ಮನೆ ಸುದ್ದಿ ಜಾಲ ಸಂಕ್ರಾಂತಿ ಹಬ್ಬ ವೇಳೆ ಕಿಚ್ಚು ಹಾಯಿಸುವಾಗ ಯಡವಟ್ಟು..!

ಸಂಕ್ರಾಂತಿ ಹಬ್ಬ ವೇಳೆ ಕಿಚ್ಚು ಹಾಯಿಸುವಾಗ ಯಡವಟ್ಟು..!

0

ಮಂಡ್ಯ : ನೆನ್ನೆ (ಗುರುವಾರ) ಸಂಕ್ರಾಂತಿ ಸಡಗರ-ಸಂಭ್ರಮದಲ್ಲಿ ಕಿಚ್ಚು ಹಾಯಿಸುವ ವೇಳೆ ಯಡವಟ್ಟಾಗಿದೆ. ಬಿಂಕಿ ಕಿಚ್ಚು ಹೆಚ್ಚಾಗಿ ಎತ್ತುಗಳು ಭಯಗೊಂಡು ಜನರ ಮೇಲೆ ಎಗರಿದ್ದಕ್ಕೆ, ಇಬ್ಬರು ಗಾಯಗೊಂಡಿರುವ ಘಟನೆ ಮಂಡ್ಯದ ಜಿಲ್ಲೆಯ ಹೊಸಹಳ್ಳಿಯಲ್ಲಿ ನಡೆದಿದೆ.

ಸಂಕ್ರಾಂತಿ ಸಂಭ್ರಮದ ಹಿನ್ನೆಲೆ ಕಿಚ್ಚ ಹಾಯಿಸಲು ರೈತರು ಎತ್ತುಗಳನ್ನು ಶೃಂಗರಿಸಿದ್ದರು. ಸೂರ್ಯಾಸ್ತದ ಬಳಿಕ ಕಿಚ್ಚು ಹಾಯಿಸಲು ಆರಂಭಿಸಲಾಗಿತ್ತು. ಈ ವೇಳೆ ಕಿಚ್ಚು ಹೆಚ್ಚಾಗಿ ಎತ್ತುಗಳು ಭಯಗೊಂಡು ಜನರ ಮೇಲೆ ಎಗರಿ ಓಡಿಹೋಗಿವೆ. ಪರಿಣಾಮ ಇಬ್ಬರಿಗೆ ಗಾಯಗೊಂಡಿದ್ದಾರೆ.

ಮಕರ ಸಂಕ್ರಾಂತಿ ವೇಳೆ ಕೆಲವೆಡೆ ಎತ್ತುಗಳಿಗೆ ಕಿಚ್ಚು ಹಾಯಿಸಲಾಗುತ್ತದೆ. ಕಿಚ್ಚು ಹಾಯಿಸಿದರೆ ರಾಸುಗಳಿಗೆ ರೋಗಗಳು ದೂರವಾಗುತ್ತವೆ ಎಂಬ ವಾಡಿಕೆಯಾಗಿದೆ.