ಮನೆ ಜ್ಯೋತಿಷ್ಯ ಗೃಹದ ಗುಣ ಫಲ

ಗೃಹದ ಗುಣ ಫಲ

0

         ಮೇಲೆ ಹೇಳಿದ 11ನೇ ವರ್ಗದ ಸಂಖ್ಯೆಯಾದ ದಿಕ್ಪಾಲಕರ ಸಂಖ್ಯೆಯನ್ನು ಎಂಟರಿಂದ ಗುಣಿಸಿ ಮೂರರಿಂದ ಭಾಗಿಸಿದರೆ ಶೇಷವು ಒಂದು ಉಳಿದರೆ ಸತ್ವಗುಣ, ಎರಡು ಉಳಿದರೆ ರಾಜೋಗುಣ, ಸೊನ್ನೆ ಉಳಿದರೆ ತಮೋಗುಣ ಎಂದು ತಿಳಿಯಬೇಕು.ಇದರಲ್ಲಿ ಸತ್ವ ಗುಣ ಒಳ್ಳೆಯ ಉತ್ತಮ ಫಲದಾಯಕವು, ರಾಜೋ ಗುಣವು ಮಧ್ಯಮ ಫಲದಾಯಕವು. ತಮೋಗುಣವು ಅಶುಭ ಫಲದಾಯಕವು.

 ಗೃಹದ ಅವ್ಯಸ್ಥೆ :

      ಹಿಂದೆ ಹೇಳಿದ ಹತ್ತನೇ ವರ್ಗದ ಆಯುಷ್ಯ ಸಂಖ್ಯೆಯನ್ನು ನಾಲ್ಕರಿಂದ ಭಾಗಿಸಿದರೆ ಶೇಷವು ಒಂದು ಉಳಿದರೆ ಬಾಲ್ಯಾ ವ್ಯವಸ್ಥೆ, ಶೇಷವು ಎರಡು ಉಳಿದರೆ ಕುಮಾರವ್ಯವಸ್ಥೆ ಉತ್ತಮ ಮೂರು ಉಳಿದರೆ ಯೌವನಾವಸ್ಥೆ ಸಾಮಾನ್ಯವು. ನಾಲ್ಕು ಉಳಿದರೆ ವರ್ಧಕ್ಯ ಅಶುಭ ಹೀಗೆಂದು ತಿಳಿಯಬೇಕು.

 ಕಟ್ಟಡದ ಎತ್ತರದ ಅಳತೆ :

     ಕಟ್ಟಡವು ಭೂಮಿಯ ಮಟ್ಟಕ್ಕಿದ್ದರೆ ಕನಿಷ್ಠವು ಭೂಮಿಯಿಂದ ಒಂದು ಮೊಳ ಎತ್ತರವಿದ್ದರೆ ಮಧ್ಯಮ. 2 ಮೊಳ ಎತ್ತರವಿದ್ದರೆ ಉತ್ತಮವು  ಒಟ್ಟಿನಲ್ಲಿ ಕಟ್ಟಡವು ಭೂಮಿಯ ಮಟ್ಟಕ್ಕಿಂತ ಎತ್ತರಾಗಿಯೇ ಕಟ್ಟಿಸಬೇಕೆಂದು ಶಾಸ್ತ್ರಕಾರರ ಅಭಿಪ್ರಾಯ.

 ಆಯಗಳ ಜೋಡಣೆ :

     ಒಂದೇ ಆಯದ ಒಳಭಾಗದಲ್ಲಿರುವ ಕೋಣೆಗಳಿಗೆ ಬೇರೆ ಬೇರೆ ಆಯಗಳನ್ನು ಮಾಡಬಾರದು. ಮಾಡಿದರೆ ದೋಷ ಉಂಟಾಗುವದು. ಕಾರಣ ಯಾವ ಆಯದ ಮೇಲೆ ಇರುವದೋ ಅದೇ ಆಯದ ಕೋಣೆಯಲ್ಲಿಗಳಿರುವದು ಅತ್ಯುತ್ತಮವು. ಇದಲ್ಲದೆ ಒಂದು ಆಯದ ಮೇಲೆ ಎದುರಿಗೆ ಮತ್ತು ಎಡಬಲ ಹಿಂದೆ ಬೇರೆ ಬೇರೆ ಆಯದ ಮನೆಗಳಿದ್ದರೆ ಹೇಗೆ ಹೇಳಿದಂತೆ ಫಲಾ ಪಲಗಳುಂಟಾಗುತ್ತವೆ.

      ಸಿಂಹಾಯವಿರುವ  ಮನೆಯ ಎದುರಿಗೆ ಧ್ವಜಾಯವಿರುವ  ಮನೆ ಇದ್ದರೆ ಎರಡು ಮನೆಗಳಿಗೆ ಶುಭಕರವು.ಧ್ವಜಾಯದ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ವೃಷಭಾಯವಿದ್ದ ಮನೆ ಇದ್ದರೆ ಎರಡೂ ಮನೆಯವರಿಗೆ ಅತ್ಯುತ್ತಮ ಶುಭ ಫಲಗಳುಂಟಾಗುವು. ಸಿಂಹಾಯದ ಬಲಭಾಗಕ್ಕೆ ಪರಭಾರೆ ಗಜಾಯವಿದ್ದರೆ ಸರ್ವ ಶ್ರೇಷ್ಠ ಶುಭಫಲಗಳು ಸಿಂಹಾಯದ ಎದುರು ಗಜಯಾವಿದ್ದರೆ. ಗಜಾಯದ ಮನೆಗೆ ನಷ್ಟವು ಗಜಯಾನದ ಹಿಂದೆ  ಸಿಂಹ ಯಾವುದು ಇರುವ ಮನೆಗೆ ಮಾತ್ರ ಸರ್ವ ಶೇಷ್ಠ ಶುಭ ಫಲಗಳು ಸಿಂಹ ಯಾದ ಎರೆದರು ಗಜಾಯವಿದ್ದರೆ ಗಜಾಯಾದ ಮನೆಗೆ ನಷ್ಟವು ಗಜಾಯದ ಹಿಂದೆ ವೃಷಭಾಯ ವಿದ್ದರೂ ವೃಷಭಾಯದ ಮುಂದೆ ಸಿಂಹಾಯವಿರುವ ಮನೆ ಇದ್ದರೂ ಎರಡೂ ಮನೆಗಳಿಗೆ ಅರಿಷ್ಟವು ಸಿಂಹಾಯದ ಧ್ವಜಾಯ ವಿರಬಾರದು   ಇದ್ದರೆ ಸಿಂಹಾಯದ ಮನೆಯವರಿಗೆ ಅರಿಷ್ಟವು.

   ಕಾರ್ತಿಕ ಮಾಸದಲ್ಲಿ ವಾಸ್ತುಪುರುಷನು ಪೂರ್ವಕ್ಕೆ ತಲೆಯನ್ನು ಮಾಡಿಕೊಂಡಿರುತ್ತಾನೆ. ಮತ್ತು ಈ ಕಾರ್ತಿಕ ಮಾಸದಲ್ಲಿ ಶುದ್ಧದಲ್ಲಿ ರಾಜಯೋಗ ಮಾಡುತ್ತಾನೆಂದೂ ಬಹುಳದಲ್ಲಿ ಗುಳೇವು ಹೋಗುತ್ತಾನೆಂದೂ ತಿಳಿಯಬೇಕು.ಈ ಪ್ರಕಾರ 12 ತಿಂಗಳಲ್ಲಿಯೂ ನೋಡಿ ತಿಳಿದುಕೊಳ್ಳಬೇಕು.

 ವಾಸ್ತು ಪುರುಷನ ಇರುವ ಸ್ಥಿತಿಯು :

 ಶ್ಲೋಕ :

 ನಭಸ್ಯಾ ದಿಕ್ಷು ಮಾಸೇಸು ತ್ರಿಸು ತ್ರಿಸು ಯಥಾಕ್ರಮಂ|

 ಪೂರ್ವಾದಿ ದಿಕ್ಕಿರಾವಮ ಪರ್ಶ್ವಶಾಯಿ  ಪ್ರದಕ್ಷಿಣಂ||

 ಅರ್ಥ: ವಾಸ್ತುಪುರುಷನ್ನು ಭಾದ್ರಪದ ಮಾಸ ಮೊದಲು ಮಾಡಿಕೊಂಡು ಮೂರು ಮೂರು ಮಾಸಗಳಲ್ಲಿ ಕ್ರಮವಾಗಿ ಪೂರ್ವದಿ 4 ದಿಕ್ಕುಗಳಿಗೂ ತಲೆಯನ್ನು ಮಾಡಿಕೊಂಡು ಎಡ ಮಗ್ಗುಲು ಮಲಗಿ ಎದುರು ದಿಕ್ಕನ್ನು ನೋಡುತ್ತಿರುವನು.

 ಥರ ಹಾಕುವ ನಿಯಮ ಮತ್ತು ಪದ್ಧತಿ :

     ಮನೆ ಕಟ್ಟುವ ಥರವನ್ನು ಹಾಕಬೇಕಾದರೆ ಮನೆಯ ಉದ್ದ ಅಗಲಗಳನ್ನು ಮೊಳಗಳಿಂದ ಬರುವ ಶುಭ ಆಯವನ್ನೇ ನಿರ್ಣಯಿಸಿ ಅಷ್ಟು ಮೊಳಗಳ ಹೊರಬಾಜು ಥರವನ್ನು ಹಾಕಬೇಕು. ಅಂದರೆ ಯಾವ ಆಯದಂತೆ ಮನೆಯನ್ನು ಕಟ್ಟುವದಿರುವದೋ ಆ ಆಯಕ್ಕೆ ಹೇಳಲ್ಪಟ್ಟ ಉದ್ದ ಅಗಲ  ಮೊಳಗಳ ಅಳತೆಯ ಮನೆ ಕಟ್ಟುವ ಗೋಡೆಯ ಒಳ ಭಾಗವಾಗಬೇಕು. ಗೃಹಸ್ಥರ ಮನೆಗಳಿಗೆ ಒಳಥರವೇ ಮುಖ್ಯವೂ ಮಠ ಆಶ್ರಮಗಳಿಗೆ ಮಧ್ಯ ಥರವೇ ಮುಖ್ಯವು. ದೇವಾಲಯ ಒಳ, ಹೊರಗಿನ ಥರವೇ ಮುಖ್ಯವು. ಗೋಡೆಯ ಹೊರಭಾಗದಿಂದ ಆಯ ನಿರ್ಣಯಿಸಬೇಕು. ಹೀಗೆ ಅಳತೆಯನ್ನು ನಿರ್ಣಯಿಸಿ ಥರ ಹಾಕುವದೇ ಯೋಗ್ಯವು ಇದುವೇ ಶಾಸ್ತ್ರ ಸಮ್ಮತವು  ಪಂಚಾಂಗ ಶುದ್ದಿ ಇರುವಾಗಲೂ ಶುಭ ಲಗ್ನ ಸ್ಥಿರ ಲಗ್ನ,ಗ್ರಹ ಬಲಾದಿಗಳನ್ನು ನೋಡಿಯೇ ಶುಭ ವೇಳೆಯಲ್ಲಿ ಥರವನ್ನು ಹಾಕಬೇಕು.