ಮನೆ ರಾಜ್ಯ ನೀರು ಬಿಡುವ ವಿಚಾರದಲ್ಲಿ ಆರಂಭದಲ್ಲೇ ರಾಜ್ಯ ಸರ್ಕಾರ ಎಡವಿದೆ: ಎಚ್.ಡಿ.ಕುಮಾರಸ್ವಾಮಿ ಕಿಡಿ

ನೀರು ಬಿಡುವ ವಿಚಾರದಲ್ಲಿ ಆರಂಭದಲ್ಲೇ ರಾಜ್ಯ ಸರ್ಕಾರ ಎಡವಿದೆ: ಎಚ್.ಡಿ.ಕುಮಾರಸ್ವಾಮಿ ಕಿಡಿ

0

ಮಂಡ್ಯ: ಸುಪ್ರೀಂಕೋರ್ಟ್ ತೀರ್ಪಿನಂತೆ ನೀರು ಬಿಡಬೇಕು. ಇಲ್ಲದಿದ್ದರೇ ನ್ಯಾಯಾಂಗ ನಿಂದನೆ ಆಗುತ್ತೆ ಅಂತ ರಾಜ್ಯ ಸರ್ಕಾರದವರು ಹೇಳುತ್ತಿದ್ದಾರೆ. ತಮಿಳುನಾಡಿಗೆ ನೀರು ನಿಲ್ಲಿಸಿದರೆ ನ್ಯಾಯಾಂಗ ನಿಂದನೆ ಆಗಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

Join Our Whatsapp Group

ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆಯುತ್ತಿರುವ ಹಿತರಕ್ಷಣಾ ಸಮಿತಿ ಪ್ರತಿಭಟನೆಯಲ್ಲಿ  ಭಾಗಿಯಾಗಿ ಮಾತನಾಡಿದ ಅವರು ಕಾವೇರಿ ನೀರಿನ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಎಡವಿದೆ. ನಮ್ಮ ಸರ್ಕಾರ ರೈತರ ವಿಚಾರವನ್ನು ಲಘುವಾಗಿ ಪರಿಣಮಿಸಿದೆ. ತಮಿಳುನಾಡು ಅರ್ಜಿ ಹಾಕಿದಾಗಲೇ ಸರ್ಕಾರಕ್ಕೆ ಈ ಕುರಿತು ಎಚ್ಚರಿಕೆ ಕೊಟ್ಟಿದ್ದೆ. ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿ ಎಂದು ಹೇಳಿದ್ದೆ ಎಂದರು.

ಸುಪ್ರೀಂ ಕೋರ್ಟ್ ಆದೇಶ ಕೊಟ್ಟ ನಂತರ ನೀರು ಬಿಡಿ ಅಂತ ಹೇಳಿದ್ದೆ ಸರ್ವಪಕ್ಷ ಸಭೆಯಲ್ಲೂ ನೀರು ಬಿಡಬೇಡಿ ಎಂದು ಅವರ ಸರ್ಕಾರಕ್ಕೆ ಹೇಳಿದ್ದೆ 2017ರಲ್ಲಿ ಸುಪ್ರೀಂಕೋರ್ಟ್ ಪ್ರಕರಣ ಇತ್ತು. ಸುಪ್ರೀಂ ಕೋರ್ಟ್ ಆದೇಶ ಕೊಟ್ಟ ನಂತರ ನೀರು ಬಿಡಿ ಅಂತ ಹೇಳಿದ್ದೆ ಸರೋಪಕ್ಷ ಸಭೆಯಲ್ಲೂ ನೀರು ಬಿಡಬೇಡಿ ಎಂದು ಹೇಳಿದ್ದೆ 2017ರಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ ಇತ್ತು ಎಂದರು.

ಗ್ಯಾನಿ ಚಂದ್ ಎಂಬಾತ ಅರ್ಜಿ ಹಾಕಿದ್ದರು ಪಾಲಿಸಲು ಆಗದೆ ಇದ್ದಾಗ ಅದು ನ್ಯಾಯಾಂಗ ನಿಂದನೆ ಆಗಲ್ಲ ಹೀಗಂತ ಸುಪ್ರೀಂಕೋರ್ಟ್ ಆದೇಶದಲ್ಲಿ ಉಲ್ಲೇಖವಿದೆ ಎಂದರು. ನಮ್ಮ ಸರ್ಕಾರ ಸಿಡಬ್ಲ್ಯೂಆರ್ ಸಿ ಸಿ ಡಬ್ಲ್ಯೂ ಎಂ ಏ ಗೆ ಸೂಕ್ತವಾದ ಮಾಹಿತಿಯನ್ನು ನೀಡಿಲ್ಲ. ಎಸಿ ವರ್ಚುಯಲ್ ನಲ್ಲಿ ಕುಳಿತು ಸಭೆಯಲ್ಲಿ ಭಾಗಿಯಾಗುತ್ತಾರೆ.

ತಮಿಳುನಾಡು ಅಧಿಕಾರಿಗಳು ನೇರವಾಗಿ ಸಭೆಯಲ್ಲಿ ಭಾಗಿಯಾಗುತ್ತಾರೆ.ಸರ್ಕಾರ ಸೂಕ್ತ ದಾಖಲೆ ಮಾಹಿತಿ ನೀಡುವಲ್ಲಿ ವಿಫಲವಾಗಿದೆ ಎಂದರು.

ಕಾವೇರಿ ಜಲಾನಯನ ಪ್ರದೇಶದ ರೈತರ ಬೆಳೆ ಒಣಗಿದೆ. ಬೆಳೆಗಳಿಗೆ ಎರಡು ಕಟ್ಟು ನೀರು ಬಿಡಬೇಕಾದ ಅನಿವಾರ್ಯ ಇದೆ. ಐದು ವರ್ಷಕ್ಕೊಮ್ಮೆ ಈ ರೀತಿ ಬರ ಬರುತ್ತೆ ಆದರೂ ನೀರಿಲ್ಲವೆಂದರೂ ನೀರು ಬಿಟ್ಟಿದ್ದಾರೆ. ಹಾಗಾಗಿ ರೈತ, ಕನ್ನಡ ಪರ ಸಂಘಟನೆಗಳು ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿವೆ ಎಂದರು.

ಸರ್ಕಾರ ಈಗಲೂ ನೀರು ಬಿಡಬಾರದು. ಬೆಂಗಳೂರಿನಲ್ಲಿ ವಸೂಲಿ ಮಾಡೋದು ಮುಂದಕ್ಕೆ ಹಾಕಿ. ಈ ವಿಚಾರದ ಬಗ್ಗೆ ಗಮನಕೊಡಿ. ತಮಿನಾಡು ಮಿನಿಸ್ಟರ್ ಕೆಆರ್‌ಎಸ್‌ ಅವರ ಒಪ್ಪಂದ ಎಂದು‌ ಹೇಳಿದ್ದಾರೆ.

ಮಾತಿನ ಮೇಲೆ ಹಿಡಿತ ಇರಲಿ. ಸ್ಟಾಲಿನ್ ನಿಮ್ಮ ಮಂತ್ರಿಗಳನ್ನು ಹಿಡಿತದಲ್ಲಿ ಹಿಡಿದುಕೊಳ್ಳಬೇಕು ಸೋನಿಯಾ ಗಾಂಧಿ, ಖರ್ಗೆಯವರನ್ನು ಮೆಚ್ಚಿಸಲು ನೀವು ಇಲ್ಲ. India ಮಾಡಿಕೊಂಡು ರಾಜ್ಯದ ಜನರನ್ನು ಹಾಳು ಮಾಡ್ತಾ ಇದ್ದಾರೆ.

ದೇವೇಗೌಡರನ್ನು ಪ್ರಶ್ನೆ ಮಾಡುವ ಎಂಎಲ್‌ಎಗಳು ಡ್ಯಾಂ ಅಭಿವೃದ್ಧಿ ಮಾಡುವಾಗ ಅವರು ಹುಟ್ಟಿರಲೇ ಇಲ್ಲ. ಬೆಂಗಳೂರು ಬಂದ್‌ಗೆ ಜೆಡಿಎಸ್ ಬೆಂಬಲ ಇದೆ ಎಂದು ಹೇಳಿದರು.

ನಮ್ಮ ರಾಜ್ಯದಲ್ಲಿ ಹಲವು ನಿವೃತ್ತ ಮುಖ್ಯ ನ್ಯಾಯಾಧೀಶರಿದ್ದು, ಅವರ ಸಲಹೆಗಳನ್ನು ಸ್ವೀಕರಿಸಬೇಕು. ಅವರ ಜೊತೆ ಚರ್ಚಿಸಿ ಕೋರ್ಟಿಗೆ ಅರ್ಜಿ ಸಲ್ಲಿಸಿ ನ್ಯಾಯ ಪಡೆಯಬೇಕೆಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಜಿ.ಟಿ.ದೇವೇಗೌಡ, ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಮಾಜಿ ಶಾಸಕ ರಾದ ರವೀಂದ್ರ ಶ್ರೀಕಂಠಯ್ಯ, ಕೆ.ಸುರೇಶ್ ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮುಖಂಡ ಬಿ.ಆರ್.ರಾಮಚಂದ್ರು ಇತರರಿದ್ದರು.