ಮನೆ ಕಾನೂನು ಭಾರತ- ಚೀನಾ ಗಡಿಯಲ್ಲಿನ ಚಕಮಕಿ, ಹಾನಿಯ ಬಗೆಗಿನ ಸರ್ಕಾರದ ಮಾಹಿತಿ ಪ್ರಶ್ನಿಸಿದ್ದ ಪಿಐಎಲ್ ವಜಾಗೊಳಿಸಿದ ಸುಪ್ರೀಂ

ಭಾರತ- ಚೀನಾ ಗಡಿಯಲ್ಲಿನ ಚಕಮಕಿ, ಹಾನಿಯ ಬಗೆಗಿನ ಸರ್ಕಾರದ ಮಾಹಿತಿ ಪ್ರಶ್ನಿಸಿದ್ದ ಪಿಐಎಲ್ ವಜಾಗೊಳಿಸಿದ ಸುಪ್ರೀಂ

0

ಭಾರತ-ಚೀನಾ ಗಡಿಯಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆಗೆ ದಾಖಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.

ಗಡಿಯಲ್ಲಿ ಭಾರತಕ್ಕೆ ಉಂಟಾದ ಹಾನಿಯನ್ನು ಎತ್ತಿ ತೋರಿಸಲು ಅಭಿಜೀತ್ ಸರಾಫ್ ಅವರು ಸಲ್ಲಿಸಿದ್ದ ಮನವಿ ಮುಂದಾಗಿತ್ತು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಹೇಳಿಕೆ, ಸಮರ್ಥನೆಗೆಳಿಗೆ ತಕರಾರು ಎತ್ತಿತ್ತು.

“ಗಾಲ್ವಾನ್ ಕಣಿವೆ ಘಟನೆಯ ನಂತರ, ಚೀನಾದಿಂದ ಅತಿಕ್ರಮಣವಾಗಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ ಅದು ತಪ್ಪು” ಎಂದು ಅರ್ಜಿದಾರರು ವಾದಿಸಿದ್ದರು.

ಅರ್ಜಿದಾರರ ವಾದವನ್ನು ಆಲಿಸಿದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಮತ್ತು ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ಅವರಿದ್ದ ಪೀಠವು ಇದೆಲ್ಲವೂ ನೀತಿ ನಿರ್ಧರಣದ ವ್ಯಾಪ್ತಿಗೆ ಬರುತ್ತದೆ ಎಂದು ತಿಳಿಸಿ ಮನವಿಯನ್ನು ತಿರಸ್ಕರಿಸಿತು.

ಗಡಿ ಚಕಮಕಿ, ಆಕ್ರಮಣ ಇತ್ಯಾದಿಗಳೆಲ್ಲವೂ ನೀತಿ ನಿರ್ಧರಣದ ವ್ಯಾಪ್ತಿಗೆ ಬರುವಂತಹವು. ಅದಕ್ಕೂ ಸಂವಿಧಾನದ 32 ನೇ ವಿಧಿಗೂ ಯಾವುದೇ ಸಂಬಂಧ ಇಲ್ಲ. ಇವೆಲ್ಲವೂ ಸರ್ಕಾರದ ಕಾರ್ಯವ್ಯಾಪ್ತಿಗೆ ಬರುತ್ತದೆ ಎಂದ ಪೀಠವು ಅರ್ಜಿಯನ್ನು ವಜಾಗೊಳಿಸಿರುವುದಾಗಿ ತಿಳಿಸಿತು.