ಜಂಬೂ ದ್ವೀಪದಲ್ಲಿನ ಉತ್ತರದಲ್ಲಿರುವ ಹಿಮವತ್ಪರ್ವತಗಳಿಂದ ಹಿಡಿದು ದಕ್ಷಿಣ ಸಮುದ್ರ ತೀರದವರೆಗೂ 9000 ಯೋಜನಗಳು ವ್ಯಾಪಿಸಿದ ಸುವಿಶಾಲ ಭೂಮಿ ಭಾಗವನ್ನು ಭಾರತ ಖಂಡವೆಂದು ಕರೆಯುವರು, ಈ ಕಿಂಪುರುಷಾದಿ ಖಂಡಗಳೆಲ್ಲವೂ ನಿರಂತರ ಭೋಗ ಭೂಮಿಗಳಾಗಿರುವುದರಿಂದ ಭಾರತದೇಶವು ಕರ್ಮ ಭೂಮಿಯಾಗಿ ನೆಲೆಸುತ್ತಿದೆ.
ಇದರಲ್ಲಿ ಸತ್ಕರ್ಮಗಳನ್ನು ಆಚರಿಸಿದ ಪುಣ್ಯ ಜೀವಿಗಳಿಗೆ ಸ್ವರ್ಗವು, ಪಾಪಚಿತ್ತರಿಗೆ ನರಕವು ಸಂಪ್ರಾಪ್ತಿಸಿದೆ. ಇಲ್ಲಿ ಮಾನವರು ಭಕ್ತಿಯಿಂದ ಅನುಷ್ಠಾಪಿಸಿದ ಯಜ್ಞ ಯಾಗಾದಿಗಳಿಂದ ದೇವತೆಗಳಿಗೆ ಹವಿಸ್ಸುಗಳು ತಳಪುತ್ತವೆ. ಈ ಭರತ ಖಂಡದಲ್ಲಿ ಏಳು ಪರ್ವತ ಶ್ರೇಣಿಗಳು ಮುಖ್ಯವಾದವು. ಈ ಕುಲ ಪರ್ವತಗಳಾದ ಮಹೇಂದ್ರ, ಮಲಯ, ಸಹ್ಯ, ಶಕ್ತಿಮಂತ, ಋಕ್ಷ, ವಿಂದ್ಯ, ಪಾರಿಪತ್ರಗಳು ಇವೆ.ಇದರಲ್ಲಿ 9 ದೀಪಗಳಿವೆ.ಅವು ಇಂದ್ರ ದೀಪ, ಕಸೇರುಮ ದ್ವೀಪ ತಾಮ್ರಪರ್ಣ ದ್ವೀಪ್ತ,ಗಭಸ್ತೀಮಂತ ದ್ವೀಪ,ನಾಗದ್ವೀಪ,ಸೋಮ್ಯದೀಪ ಗಾಂಧರ್ವ ದ್ವೀಪ, ವಾರುಣ ದ್ವೀಪ, ಕುಮಾರಿಕಾ, ದ್ವೀಪಗಳು. ಇವು ತಲಾ ಸಹಸ್ರ ಯೋಜನ ವೈಶಾಲ್ಯವನ್ನು ಹೊಂದಿವೆ. ಇವಲ್ಲದೇ ಭಾರತ ಖಂಡವನ್ನು ಸುತ್ತಿಕೊಂಡಿರುವ ಸಮುದ್ರ ಮಧ್ಯದಲ್ಲಿ ಅಂಗ ದ್ವೀಪ, ಯಮ ದ್ವೀಪ, ಮತ್ಸ್ಯದ್ವೀಪ, ಕುಮುದ ದ್ವೀಪ, ಕುಶದ್ವೀಪ,ವರಾಹ ದ್ವೀಪ,ಶಂಖ ದ್ವೀಪ ಎಂಬ ಆರು ದ್ವೀಪಕಲ್ಪಗಳೂ ಸಹ ಇವೆ.
ಆದಿಕಾಲದಿಂದಲೂ ಭರತ ಖಂಡವು ಬಹು ಜನ ಸಂಕುಲವಾದುದು. ಇದರಲ್ಲಿ ಪ್ರಜ್ಮಂಡಲದಲ್ಲಿ ಕಿರಾತರು,ಪಶ್ಚಿಮದಲ್ಲಿ ಯಮನರು, ಮಧ್ಯಭಾಗದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಜಾತಿಯವರು ಯಥಾ ಯೋಗ್ಯವನ್ನಾಗಿ ಕುಲವೃತ್ತಿಗಳನ್ನು ಅನುಸರಿಸುತ್ತಿದ್ದಾರೆ.ಹಿಮವತ್ಪರ್ವತದ ಪಾದ ಪ್ರದೇಶದಿಂದ ಶತದ್ರುವು ಚಂದ್ರಭಾಗಾ ನದಿಗಳು ಅವತರಿಸಿದವು. ಪಾರಿಪತ್ರದಲ್ಲಿ ವೇದಸ್ಕೃತಿ,ವಿಧ್ಯಾಚಲದಿಂದ ನರ್ಮದಾ, ಸುರಸಾ ನದಿಗಳು ಹುಟ್ಟಿದವು.ಋಕ್ಷಾದ್ರಿಯಲ್ಲಿ ತಾಪಿ,ಪ್ರಯೋಷ್ಣಿ ನಿರ್ವಿದ್ಯಾ ನದಿಗಳು ಸಹ್ಯಾದ್ರಿಯಿಂದ ಗೋದಾವರಿ,ಭೀಮರಥ, ಕೃಷ್ಣವೇಣಿ ನದಿಗಳು ಜನಿಸಿದವು.ಮಲಯ ಪರ್ವತಗಳಲ್ಲಿ ತಾಮ್ರ ಗರ್ಣಿ,ಕೃತ ಮಾಲಾ ನದಿಗಳು ಮಹೇಂದ್ರಾದ್ರಿಯಿಂದ ತ್ರಿಸಾಮ, ಋಷಿ ಕುಲ್ಯಾದಿಗಳು ಪ್ರವಹಿಸಿದವು ಶಕ್ತಿಮತದಲ್ಲಿ ಕುಮಾರಾ ನದಿಗಳು ಪ್ರಾದುರ್ಭಸಿದವು. ಭಾರತದಲ್ಲಿ ದಕ್ಷಿಣದಲ್ಲಿ ಪುಂಡ್ರರು,ಕಾಳಿಂಗರು, ಮಗಧರು ಹಾಗೂ ದಕ್ಷಿಣಾದಿ ಜಾತಿಗಳವರೂ ವಾಸಿಸುತ್ತಿದ್ದಾರೆ. ಪೂರ್ವದಲ್ಲಿ ಕಾಮರೂಪಿಗಳು, ಕಾಮರೂಪ ದೇಶದ ಉತ್ತರದಲ್ಲಿ ಕುರುಪಂಚಾಲ ಪ್ರಜೆಗಳು ಇದ್ದಾರೆ. ಪಶ್ಚಿಮ ತೀರ ಪ್ರಾಂತದಲ್ಲಿ ಸೌರಾಷ್ಟ್ರರು ಶೂರರು ಅಭೀರರು ಇರುತ್ತಿದ್ದಾರೆ.ಅರ್ಬುದ ಪರ್ವತದ ಸಮೀಪದಲ್ಲಿ ಕರೂಷ ಮಾಳವರು, ಪಾರಿ ಪಾತ್ರಗಳ ಬಳಿಯಲ್ಲಿ ಸೌವೀರರು ಇದ್ದಾರೆ. ಸೌವೀರರ ಸಮೀಪದಲ್ಲಿ ಸೈಂಧವರು ಹೂಣರು ಸಳ್ವರು, ಸಾಕಲ, ಮುದ್ರ ರಾಮ ಅಂಬಷ್ಟ ದೇಶಗಳವರು,ಪಾರಶೀಕರು ವಾಸಿಸುತ್ತಿದ್ದಾರೆ.ಇವರೆಲ್ಲರೂ ನದೀ ತೀರಗಳಲ್ಲಿನ ಸಾರಾಯುತವಾದ ಭೂಮಿಗಳಲ್ಲಿ ಬೆಳೆಗಳನ್ನು ಬೆಳೆದು,ಅನ್ನೋದಯಕವನ್ನು ಒದಗಿಸುತ್ತಿದ್ದಾರೆ .
ಆದಿಕಾಲದಿಂದಲೂ ಭಾರತ ಖಂಡದಲ್ಲಿನ ಎಲ್ಲಾ ಪ್ರದೇಶಗಳಲ್ಲಿಯೂ ಸರ್ವಕಾಲಗಲ್ಲಿಯೂ ನಿಷ್ಕಾಮುಕರಾದ ಮಹರ್ಷಿಗಳು ಪಾರಾರ್ಥ ಸೌಖ್ಯವನ್ನು ಪರಮ ಪದವನ್ನು ಜಯಿಸಿ ವೇದೋಕ್ತವಾದ ಯಜ್ಞ ಯಾಗಗಳೊಂದಿಗೆ ಭೂತ ತೃಪ್ತಿಯನ್ನುಂಟುಮಾಡುತ್ತಿದ್ದಾರೆ.ಭಕ್ತಿಪರರ ಪುಣ್ಯಫಲದಿಂದ ಪವಿತ್ರವಾದ ಜಂಬೂದ್ವೀಪದಲ್ಲಿ ಯಜ್ಞ ಪುರುಷನಾದ ಶ್ರೀಮನ್ನಾ ನಾರಾಯಣ ಅವತರಿಸಿ ಅರ್ತ ತಾಪವನ್ನು ನಾಶ ಮಾಡಿ ಮೋಕ್ಷವನ್ನು ಪ್ರಾರ್ಥಿಸುತ್ತಿದ್ದಾನೆ.
ಭರತ ವರ್ಷದಲ್ಲಿ ದೈವ ಕಾರ್ಯಗಳಿಗೆ ಯೋಗ್ಯವಾದ ಪುಣ್ಯ ನದಿಗಳು,ಅಸಂಖ್ಯಾತವಾಗಿ ಪ್ರವೇಶಿಸುತ್ತಿವೆ ಕುಲಪರ್ವತ ಶ್ರೇಣಿಗಳಲ್ಲಿ ಹುಟ್ಟಿ ಊಷರ ಕ್ಷೇತ್ರಗಳನ್ನು ಸಸ್ಯ ಶ್ಯಾಮಲವನ್ನಾಗಿಸಿ ಸಾಗರ ಸಂಗಮ ಮಾಡುತ್ತಿರುವ ಜೀವ ವಾಹಿನಿಗಳು ಈ ಖಂಡದ ವಾಸಿಗಳಿಗೆ ಪರಮಪದ ಸೋಪಾನವಾಗಿವೆ.ಈ ಪುಣ್ಯ ತರಂಗಿಣಿಗಳಲ್ಲಿ ಅಂತ್ರಶೀಲ, ಅದೃಷ್ಟ, ಅನುಷ್ಠ, ಆಸಿ, ಅಸಿಕ್ನಿ, ಇಕ್ಷು, ಮಾಳವಿ, ಇರಾವತಿ, ಉತ್ವಲವತಿ, ಉಪೇಂದ್ರ, ಋಷಿಕುಲ್ಯ ಓಘವತಿ, ಕಂಪನ, ಕಪಿಂಜಲ, ಕಪಿಲ, ಕರತೋಯ, ಕರೀಷಿಣಿ ಕಾಪಿ,ಕಾವೇರಿ,ಕುಂಡಲ, ಕುಬೇರ, ಕುಮಾರಿ, ಕುಶ ಚಿತ್ರ, ಕುಶಧಾರ, ಕೃತ್ಯ, ಕೃಷ್ಣವೇಣಿ, ಕೋಶ, ಕೌಶಿಕಿ,ಗಂಡಕಿ, ಗೋದಾವರಿ,ಗೋಮತಿ, ಗೌರಿಚಂದ್ರಭಾಗಾ, ಚಂದ್ರಮ,ಚರ್ಮಣ್ವತಿ,ಚಿತ್ರವಹ, ಚಿತ್ರಸೇನ, ಚಿತ್ರೋಪಲ, ಚುಲಕ, ಜಾಂಬೂನದಿ, ಜ್ಯೋತಿ ರಥ ತಮಸ, ತಾಮಸಿ, ತಾಮ್ರ, ತುಂಗವೇನ, ತ್ರಿದಿವ, ದಾಸಿ, ದಿಶ, ದುರ್ಗ, ದುಷ್ಟದ್ವತಿ, ದೇವಿಕ, ದೂತ ಪಾಪ, ದೃತವತಿ, ನರ್ಮದ, ನಾಳ, ನಿಚಿತ, ನಿವಾರ, ನಿಶ್ಚಿತ, ಪಂಚಮಿ, ಪಯೋಷ್ಣಿಪರ, ಪಲಾ ಶಿನಿ, ಪವಿತ್ರ ಪಾತಾಳವತಿ, ಪಾಪ ಹತ, ಪಿಂಜಲ ಪಿಚ್ಚಲ, ಪುರಾವತಿ, ಪುಷ್ಪವೇಣಿ, ಪೂರ್ಣಾಂಶ,ಪೂರ್ವಭಿರಾಮ ಪ್ರವರ, ಬಾಹುದ,ಬ್ರಹ್ಮಭೋದ್ಯ, ಬ್ರಹ್ಮಮೇದ್ಯ, ಬ್ರಹ್ಮಣೀ,ಭಗೀರಥೀ, ಭಾರದ್ವಜೀ, ಭೀಮ, ಭೀಮರಥಿ, ಮಂಜುಲ,ಮಂಜುವಾಹಿನಿ,ಮಂದವಾಹಿನಿ, ಮಂದಾಕಿನಿ, ಮಕರಿ ಮಥುವಾಹಿನಿ, ಮನಿಂಗ, ಮರಿಷ, ಮಹಾಗೌರಿ, ಮಹಿತ,ಮಹೇಂದ್ರ,ಮಹೋಪಮ, ಮುಕ್ತಿವತಿ, ಮೇನ, ಯಮುನ, ಯಾವಕ್ಷ,ರಜನಿ,ರಥಚಿತ್ರ, ರಹಸ್ಯ, ಶತಕುಂಭ, ರೋಹಿ ಲೋಹತರಣಿ ಲೋಹಿತ್ಯ,ವರವಶ, ವರಣ, ವಾಸ್ತು, ವೈತರಣಿ, ಶತದ್ರು, ಶತಬಲ, ಶಿವ, ಶೀಘ್ರ,ಶೈವ, ಸದಾ ಕಾಂತ, ಸದಾನೀರ, ಸರಯು, ಸರಸ್ವತಿ,ಸರ್ವ ಸಂಗ, ಸಿಂಧು, ಸುನಸ, ಸುಪ್ರಯಾಗ, ಸುವಾಮ,ಸುವಾಸ್ತು,ಸೇಲು,ಸೋನ,ಹರೀಶ್ರವ, ಹಸ್ತಿಸೋಮ, ಹಿರಣ್ಣತಿ, ಹೇಮ, ಮುಂತಾದವುಗಳು ಆಯಾ ಪ್ರದೇಶದ ವಾಸಿಗಳಿಗೆ ಪ್ರತಃಸ್ಮರಣೀಯಗಳಾಗಿವೆ. ನಿತ್ಯ ನೈಮಿತಿಕ ವಿಧಿಗಳೆಲ್ಲಕ್ಕೂ ಅವಶ್ಯಕವಾದಂತಹ ಈ ಅಮೃತವಾಹಿನಿಗಳಲ್ಲಿ ಜಲ ರೂಪವಾದ ಶ್ರೀಮನ್ನಾನಾರಾಯಣ ದಿವ್ಯತೇಜವನ್ನು ದರ್ಶಿಸಿ ಭಕ್ತರು ತನ್ಮಯರಾಗುತ್ತಾರೆ .
ಕರ್ಮಭೂಮಿಯಾಗಿರುವ ಭಾರತ ಖಂಡದಲ್ಲಿನ ಪ್ರಜೆಗಳು ಯಥಾ ಯೋಗ್ಯವಾಗಿ ಸುಕರ್ಮಗಳನ್ನು ಅನುಷ್ಠಸಿ ಭೋಗಭೂಮಿಗಳಿಗೂ, ಮೋಕ್ಷವಾದದಕ್ಕೂ ಶ್ರಮಿಸುತ್ತಿದ್ದಾರೆ.ದೇಶಕಾಲ ಪಾತ್ರೋಚಿತವಾದ ಆಚಾರ ಸಂಪ್ರದಾಯಗಳನ್ನು ಶಕ್ತ್ಯ ನುಸಾರವಾಗಿ ಅನುಸರಿಸಿ ಅವೆಲ್ಲರಲ್ಲೂ ಮಾನವ ಜೀವನವನ್ನು ಸಾರ್ಥಕ ಪಡಿಸಿಕೊಳ್ಳುತ್ತಿದ್ದಾರೆ. ಅವರಲ್ಲಿ ಅಂಗಾರರು, ಅಂಗರು, ಅಂತಚಾರರು,ಅತಾವಿಶೀಖರರು,ಅಧಿವಾಜ್ಯರು, ಅನುಪಾವೃತರು, ಅಪರಕಾಶರು ಅಪವಾಹರು, ಅಭೀರರು, ಅಳಿಂದಮರು, ಆಶ್ಚಕರು ಆತ್ರೇಯರು, ಉತ್ಕಳರು, ಉತ್ತಮರು,ಉಪಾವೃತರು, ಔದ್ರರು,ಕಕ್ಷರು,ಕರ ಭಂಜೀಕರು,ಕರೀತರು, ಕರಿಷಕರು,ಕರೂಷರು, ಕರ್ದಾಟರು, ಕಾರ್ತಿಕರು, ಕಾಂಭೋಜನರು, ಕಾಲಜೋಷರು,ಕಾಲವರು, ಕಾಳಿಂಗರು, ಕಾಶೀರೋಸಲರು,ಕಾಶ್ಮೀರಿಗಳು,ಕಾಶ್ಯರು, ಕಿರಾತಕರು,ಕುಂತಕರು, ಕುಂತಲರು, ಕುಕ್ಕುದರು ಕುತ್ತ ಪಾರಾಂತರು, ಕುರುವಂಶ್ಯರು, ಕುರುವರ್ಣಕರು, ಕುಲಷ್ಟರು, ಕುಲ್ಯಾದ್ಯರು, ಕುಳಿಂದಾಂಪತ್ಯಕರು, ಕುಶವಿಂದರು, ಕೇಕಯರು, ಕೇರಳರು, ಕೋಕರಕರು ಕೌಕಣರು, ಕಾಕುತ್ತಕರು, ಕೌರವ್ಯರು, ಕೌಶೀಜರು, ಖಾಸೀರರು, ಗಿರಿಹ್ವರರು ಗೋಪಾಲಕಕ್ಷರು ಘೃತಸೃಂಜಯರು, ಚಕ್ರರು, ಚರ್ಮ ಮಂಡಲರು, ಚೈದ್ಯನರು, ಚೋಳರು, ಚಿನರು ಜಾಂನಾರರು, ಜಠಾರರು,ಜಿಲ್ಲೀಕರು, ತಂಗಣರು,ತನಬಾಲರು, ತನಯರು, ತಾಮ್ರಲಿಪ್ತರು, ತೋಮರರು ತ್ರಿಗರ್ತರು,ದರದರು ಧರ್ಮರು, ದಶಮಾಲಿಕರು, ದಶೀವಿದರ್ಭರು ದಾಶಾರ್ಣರು,ದ್ರವೀರರು, ದ್ವಜಿನ್ಯುತ್ಮ, ಸಂಕೇತರು ನಲಕಾನನರು, ನೈಕಪೃಷ್ಟರು ಪರತಂಗಣರು,ಪಾರಾಂತರು,ಪಹ್ನವರು, ಪಾಂಚಾಲರು, ಪಾಂಶು ರಾಷ್ಟ್ರರು ಪಾರಶೀಕರು, ಪಾರ್ವತೀಯರು ಪಾಶಿವಾತರು,, ಪುಳಿಂದರು, ಪೌಂಡ್ರರು, ಪ್ರಹಲ್ಲಾದರು ಪ್ರಾಚ್ಛಕ್ಕರು ಪೋಷಕರು, ಪೋಷ್ಠರು, ಬದ್ನರು, ಭರ್ಜರರು ಬಹುಬಾದರು ಬಾಗಲೇಕರು ಬೋಧರು ಭರತರು ಭಾರದ್ವಜರು, ಭೋಜರು, ಮಂದಕರು, ಮತ್ಸ್ಯುರು ಮುದ್ರ ಭುಜಂಗರು, ಮಲಯರು, ಮಲ್ಲರಾಷ್ಟ್ರರು, ಮಲ್ಲರು, ಮಾಗಧರು, ಮಾದ್ರೇಯರು ಮಾಲವರ್ತರು, ಮಾನವಾರನು, ಮಾಹಿಕರು, ಮಾಹೀಷಿಕರು, ಮೂಷಕರು, ಮೇಖಕರು,ಮೇರುಭೂತರು,ಮ್ಲೆಚ್ಚರು, ಯಕ್ರಿಲ್ಲೋಮರು, ಯವನರು, ರಮಣರು, ರೂಪವಾಹಿಕರು,ರೋಮಣರು, ವಂಗರು, ವಕ್ರತಪಸರು, ವಾತಜರು,ರಥೋರಜರು, ವಾತಾಧಾನರು, ವಾತಾಯನರು, ವಾನರಾಸ್ಯರು, ವಾನವಾಸಕರು,ವಾನಿವರು, ವಿಂದ್ಯಚುಳುಕರು,ವಿಕಲ್ಯರು, ವಿಜಯರು, ವಿದರ್ಭರು, ವಿದೇಹರು, ಶಕುರು, ಶಕ್ತಿದ್ಗಾಹುರು, ಶನೀಯರು ಶಾಲ್ವಸೇನರು, ಶಾಸಿಕರು, ಶೂರಸೇನರು ಶೈವಾಲರು, ಶೈಣಿಕತರು, ಸುಮಂಗಲರು, ಸಮಾವೇಗವಸುವವರು ಸಾಳ್ವರು, ಸಿಂಧುಪುಳಿಂದರು,ಸಿದ್ದರು, ಸುಕೂತ್ಯರು,ಸುಧಾಮರು, ಸುನಯರು, ಸುಮಲ್ಲರು, ಸೋಧರು,ಸೌವಲ್ಯರು, ಸೌಹೃದರು, ಸ್ತನಯೋಷಿಕರು,.ಸ್ವಕ್ಷರು ಸ್ವ ರಾಷ್ಟ್ರರು, ಷಂಡರು, ಹಂಸವರ್ಗರು, ಹೂಣರು,ಮುಂತಾದ ಅನೇಕ ಜಾತಿಯವರಿದ್ದಾರೆ.ಇವರೆಲ್ಲರೂ ದೈವ ಸ್ವರೂಪಿಗಳೇ ಎಂದು ಗುರುತಿಸಿ ಪ್ರತಿಯೊಬ್ಬರಲ್ಲಿಯೂ ಪ್ರತ್ಯಕ್ಷವಾಗಿ ವಾಸುದೇವನನ್ನು ದರ್ಶಿಸಬಲ್ಲ, ಪುಣ್ಯಾತ್ಮರ ಸುಕೃತವೇ ಸುಕೃತ.
ಭಾರತ ಖಂಡಕ್ಕೆ ಪರ್ಯಾವರಣದಲ್ಲಿ ಭೂಮಿಗೆ ಉಡುದಾರದಂತೆ ಸುತ್ತಿಕೊಂಡು ರತ್ನಾಕರವಿಗೆ ಅದರಲ್ಲಿ ಸಾವಿರಾರು ಯೋಜನೆಗಳ ಸುವಿಶಾಲ ದ್ವೀಪಗಳು 9 ಕಾಣಿಸುತ್ತವೆ.ಇಂತಹ ಶುಭದಾಯಕ ಪುಣ್ಯಕ್ಷೇತ್ರಗಳು ಮಹಾನದಿಗಳು, ಕುಲಪರ್ವತಗಳು ನೆಲೆಸಿದ ಪ್ರದೇಶವು ಇಲ್ಲಿ ಹೊರತುಪಡಿಸಿದರೆ ಬೇರೆ ಎಲ್ಲೂ ಇಲ್ಲ. ಈ ಕರ್ಮ ಭೂಮಿಯಲ್ಲಿ ಜನಿಸಿದ ಮಾನವರಿಗೆ ಲಭಿಸುವಂತಹ ಸಂತೋಷವೂ ವರ್ಣನಾತೀತವಾದುದು.