ಮನೆ ರಾಜಕೀಯ ಪ್ರತಿಭಟನೆ ಕಾಂಗ್ರೆಸ್’ನವರ ಸೋಗಲಾಡಿತನ: ಸಿಎಂ ಬೊಮ್ಮಾಯಿ

ಪ್ರತಿಭಟನೆ ಕಾಂಗ್ರೆಸ್’ನವರ ಸೋಗಲಾಡಿತನ: ಸಿಎಂ ಬೊಮ್ಮಾಯಿ

0

ಬೆಂಗಳೂರು: ಪ್ರತಿಭಟನೆ ನಡೆಸುವುದು ಕಾಂಗ್ರೆಸ್’ನವರ ಸೋಗಲಾಡಿತನ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.

‘ಭ್ರಷ್ಟಾಚಾರದ ತೊಲಗಿಸಿ, ಬೆಂಗಳೂರು ಉಳಿಸಿ’ ಎಂದು ಆಗ್ರಹಿಸಿ ಬೆಂಗಳೂರಿನ 300ಕ್ಕೂ ಹೆಚ್ಚು ಕಡೆಗಳಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಯ ಕುರಿತು ಪ್ರತಿಕ್ರಿಯಿಸಿದ ಅವರು, ಬಿಬಿಎಂಪಿಯಲ್ಲಿನ ಭ್ರಷ್ಟಾಚಾರ ಅವರ ಅವಧಿಯಲ್ಲಿ ನಡೆದಿದೆ. ತಾವು ಮಾಡಿರುವ ಭ್ರಷ್ಟಾಚಾರಗಳನ್ನು ಮುಚ್ಚಿಕೊಳ್ಳಲು ಅವರು ಈ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ ಎಂದು ಆರೋಪಿಸಿದರು.

ಭ್ರಷ್ಟಾಚಾರದ ಗಂಗೋತ್ರಿ ಕಾಂಗ್ರೆಸ್. ಭ್ರಷ್ಟಾಚಾರವನ್ನು ಬೆಂಬಲಿಸಿದವರು, ಅದಕ್ಕೆ ಕುಮ್ಮಕ್ಕು ಕೊಟ್ಟವರು ಕಾಂಗ್ರೆಸ್’ನವರು.  ಭ್ರಷ್ಟಾಚಾರದ ಜೊತೆಗೇ ಸರ್ಕಾರ ನಡೆಸಿದವರು. ಭ್ರಷ್ಟಾಚಾರ ಅವರ ಸರ್ಕಾರದ ಒಂದು ಭಾಗವಾಗಿತ್ತು ಎಂದು ಕಾಂಗ್ರೆಸ್ ನಾಯಕರ ವಿರುದ್ಧ

ಕಾಂಗ್ರೆಸ್ ಸರ್ಕಾರದ ಅವಧಿಯ ಎಲ್ಲ ಭ್ರಷ್ಟಚಾರ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಕೊಟ್ಟಿದ್ದೇವೆ. ನಮ್ಮ ಮೇಲೆ ಆರೋಪ ಮಾಡುವ ಬದಲು ಅವರೂ ಅದೇ ರೀತಿ ಕೊಡಲಿ. ಲೋಕಾಯುಕ್ತವನ್ನು ಮುಚ್ಚಿದಂಥ ಪುಣ್ಯಾತ್ಮರು ಕಾಂಗ್ರೆಸ್’ನವರು. ಭ್ರಷ್ಟಾಚಾರ ವಿರುದ್ಧ ಸಂವಿಧಾನ ಬದ್ಧವಾದ ಸಂಸ್ಥೆಯನ್ನು ಮುಚ್ಚಿರುವವರು ಅವರು ನಮಗೆ ಪಾಠ ಹೇಳ್ತಾರಾ? ಎಂದು ಕಿಡಿಕಾರಿದರು.

ಮುಖ್ಯಮಂತ್ರಿ ವಿರುದ್ಧದ ಆರೋಪಗಳ ಸಹಿತ ಕಾಂಗ್ರೆಸ್ ವಿರುದ್ಧ 59 ಭ್ರಷ್ಟಾಚಾರ ಪ್ರಕರಣಗಳು ಲೋಕಾಯುಕ್ತದಲ್ಲಿ ದಾಖಲಾಗಿದ್ದವು. ಆ ಎಲ್ಲ ಪ್ರಕರಣಗಳನ್ನು ಮುಚ್ಚಿ ಹಾಕಲು ಭ್ರಷ್ಟಾಚಾರ ನಿಗ್ರಹ ದಳವನ್ನು ಕಾಂಗ್ರೆಸ್’ನವರು ಆರಂಭಿಸಿದರು. ಹಿಂದಿನ ಆ ಎಲ್ಲ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಕೊಡುತ್ತಿದ್ದೇವೆ ಎಂದರು.

ತಾವು ಹಿಂದೆ ಮಾಡಿದ ಪಾಪದ ಕೆಲಸವನ್ನು ಮುಚ್ಚಿ ಹಾಕಲು ಈ ರೀತಿಯ ಪ್ರತಿಭಟನೆಯನ್ನು ಕಾಂಗ್ರೆಸ್’ನವರು ಮಾಡುತ್ತಿದ್ದಾರೆ. ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಎಂದೂ ಟೀಕಿಸಿದರು.

ಹಿಂದಿನ ಲೇಖನಪ್ರಾದೇಶಿಕ ಭಾಷೆಗಳಲ್ಲಿ ಸುಪ್ರೀಂ ಕೋರ್ಟ್ ತೀರ್ಪು: ಸಿಜೆಐ ಅವರಿಗೆ ಪ್ರಧಾನಿ ಮೋದಿ ಶ್ಲಾಘನೆ
ಮುಂದಿನ ಲೇಖನಲಂಚ ಪ್ರಕರಣ: ಇಬ್ಬರು ಅಧಿಕಾರಿಗಳಿಗೆ ನಾಲ್ಕು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದ ಕರ್ನಾಟಕ ನ್ಯಾಯಾಲಯ