ಚಿತ್ತಾ ನಕ್ಷತ್ರ ಪತಿಯಿಂದ ಸಂತೃಪ್ತಿ ಜೀವನ ಸಾಗಿಸುವವಳು, ಪತಿಭಕ್ತಿ ಪಾರಾಯಣಳೂ ಆಗುತ್ತಾಳೆ. ಪತಿಯ ಉದ್ಯೋಗದಲ್ಲಿ ಸಹಾಯಕಳೂ, ಯೋಗ್ಯ ನಿರ್ಣಾಯಕಳೂ ಆಗುತ್ತಾಳೆ. ಬುದ್ಧಿವಂತೆಯಾದ ಈಕೆ ದಾನ ಧರ್ಮ ಪರೋಪಕಾರ ಬುದ್ಧಿಯಲ್ಲಿಯೂ ನಿರಂತಳು. ಈಕೆ ಆರೋಗ್ಯ ಭಾಗ್ಯ ಬುದ್ಧಿ ಮತ್ತೆಯುಳ್ಳ ಮಕ್ಕಳನ್ನು ಹೊಂದುವಾಕೆಯು.
ಸ್ವಾತಿ ನಕ್ಷತ್ರ ಈ ನಕ್ಷತ್ರದಲ್ಲಿ ಋತುಮತಿಯಾದವಳು ತನ್ನ ಹುಟ್ಟಿದ ಮನೆಗೂ ಕೊಟ್ಟ ಮನೆಗೂ ಕೀರ್ತಿಯನ್ನು ತರುವಾಕಿಯು. ಜ್ಞಾನವಂತಳು, ಗುರು ಹಿರಿಯಲ್ಲಿ ಆದರಾಭಿಮಾನವುಳ್ಳವಳು. ಪತಿಯ ನೆರಳಲ್ಲಿ ಸದಾಕಾಲ ಇದ್ದು ಸುಖೀಜೀವನ ನಡೆಸುವವಳೂ ಆಗುತ್ತಾಳೆ. ಪುತ್ರ ವತಿ ಹಾಗೂ ಪತಿವ್ರತೆಯಾಗಿ ಇರುವಳು.
ವಿಶಾಖ ನಕ್ಷತ್ರ ಪತಿಗೆ ಕಷ್ಟ ನಷ್ಟಗಳನ್ನುಂಟು ಮಾಡುವವಳೂ, ಆಶೆ ಬುರುಕಳೂ ನೆರೆಹೊರೆಯವರಲ್ಲಿ ಬಂಧು ಬಳಗದವರಲ್ಲಿ ಅಸೂಯೆಯುಳ್ಳಾಗೆಯು. ಪುತ್ರ ಹೀನಳು ಸದಾ ಕೋಪಿಷ್ಠಳಾಗಿ ಕುಟುಂಬದ ವಾತಾವರಣವನ್ನು ಕಲುಷಿತಗೊಳಿಸುವವಳೂ ಆಗುತ್ತಾಳೆ.
ಅನುರಾಧ ನಕ್ಷತ್ರ ಪುಷ್ಪವತಿ ಯಾದವಳು ಸುಪುತ್ರನನ್ನು ಹೆತ್ತು ಗಂಡನ ಮನೆಗೆ ಸುಖ ಸಮೃದ್ಧಿಯನ್ನು ತಂದು ಕೊಡುವಾ ಕೆಯು ಸಮಾಧಾನ ಚಿತ್ತಳಾದ ಈಕೆಯಿಂದ ಪತಿಗೆಉತ್ಸಾಹ ಪ್ರೇಮ ಸಂತೃಪ್ತಿ ಜೀವನ ಒದುಗುವುದು. ಸೌಭಾಗ್ಯವತಿಯಾಗಿ ಪತಿಗೆ ಅನುಕೂಲೆಯಾದ ಸತಿಯಾಗಿದ್ದು ಅತ್ತೆ ಮಾವಂದಿರಿಂದ ಗೌರವಕ್ಕೆ ಪಾತ್ರಳಾಗುವಳು.
ಮೂಲಾ ನಕ್ಷತ್ರದಲ್ಲಿ ಪುಷ್ಪವತಿ ಯಾದವಳು ಸಕಲ ಸುಖ ಸಂಪದಭಿಮೃದ್ಧಿಯನ್ನು ಕಾಣುವಳು. ಸದ್ಗುಣಿಯಾದ ಮಕ್ಕಳನ್ನು, ಅನುಕೂಲನಾಗಿರುವ ಪತಿಯನ್ನು ಹೊಂದುವಳು. ತನ್ನ ಕರ್ತವ್ಯದಲ್ಲಿ ನಿರತಳಾಗಿದ್ದು ಸದಾ ತನ್ನ ವಂಶದ ಕೀರ್ತಿಯನ್ನೇ ಆಶಿಸುವವಳೂ ಆಗುತ್ತಾಳೆ.
ಪೂರ್ವಾಷಾಡ ನಕ್ಷತ್ರದಲ್ಲಿ ಋತುಮತಿಯಾದಾಕೆಯು ಪತಿಯನ್ನು ಮೊದಲಿಸುವಾಕೆಯೂ, ಪ್ರತಿಗೃಹದಲ್ಲಿ ಇರಲು ನಿರಾಕರಿಸುವವಳೂ ಕಲಹ ಪ್ರಿಯಳೂ ಸದಾ ವ್ಯಸನಿಯೂ, ದಯಾ ಹೀನಳೂ, ಬಂಧು ಬಳಗದವರಿಂದ ದೂರವಾಗಿರಲು ಇಚ್ಛಿಸುವಳೂ ಆಗುತ್ತಾಳೆ. ಈಕೆ ಅನಿಷ್ಟ ಮಕ್ಕಳನ್ನು ಹೆರುವಾಕೆಯು.