ಮಂಡ್ಯ(Mandya): ಶಾಲಾ ಮಕ್ಕಳ ಆರೋಗ್ಯದ ದೃಷ್ಠಿಯಿಂದ ರಾಜ್ಯ ಸರ್ಕಾರ ಬಿಸಿಯೂಟದ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಬಿಸಿಯೂಟದ ಹೆಸರಲ್ಲಿ ಕಾಳದಂಧೆ ಆರಂಭವಾಗಿದ್ದು, ಇದರಲ್ಲಿ ಭಾಗಿಯಾಗಿರುವವರು ಶಿಕ್ಷಕರೇ ಎಂಬುದು ವಿಷಾಧದ ಸಂಗತಿ.
ಬಿಸಿಯೂಟಕ್ಕೆಂದು ಸರ್ಕಾರದಿಂದ ಬರುವ ತೊಗರಿಬೇಳೆ ಮಾರಾಟ ಮಾಡಲು ಹೋಗಿದ್ದ ಮುಖ್ಯ ಶಿಕ್ಷಕನನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಮಳವಳ್ಳಿ ತಾಲ್ಲೂಕಿನ ಮಾರಗೌಡನಹಳ್ಳಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಕಾಳರಾಜೇಗೌಡ ಅಮಾನತ್ತಾದ ಶಿಕ್ಷಕ.
ಬಿಸಿಯೂಟದ ತೊಗರಿಬೇಳೆಯನ್ನು ಮಾರಾಟ ಮಾಡುವ ವಿಡಿಯೋ ವೈರಲ್ ಆದ ಬಳಿಕ ಹಲಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.ಈ ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಕನನ್ನು ಡಿಡಿಪಿಐ ಎಸ್.ಟಿ.ಜವರೇಗೌಡ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.