ಕೆಲ ದಿನಗಳ ಹಿಂದಷ್ಟೇ ನಟ ಶಿವರಾಜಕುಮಾರ್ ಅಭಿನಯದ “ಭೈರತಿ ರಣಗಲ್’ ಸಿನಿಮಾದ ಮುಹೂರ್ತ ಅದ್ಧೂರಿಯಾಗಿ ನೆರವೇರಿತ್ತು. ಮುಹೂರ್ತದ ಬಳಿಕ ಕೆಲ ದಿನಗಳ ಕಾಲ ಗ್ಯಾಪ್ ತೆಗೆದುಕೊಂಡಿದ್ದ ಚಿತ್ರತಂಡ ಇದೀಗ “ಭೈರತಿ ರಣಗಲ್’ ಸಿನಿಮಾದ ಚಿತ್ರೀಕರಣವನ್ನು ಆರಂಭಿಸಿದೆ.
ಚಿತ್ರತಂಡದ ಯೋಜನೆಯಂತೆ ಆಗಸ್ಟ್ ಆರಂಭದಿಂದಲೇ ಸದ್ದಿಲ್ಲದೆ “ಭೈರತಿ ರಣಗಲ್’ ಸಿನಿಮಾದ ಚಿತ್ರೀಕರಣ ಆರಂಭಿಸಿರುವ ಚಿತ್ರತಂಡ, ಮೊದಲ ಹಂತದಲ್ಲಿ ಸಿನಿಮಾದ ಬರುವ ಮಾತುಕಥೆ (ಟಾಕಿ ಪೋರ್ಷನ್) ಚಿತ್ರೀಕರಿಸುತ್ತಿದೆ. ನಟ ಶಿವರಾಜಕುಮಾರ್ ಸೇರಿದಂತೆ ಹಲವು ಕಲಾವಿದರು “ಭೈರತಿ ರಣಗಲ್’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ.
ನಿರ್ದೇಶಕ ನರ್ತನ್ “ಭೈರತಿ ರಣಗಲ್’ ಸಿನಿಮಾಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದು, ಸಿನಿಮಾದ ಪ್ರೀಕ್ವೆಲ್ ಆಗಿ ಈ ಸಿನಿಮಾವನ್ನು ತೆರೆಗೆ ತರಲಾಗುತ್ತಿದೆ.
“ಗೀತಾ ಪಿಕ್ಚರ್’ ಬ್ಯಾನರ್‌ನಲ್ಲಿ ಶ್ರೀಮತಿ ಗೀತಾ ಶಿವರಾಜ ಕುಮಾರ್ ನಿರ್ಮಿಸುತ್ತಿರುವ “ಭೈರತಿ ರಣಗಲ್’ ಸಿನಿಮಾ ಮುಂದಿನ ವರ್ಷದ ಮಧ್ಯಭಾಗದಲ್ಲಿ ತೆರೆಗೆ ಬರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.














