ಮನೆ ದೇವಸ್ಥಾನ ಗುಬ್ಬಿ : ಮಲ್ಲಿಕಾರ್ಜುನ ದೇವಾಲಯ

ಗುಬ್ಬಿ : ಮಲ್ಲಿಕಾರ್ಜುನ ದೇವಾಲಯ

0

ಒಂದು ತಾಲೂಕು ಕೇಂದ್ರ. ತುಮಕೂರಿಗೆ 20 km ದೂರದಲ್ಲಿದೆ. ಈ ಊರು ಒಂದು ಪುಣ್ಯಕ್ಷೇತ್ರ. ಅಮರಗೊಂಡ ಕ್ಷೇತ್ರ ಎಂದು ಹೆಸರಿದೆ. ಹಿಂದೆ ಇಲ್ಲಿ ಗೋಸಲ ಚೆನ್ನಬಸವೇಶ್ವರ, ಅಮರಗೊಂಡ ಮಲ್ಲಿಕಾರ್ಜುನ, ಮಲ್ಲಣ್ಣಾಚಾರ್ಯ ಎಂಬಿ ಮೊದಲಾದ ವೀರಶೈವ ಗುರುಗಳು ವಾಸವಾಗಿದ್ದರು.

Join Our Whatsapp Group

ಗುಬ್ಬಿಯಲ್ಲಿ ಮಲ್ಲಿಕಾರ್ಜುನ ದೇವಾಲಯವಿದೆ. ಇಲ್ಲಿ ಹಿಂದೆ ಮಲ್ಲಣ್ಣಚಾರ್ಯ ಕವಿಗಳು ಬಸವ ಪುರಾಣವನ್ನು ಪ್ರವಚನ ಮಾಡುತ್ತಿದ್ದರೆಂದು, ಈ ಪ್ರವಚನವನ್ನು ಎರಡು ಗಂಡು ಹೆಣ್ಣು ಗುಬ್ಬಿಗಳು ಕೇಳುತ್ತಿದ್ದವೆಂದು, ಪ್ರವಚನದ ಕೊನೆಯ ದಿನ ಎರಡು ಗುಬ್ಬಿಗಳು ಕೆಳಗೆ ಬಿದ್ದು ಪ್ರಾಣಾರ್ಪಣ ಮಾಡಿ ಮುಕ್ತಿ ಹೊಂದಿದ ಕಾರಣ ಊರಿಗೆ ಗುಬ್ಬಿ ಎಂದು ಹೆಸರು ಬಂತೆಂದು ಐತಿಹ್ಯವಿದೆ. ಎರಡು ಗುಬ್ಬಿಗಳ ಸಮಾಧಿಗಳು ಈಗಲೂ ಇವೆ.


ದೇವಾಲಯದ ಗದ್ದೆ ಬಳಿ ಇದೆಯಾಗಿ, ಗದ್ದೆಮಲ್ಲೇಶ್ವರ ದೇವಸ್ಥಾನ ಎಂದು ಹೆಸರಿದೆ. ನವರಂಗದಲ್ಲಿ ದಕ್ಷಿಣಾಮೂರ್ತಿ, ಪಾರ್ವತಿ, ವೀರಭದ್ರ ಇದ್ದಾರೆ. ಜೊತೆಗೆ ಗಣಪತಿ-ಸುಬ್ರಹ್ಮಣ್ಯ.


ಒಹಿಲಪ್ಪ ಇನ್ನೊಂದು ದೇವಸ್ಥಾನ. ಎರಡು ಅಡಿ ಎತ್ತರದ ಒಹಿಲನ ವಿಗ್ರಹವಿದೆ. ಗುಬ್ಬಿ ಚನ್ನ ಬಸವೇಶ್ವಾರ ದೇವಾಲಯ ದೊಡ್ಡ ಕಟ್ಟಡ. ಇದರಲ್ಲಿ ಗುಬ್ಬಿಯಪ್ಪ ಎನ್ನಲಾಗುವ ಗೋಪಾಲ ಚನ್ನಬಸವೇಶ್ವರರ ಗದ್ದುಗೆ ಇದೆ. ಗುಬ್ಬಿಬಸವೇಶ್ವರ ಜಾತ್ರಾ ಪ್ರತಿ ವರ್ಷ ವೈಭವದಿಂದ ನಡೆಯುತ್ತದೆ. ಗುಬ್ಬಿ ರೈಲು ನಿಲ್ದಾಣದ ಬಳಿ ಚಿದಂಬರ ಆಶ್ರಮವಿದೆ. ಇಲ್ಲಿ ದತ್ತಾತ್ರೇಯ ದೇವರನ್ನು ಪ್ರತಿಷ್ಠಾಪಿಸಲಾಗಿದೆ.