ಮನೆ ಅಪರಾಧ ಸ್ಟೇರಿಂಗ್ ರಾಡ್ ತುಂಡಾಗಿ ಹಳ್ಳಕ್ಕೆ ನುಗ್ಗಿದ ಬಸ್: ಹಲವರಿಗೆ ಗಾಯ

ಸ್ಟೇರಿಂಗ್ ರಾಡ್ ತುಂಡಾಗಿ ಹಳ್ಳಕ್ಕೆ ನುಗ್ಗಿದ ಬಸ್: ಹಲವರಿಗೆ ಗಾಯ

0

ಗುಂಡ್ಲುಪೇಟೆ(ಚಾಮರಾಜನಗರ): ಸ್ಟೇರಿಂಗ್ ಎಂಡ್ಸ್ ರಾಡ್ ತುಂಡಾದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಕೆಎಸ್ಆರ್ ಟಿಸಿ ಬಸ್ ಹಳ್ಳಕ್ಕೆ ನುಗ್ಗಿರುವ ಘಟನೆ ತಾಲೂಕಿನ ಯರಿಯೂರು ರಸ್ತೆಯಲ್ಲಿ ಶುಕ್ರವಾರ(ಸೆ27 ) ನಡೆದಿದ್ದು, ಬಸ್ ನಲ್ಲಿದ್ದ ಸುಮಾರು 13ಕ್ಕೂ‌ ಅಧಿಕ ಮಂದಿ ಪ್ರಯಾಣಿಕರಿಗೆ ಗಾಯಗಳಾಗಿದೆ.

Join Our Whatsapp Group

ಕುಂದಕೆರೆ ಗ್ರಾಮದ ಗೋವಿಂದರಾಜು, ರಂಗಯ್ಯ ಸುನಿತಾ, ರಂಗಯ್ಯ ಎಂಬ ನಾಲ್ಕು ಮಂದಿ ಸೊಂಟ, ಎದೆ ಭಾಗ ಹಾಗೂ ತೆಲೆಗೆ ಗಾಯಗಳಾದ ಹಿನ್ನೆಲೆ ಗುಂಡ್ಲುಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾಸಿಸಲಾಗಿದೆ. ಉಳಿದಂತೆ ಕುಮಾರ್, ಮಹದೇವಯ್ಯ, ವೆಂಕಟೇಶ್, ಪ್ರಭುಸ್ವಾಮಿ, ನಾಗಾರಾಜು, ದೊಡ್ಡಯ್ಯ, ನಂದಗೋಪಾಲ್, ಪ್ರಸನ್ನ ಕುಮಾರ್, ರಾಜೇಶ್ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ.

ಕುಂದಕೆರೆಯಿಂದ ಯರಿಯೂರು ಮಾರ್ಗವಾಗಿ ಗುಂಡ್ಲುಪೇಟೆಗೆ ಬರುತ್ತಿದ್ದ ಕೆಎಸ್ಆರ್ ಟಿಸಿ ಬಸ್ ನ ಸ್ಟೇರಿಂಗ್ ಎಂಡ್ಸ್ ರಾಡ್ ತುಂಡಾದ ಪರಿಣಾಮ ಚಾಲಕ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಸೇತುವೆಗೆ ಹೊಂದಿಕೊಂಡತ್ತಿರುವ ಹಳ್ಳಕ್ಕೆ ನುಗ್ಗಿದೆ. ಈ ವೇಳೆ ಹಿಂಬದಿಯಲ್ಲಿ ಕುಳಿತಿದ್ದ ನಾಲ್ವರಿಗೆ ತೀವ್ರ ಗಾಯಗಳಾಗಿದ್ದು, ಸುಮಾರು 10ಕ್ಕೂ ಅಧಿಕ ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಘಟನೆ ಬಳಿಕ ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ.

ಘಟನಾ ಸ್ಥಳಕ್ಕೆ ಗುಂಡ್ಲುಪೇಟೆ ಠಾಣೆ ಪೊಲೀಸರು ದೌಡಾಯಿಸಿ ಹಳ್ಳಕ್ಕೆ ಇಳಿದಿದ್ದ ಕೆಎಸ್ಆರ್ ಟಿಸಿ ಬಸ್ ಅನ್ನು ಮೇಲೆತ್ತಿ ಠಾಣೆಗೆ ಎಳೆದು ತರಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.