ಪ್ರಪಂಚದಲ್ಲಿ ಸಕಲ ಸಾಮುದ್ರಿಕ ಲಕ್ಷಣಗಳಿಂದಲೂ ಒಳ್ಳೆಯ ಸೌಂದರ್ಯ ಸುಗುಣ ಸದ್ಭಕ್ತಿ ಸದಾಚಾರಗಳನ್ನು ಹೊಂದಿದ ಸ್ತ್ರೀಯರು ವಿಶೇಷ ಕಡಿಮೆಯೆಂದೇ ಹೇಳಬಹುದು.
ಅಂಥ ಉತ್ತಮ ಶ್ರೇಷ್ಠ ಗುಣಲಕ್ಷಣಗಳಿಂದ ಕೂಡಿದ, ಪೂರ್ವ ಚಂದ್ರಮಾನಂತೆ ಸಂತೋಷವನ್ನುಂಟು ಮಾಡತಕ್ಕ ಸಲ್ಲಕ್ಷಣಗವುಳ್ಳ ಮುಖ ಕಮಲವುಳ್ಳವಳೂ, ಕಮಲ ಪುಷ್ಪಗಳಂತೆ ಅಂದವಾಗಿರುವ ವಿಶಾಲ ನೇತ್ರಗಳುಳ್ಳವಳೂ ಅರ್ಥ ಚಂದ್ರನಂತೆ ಸಮನಾದ ಸೌಭಾಗ್ಯ ಕರವಾದ ಹಣೆಯುಳ್ಳವಳೂ, ಚಂದ್ರ ರೇಖೆಗಳಂತೆ ಸಮ ಮನೋಹರವಾದ ಬಿಲ್ಲಿನಂತಹ ಕಣ್ಣುಹುಬ್ಬುಗಳುಳ್ಳವಳೂ, ಸಂಪಿಗೆ ಮೂಗ್ಗೆಯಂತಿರುವ ಮೂಗೂ, ದಾಳಿಂಬರ ಬೀಜಗಳಂತೆ ಮನಕ್ಕೆ ಉಲ್ಲಾಸವನ್ನೊದಗಿಸುವ ಮಲ್ಲಿಗೆ ಮೊಗ್ಗುಗಳಂತೆ ಶೋಭಿಸುವ ಸಮನಾದಪಂಕ್ತಿಯುಳ್ಳವಳೂ,. ತೊಂಡೆಹಣ್ಣುಗಳಂತೆ ಇರುವ ತುಟಿಗಳೂ, ಸುಪ್ರತ್ತಿಗೆಯಂತೆ ಮೃದುವಾದ ದೇಹವೂ ಬಲಮುರಿ ಶಂಖದಂತೆ ಶೋಭಿಸುವ ಬೆಳಕುವ ಕತ್ತಿಗೆಯೂ ಸಿಂಹದ ನಡುವಿನಂತಿರುವ ಚಿಕ್ಕದಾಗಿರುವ ನಡುವೂ, ಕದಳೀಸ್ತಂಭಗಳಂತಿರುವ ತೊಡೆಗಳೂ, ಆನೆಯ ನಡೆಯುವಿಕೆಯಂತೆ ಸೂಕ್ಷ್ಮಯುತ ನಡಿಗೆಯಿಂದೊಡಗೂಡಿದ ಮೃದುವಾದ ಪಾದಗಳೂ ಭಯ ಭಕ್ತಿ ಲಜ್ಞಾಸಂಪನ್ನಯುಕ್ತಳೂ, ಉತ್ತಮ ಪರಿಶುದ್ಧ ಕುಲದಲ್ಲಿ ಜನಿಸಿ,ಅದರಂತೆ ಸದ್ದರ್ಮಾಸಕ್ತ ಮನಸ್ಸುಳ್ಳಾಕೆಯೂ ಆದ ಪತಿವ್ರತಾ ನಾರಿ ಮಣಿಯು ಎಲ್ಲಿ ವಾಸಮಾಡಿ ಕೊಂಡಿರುವಳೋ ಅಲ್ಲಿ ಜಗತ್ ಪುದಜ್ಯಳಾ ಶ್ರೀ ಭಾಗ್ಯಲಕ್ಷ್ಮಿಯು ಸಂತೋಷದಿಂದ ವಾಸಮಾಡುತ್ತಿರುವಳು . ಇದಲ್ಲದೆ, ಇಂಥ ನಾರಿರತ್ನ ಸ್ತ್ರೀಯಳು ತಾನು ಹುಟ್ಟಿದ ಮನೆಗೂ, ಗಂಡನ ಮನೆಗೂ ಕೀರ್ತಿಯನ್ನು ತರುವವಳಲ್ಲದೆ, ಸರ್ವರಿಂದಲೂ ಈಕೆ ಮಾನ್ಯತೆಯನ್ನು ಪಡೆಯುವಳು, ಸುಲಕ್ಷಣವತಿಯಾಗಿದ್ದಾರೆ ಪುರುಷನಿಗೆ ಸಕಲ ಸುಖ ಸೌಭಾಗ್ಯಗಳು ಲಭಿಸುವದಲ್ಲದೆ,ಅವರಿಬ್ಬರ ಕುಟುಂಬವೂ ಸುಖಿಯಾಗಿ ಸಾಗುವುದು ಆದ್ದರಿಂದ ಸ್ತ್ರೀಯರ ಲಕ್ಷಣಗಳನ್ನು ಮೊದಲು ನಾವು ಸಾಧ್ಯವಾದ ಮಟ್ಟಿಗೆ ತಿಳಿದುಕೊಳ್ಳುವುದು ಒಳ್ಳೇದು. ಒಳ್ಳೆ ಸುಲಕ್ಷಣವುಳ್ಳ ಸುಗುಣಾದಿಗಳಿಂದೊಡಗೂಡಿದ ಸ್ತ್ರೀಯಳು ಸಂಸಾರದಲ್ಲಿ ದ್ದುಕೊಂಡು, ಸತ್ಕೀರ್ತಿಯನ್ನು ಪಡೆದುಕೊಂಡು ಮಹಾಪತಿವೃತೆಯೆಂದೆನ್ನಿಸಿಕೊಡು ಸುಮಂಗಲಿತ್ವವನ್ನು ಪಡೆದುಕೊಂಡು ಪುಣ್ಯವತಿ ಸ್ತ್ರೀ ಎಂದೆನ್ನಿಸಿಕೊಳ್ಳುವುದರಲ್ಲಿ ಸಂಶಯವಿಲ್ಲವು
ಇನ್ನು ಕಪ್ಪಾದ ದೀರ್ಘ ಮತ್ತು ಉಂಗುರ ಕೂದಲುಗಳುಳ್ಳವಳೂ, ನಗುಮುಖವುಳ್ಳವಳೂ, ದೊಡ್ಡ ಕಿವಿಗಳುಳ್ಳವಳೂ, ಸಣ್ಣ ಹೊಕ್ಕಳುಳ್ಳವಳೂ ಸದಾ ಶುಚಿ ಯಾಗಿರಲು ಇಚ್ಛೆ ಪಡುವವಳೂ, ಕಂಠದಲ್ಲಿ ಮೂರು ಮಡಿಕೆಗಳುಳ್ಳವಳೂ, ಕೆಂಪು ಉಂಗುರ,ಮೃದುವಾಗಿಯೂ ಕೆಂಪಗಾಗಿರುವ ಬೆರಳುಗಳುಳ್ಳವಳು ಭಾಗ್ಯವತಿ ಎಂದೆನ್ನಿಸಿಕೊಳ್ಳುವವಳು ಇನ್ನು ದೊಡ್ಡ ದೇಹ,ದುರಾಲೋಚನೆ, ದಪ್ಪವಾದ ಹಲ್ಲುಗಳು, ಮೇಲಿಂದ ಮೇಲೆ ಬೆವರೋಣ, ಬಹು ಚಿಕ್ಕವಾದ ಕಣ್ಣುಗಳು,ಉದ್ದವಾದ ಕುತ್ತಿಗೆ, ಸಣ್ಣ ಕಿವಿಗಳು, ದುರಾಚಾರ, ಸ್ವಚ್ಛತೆಯಲ್ಲಿ ಅಲಕ್ಷಿತಳು,ಕಪ್ಪಾಗದ ದಪ್ಪ ತುಟಿಗಳುಳ್ಳವಳು, ತಿಗದ ಭಾಗದಲ್ಲಿ ಸುಳಿಯುಳ್ಳವಳು ದರಿದ್ರ ಸ್ತ್ರೀಯಾಗುವಳು,ನಡೆಯುವಾಗ ಹೆಜ್ಜೆಯ ವಿಶೇಷ ಶಬ್ದವಾಗೋಣ, ಭುಜ, ತೊಡೆ ಕೈಗಳ ಮೇಲೆ ವಿಶೇಷ ಕೂದಲುಗಳಿರೋಣ, ಮುಂದಲೆಯ ಮೇಲೆ ಸುಳಿ ಇರುವುದು, ದೊಡ್ಡ ತಲೆ, ಜೋಲು ಹುಬ್ಬು ವಗೈರೆ ಇರುವ ಸ್ತ್ರೀ ಬೇಗನೇ ವೈವಿಧ್ಯವನ್ನು ಹೊಂದುವಳೆಂಬುದನ್ನು ಸೂಚಿಸುತ್ತದೆ.ಅತಿ ಜಾಗೃತೆಯಾಗಿ ನಡೆಯೋಣ, ಕಾಲುಬೆರಳುಗಳು ಸಮಪ್ರಯಾಣದಲ್ಲಿ ಭೂಮಿಗೆ ಹತ್ತದೆ ಮೆಲ್ಲಕೆ ಇದ್ದಿರೋಣ, ಸದಾ ದುರಲೋಚನೆ ಮಾಡುವಾಕೆ, ಅತಿ ಚಮತ್ಕಾರದಿಂದ ಅತಿಶಯೋಕ್ತಿಯೆನ್ನಿಸುವಂತೆ ಮಾತನಾಡೋಣ,ಅತಿ ನಾಚಿಕೆಯಿಂದ ನಟಿಸೋಣ ಹೀಗೆ ವಿಚಿತ್ರವಾಗಿ ನಟಿಸುವಾಕೆಯು
ಜಾರತನದಲ್ಲಿ ಆಸಕ್ತಿಯುಳ್ಳ ಸ್ತ್ರೀಯಾಗುವಳು, ಕುತ್ತಿಗೆಯಲ್ಲಿ ಸುಳಿ ಇದ್ದರೆ ಸಂತಾನ ಹೀನಳೆಂದೆನ್ನಿಸುವಳು ಯಾವಾಗಲೂ ಮೈಬೆಚ್ಚಗಿರೋಣ, ಮಾತುಮಾತಿಗೆ ಕಲಹ ಅಲ್ಪಸ್ವಲ್ಪಕ್ಕೇನೇ ಅಳುತ್ತ ಮಾತನಾಡುವಿಕೆ ಅತಿಭೋಜನ, ಅತಿ ನಿದ್ರೆ ಮಾಡುವವಳು ನಿಶ್ಚಯವಾಗಿ ದರಿದ್ರಳಾಗುವಳು.
ಈ ವಿಷಯವಾಗಿ ವಿಸ್ತಾರವಾಗಿ ಶ್ರೀ ಪುರುಷರ ಹಸ್ತ ಮತ್ತು ಅಂಗಸಾಮುದ್ರಿಕ ಶಾಸ್ತ್ರವನ್ನು ಇನ್ನೂ ವಿವರವಾಗಿ ತಿಳಿಯಬೇಕೆನ್ನುವರು, ಅಭ್ಯಸಿಸ ಬೇಕೆನ್ನುವವರು ನಮ್ಮಿಂದಲೇ ವಿರಚಿತವಾದ ಹಸ್ತಸಾಮುದ್ರಿಕ ಶಾಸ್ತ್ರ ಎಂಬ ಗ್ರಂಥವನ್ನು ತರಿಸಿ ನೋಡಿರಿ.














