಎಂಬಾತನನ್ನು ಸೂಕ್ತ ಸಾಕ್ಷ್ಯಾಧಾರ ಕೊರತೆಯಿಂದ ನ್ಯಾಯಾಲಯ ಖುಲಾಸೆಗೊಳಿಸಿದೆ.

ಪ್ರಕರಣ ಹಿನ್ನಲೆ : ಮಡಿಕೇರಿ ಹಿಲ್ ರಸ್ತೆಯ ಸಲಫಿ ಮಸೀದಿ ಕಟ್ಟಡದಲ್ಲಿ ರಿಯಾಝ್ ಎಂಬವರು ಎಸ್.ಕೆ.ಪಿ ಎಂಬ ಕ್ಯಾಂಟೀನನ್ನು ಆಮೀಮ್ ಅನ್ಸಾರಿ ಹಾಗೂ ನಸೀಮ್ ಅನ್ಸಾರಿ ಎಂಬುವರೊಂದಿಗೆ ನಡೆಸುತ್ತಿದ್ದರು. ಈ ಕ್ಯಾಂಟೀನ್ ಮುಂಭಾಗದ ಬಾರ್ ಒಂದರಲ್ಲಿ ವಿರಾಜಪೇಟೆ ಬಿಟ್ಟಂಗಾಲ ನಿವಾಸಿ ಸಿ.ಎಸ್. ಲೊಕೇಶ್ ಮತ್ತು ಮಡಿಕೇರಿಯ ಎಂ.ಎ ಅಕ್ರಂ ಎಂಬವರು ಕೆಲಸ ಮಾಡಿಕೊಂಡಿದ್ದರು. ಸಿ.ಎಸ್. ಲೋಕೇಶ್ ವಿರುದ್ಧ ಹಲವು ಪ್ರಕರಣಗಳಿದ್ದು, ಕ್ಯಾಂಟೀನ್ ನಿಂದ ಹಣ ನೀಡದೆ ತಿಂಡಿ ತರಿಸಿಕೊಂಡು ತಿನ್ನುತ್ತಿದ್ದ.   2018 ರ ಅಕ್ಟೋಬರ್ 18ರ ಸಂಜೆ 7:45 ಗಂಟೆಗೆ ಲೋಕೇಶ್ ಆರೋಪಿ ಅಕ್ರಮ್ ಎಂಬಾತನ್ ಮೂಲಕ ಎರಡು ಚಿಕನ್ ರೋಲ್ ಗಳನ್ನ ತರಿಸಿಕೊಂಡು ತಿಂದಿದ್ದರು. ಬಳಿಕ ಮತ್ತೆ ಒಂದು ಪ್ಲೇಟ್ ಗೋಬಿಮಂಚೂರಿ ನೀಡುವಂತೆ ಹೇಳಿ ಅಕ್ರಂ ಎಂಬಾತನನ್ನ ಕಳುಹಿಸಿದ್ದ. ಈ ವೇಳೆ ಅಂಗಡಿಯಲ್ಲಿದ್ದವರು ಹಿಂದಿನ ಬಾಕಿ ನೀಡುವಂತೆ ಕೇಳಿದ್ದಲ್ಲದೆ, ಗೋಬಿ ಮಂಚೂರಿ ನೀಡಲು ನಿರಾಕರಿಸಿದರು.

ಇದನ್ನ ಆರೋಪಿಯ ಅಕ್ರಂ, ಲೋಕೇಶ್ ಗೆ ತಿಳಿಸಿದ.  ಬಳಿಕ ಲೋಕೇಶ್ ತಾನು ವಾಸವಿದ್ದ ರೂಮ್ ಗೆ ತೆರಳಿ ರಾತ್ರಿ 9:27 ಗಂಟೆ ವೇಳೆಗೆ ತನ್ನ ಬಂದೂಕಿನಿಂದ ಕೋಣೆಯ ಕಾರಿಡಾರ್ ನ ಕಿಟಕಿ ಮೂಲಕ 3 ಗುಂಡು ಹಾರಿಸಿದ್ದು, ರಿಯಾಝ್ ಎಂಬಾತನ ಬಲತೊಡೆ ಹಾಗೂ ಶಮೀಮ್ಅನ್ಸಾರಿ ಎಂಬವರ ಎರಡು ಕಾಲಿನ ಮೊಣಕಾಲಿನ ಕೆಳಗೆ ಸಾಮಾನ್ಯ ಸ್ವರೂಪ ಗಾಯಗೊಳಿಸಿ ಕೊಲೆಯ ಪ್ರಯತ್ನ ನಡೆಸಿದ್ದ.   

ಈ ಪ್ರಕರಣದ ವಿಚಾರಣೆಗೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಹೆಚ್.ಸಿ ಶಾಮ್ ಪ್ರಸಾದ್ ಅವರು ಲೋಕೇಶ್ ಗೆ ಸೇರಿದ ಕೋವಿಯನ್ನು ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು, ಆತನಿಗೆ ಮೂರು ವರ್ಷ ಕಠಿಣ ಸಜೆ ಮತ್ತು 5000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರ ಸರಕಾರಿ ಅಭಿಯೋಜಕಿ ಕೆ.ಜಿ. ಅಶ್ವಿನಿವಾದ ಮಂಡಿಸಿದರು.