ಮನೆ ಸುದ್ದಿ ಜಾಲ ಮುಸ್ಲಿಂ ಕುಟುಂಬದ 8 ಮಂದಿಗೆ ಹಿಂದು ಧರ್ಮದ ಮರು ದೀಕ್ಷೆ

ಮುಸ್ಲಿಂ ಕುಟುಂಬದ 8 ಮಂದಿಗೆ ಹಿಂದು ಧರ್ಮದ ಮರು ದೀಕ್ಷೆ

0

ಮುಜಾಫರ್​ನಗರ(MujafarNagar)(ಉತ್ತರಪ್ರದೇಶ): ಎರಡು ಮುಸ್ಲಿಂ ಕುಟುಂಬಗಳ(Muslim Family) ಎಂಟು ಜನರು ತಾವೇ ಸ್ವತಃ ಒಪ್ಪಿಕೊಂಡು ಹಿಂದು ಧರ್ಮವನ್ನು(Hindu religion) ಶಾಸ್ತ್ರೋಕ್ತವಾಗಿ ಸ್ವೀಕರಿಸಿರುವ ಘಟನೆ ಜಿಲ್ಲೆಯ ಮೀರತ್ ನಲ್ಲಿ ನಡೆದಿದೆ.

ಬಾಘ್ರಾದ ಯಶ್ವೀರ್​ ಆಶ್ರಮದಲ್ಲಿ ನಡೆದ ಶುದ್ಧಿ ಯಜ್ಞದಲ್ಲಿ ಪಾಲ್ಗೊಂಡ ಮುಸ್ಲಿಂ ಕುಟುಂಬದವರಿಗೆ ಹಿಂದೂ ಧರ್ಮದ ಮರು ದೀಕ್ಷೆ ನೀಡಲಾಗಿದೆ. ಆಚಾರ್ಯ ಮೃಗೇಂದ್ರ ಬ್ರಹ್ಮಚಾರಿ ಅವರು ವೇದ ಮಂತ್ರಗಳನ್ನು ಪಠಿಸಿ ಘರ್​ ವಾಪಸಿ ಮಾಡಿಕೊಂಡರು.

ಬಳಿಕ ಆಶ್ರಮದ ಮಹಂತ್ ಸ್ವಾಮಿ ಯಶ್ವೀರ್ ಮಹಾರಾಜ್ ಮಾತನಾಡಿ, ಇಂದು ನಡೆದ ಕಾರ್ಯಕ್ರಮದಲ್ಲಿ ಮುಸ್ಲಿಮರ 2 ಕುಟುಂಬದ 8 ಮಂದಿ ಶುದ್ಧಿ ಯಾಗದಲ್ಲಿ ಭಾಗವಹಿಸಿ, ಗಾಯತ್ರಿ ಮಂತ್ರವನ್ನು ಪಠಿಸುವ ಮೂಲಕ ಮತ್ತೆ ಹಿಂದೂ ಧರ್ಮವನ್ನು ಸೇರಿಕೊಂಡಿದ್ದಾರೆ ಎಂದು ತಿಳಿಸಿದರು.

ಹಿಂದು ಧರ್ಮಕ್ಕೆ ವಾಪಸ್ಸಾದ 8 ಮಂದಿಯು ಮುಸ್ಲಿಂ ಹೆಸರನ್ನು ತೊರೆದು ಹಿಂದು ಧರ್ಮದ ಹೆಸರುಗಳನ್ನು ಪಡೆದುಕೊಂಡಿದ್ದಾರೆ. ಶಾಹಿಸ್ತಾ ಎಂಬ ಮಹಿಳೆಗೆ ರಾಧಾ ಎಂದು ಮರು ನಾಮಕರಣ ಮಾಡಿದರೆ, ಬರ್ಖಾ ಎಂಬಾಕೆಗೆ ವರ್ಷ, ರಶೀದಾಗೆ ಗೀತಾ, ಅಕ್ಬರ್ ಹೆಸರಿನ ವ್ಯಕ್ತಿಗೆ ಕೃತಪಾಲ್, ಇಕ್ರಾ ಬದಲಾಗಿ ಶೀತಲ್, ಗುಲ್ಲು ಎಂಬಾತನಿಗೆ ಕಾರ್ತಿಕ್‌, ಎಹ್ಸಾನ್‌ಗೆ ಸಚಿನ್ ಮತ್ತು ಹರೂನ್‌ಗೆ ಅರುಣ್ ಎಂದು ಹೆಸರಿಸಲಾಗಿದೆ.