ಮೈಸೂರು(Mysuru): ಕರ್ನಾಟಕ ರಾಜ್ಯ ಪೊಲೀಸ್ ಹಾಗೂ ಸಿಐಡಿ ಸಹಯೋಗದೊಂದಿಗೆ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಸೈಬರ ಅಪರಾಧದ ಬಗ್ಗೆ ಜಾಗೃತಿ ಮೂಡಿಸಲು ಮಳಿಗೆಯೊಂದನ್ನು ತೆರೆಯಲಾಗಿದೆ.
ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಮಳಿಗೆ ತೆರೆಯಲಾಗಿದ್ದು, ಅಲ್ಲಿ ಭೇಟಿ ನೀಡಿದರೆ ಸೈಬರ್ ಅಪರಾಧ ಹೇಗೆ ನಡೆಯುತ್ತದೆ ಎಂಬ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.
ಸೈಬರ್ ಕ್ರೈಂ ಹೇಗೆ ನಡೆಯುತ್ತವೆ ಎಂಬ ಬಗ್ಗೆ ಜನರು ಯಾವ ರೀತಿ ಜಾಗೃತರಾಗಿರಬೇಕು ಎಂಬ ಬಗ್ಗೆ ವಿಡಿಯೋ ಮೂಲಕ ಜನ ಸಾಮಾನ್ಯರಿಗೆ ಮಾಹಿತಿ ನೀಡಲು ಜಾಗೃತಿ ವಿಡಿಯೋಗಳ ತುಣುಕನ್ನು ಇಡಲಾಗಿದ್ದು, ಆ ಮೂಲಕ ಸ್ಕ್ಯಾನ್ ಮಾಡಿ ಆ ವಿಡಿಯೋಗಳನ್ನು ನೋಡಬಹುದು.
ಇದರಲ್ಲಿ ಒಟಿಪಿ, ಉದ್ಯೋಗ, ಆನ್ಲೈನ್ ಜಾಹೀರಾತು ಇನ್ನಿತರ ವಿಚಾರದಲ್ಲಿ ಜನರು ಪ್ರತಿದಿನ ಮೋಸ ಹೋಗುತ್ತಿದ್ದಾರೆ. ಇದರ ಬಗ್ಗೆ ಮಾಹಿತಿ ತಿಳಿಸುವ ಉದ್ದೇಶದಿಂದ ಸೈಬರ್ ತಿಳಿವಳಿಕೆ ಮಳಿಗೆಯನ್ನು ತೆರೆಯಲಾಗಿದೆ. ಮತ್ತು ಈ ಮಳಿಗೆ ಪ್ರಾರಂಭದ ಉದ್ದೇಶ ಸೈಬರ್ ಕ್ರೈಂ ಬಗ್ಗೆ ಎಂದು ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.