ಮನೆ ಮನರಂಜನೆ ಕುತೂಹಲ ಮೂಡಿಸಿದ ಪ್ರವೀರ್ ಶೆಟ್ಟಿ ನಟನೆಯ ‘ಸೈರನ್’ ಟ್ರೇಲರ್

ಕುತೂಹಲ ಮೂಡಿಸಿದ ಪ್ರವೀರ್ ಶೆಟ್ಟಿ ನಟನೆಯ ‘ಸೈರನ್’ ಟ್ರೇಲರ್

0

ಯುವನಟ ಪ್ರವೀರ್ ಶೆಟ್ಟಿ ಮೊದಲ ಬಾರಿಗೆ ನಾಯಕ ನಟನಾಗಿ ನಟನೆ ಮಾಡಿರುವ “ಸೈರನ್’ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಸದ್ಯ ಸಿನಿಮಾದ ಬಹುತೇಕ ಕೆಲಸಗಳನ್ನು ಪೂರ್ಣ ಗೊಳಿಸಿರುವ ಚಿತ್ರ ತಂಡ, ಇದೀಗ ಚಿತ್ರ ತಂಡ “ಸೈರನ್’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡುವ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ.

Join Our Whatsapp Group


ಇದೇ ವೇಳೆ ಮಾತನಾಡಿದ ನಟ ಪ್ರವೀರ್ ಶೆಟ್ಟಿ, “ಇದೊಂದು ಕಂಪ್ಲೀಟ್ ಆ್ಯಕ್ಷನ್ ಕಂ ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯ ಸಿನಿಮಾ. ನಾನು ಇನ್ವೆಸ್ಟಿಗೇಟಿಂಗ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದೇನೆ. ಸಮಾಜದಲ್ಲಿ ಇಂದು ನಡೆಯುತ್ತಿರುವ ಕೆಲವು ಘಟನೆಗಳನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ ಎಂದು ಪ್ರೇಕ್ಷಕರಲ್ಲಿ ಕೇಳಿಕೊಂಡರು.

ಮೇ 26ರಂದು “ಸೈರನ್’ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಚಿತ್ರ ತಂಡ ಯೋಜನೆ ಹಾಕಿಕೊಂಡಿದೆ. ಚಿತ್ರಕ್ಕೆ ರಾಜ ವೆಂಕಯ್ಯ ಅವರ ನಿರ್ದೇಶನವಿದ್ದು, ಡೆಕ್ಕನ್ ಕಿಂಗ್ ಮೂವಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿಈ ಸಿನಿಮಾವನ್ನು ಬಿಜು ಶಿವಾನಂದ್ ನಿರ್ಮಾಣ ಮಾಡಿದ್ದಾರೆ.

ಚಿತ್ರದಲ್ಲಿ ಲಾಸ್ಯಾ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಶರತ್ ಲೋಹಿತಾಶ್ವ, ಸುಕನ್ಯಾ, ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿ. ಚಿತ್ರಕ್ಕೆ ನಾಗೇಶ್ ಆಚಾರ್ಯ ಛಾಯಾಗ್ರಹಣವಿದೆ. ಭಾರಾಧ್ವಜ್ ಸಂಗೀತನಿರ್ದೇಶನ ಈ ಚಿತ್ರಕ್ಕೆ ದೀಪಕ್ ಬಾಲಾಜಿ ಯವರ ಸಂಕಲ ಮಾಡಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ “ಸೈರನ್’ ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ನಟ ಡಾಲಿ ಧನಂಜಯ್, ನಟಿ ಸ್ಪರ್ಶ ರೇಖಾ, ನಿರ್ದೇಶಕ ಎಎಂಆರ್ ರಮೇಶ್, ಪತ್ರಕರ್ತ ರಂಗನಾಥ್ ಭಾರಧ್ವಾಜ್ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.