ಮನೆ ಅಪರಾಧ ಕೊರಗಜ್ಜ ದೇವಾಲಯದಲ್ಲಿ ಕಾಣಿಕೆ ಹುಂಡಿ ಕದ್ದೊಯ್ದ ಕಳ್ಳ!

ಕೊರಗಜ್ಜ ದೇವಾಲಯದಲ್ಲಿ ಕಾಣಿಕೆ ಹುಂಡಿ ಕದ್ದೊಯ್ದ ಕಳ್ಳ!

0

ಮಂಗಳೂರು, ಕರ್ನಾಟಕ: ಕರಾವಳಿಯಲ್ಲಿ ಜನರು ಅಪಾರ ಭಕ್ತಿಯಿಂದ ಪೂಜಿಸುವ ಕಾರಣಿಕ ದೈವ ಕೊರಗಜ್ಜನ ಮಂಗಳೂರಿನ ಮೆರಿಹಿಲ್ ಕಟ್ಟೆಯಲ್ಲಿ ಆಶ್ಚರ್ಯಚಕಿತಗೊಳಿಸುವ ಕಳ್ಳತನ ನಡೆದಿದ್ದು, ಭಕ್ತಿಯ ಮಡಿಯಲ್ಲಿ ಕಳ್ಳತನ ಎಸಗಿದ ಘಟನೆಯು ಇದೀಗ ಸಾರ್ವಜನಿಕರ ಚರ್ಚೆಯ ವಿಷಯವಾಗಿದೆ.

ಘಟನೆ ಮಂಗಳೂರು ನಗರದ ಮೆರಿಹಿಲ್ ಪ್ರದೇಶದಲ್ಲಿರುವ ಪ್ರಸಿದ್ಧ ಕೊರಗಜ್ಜ ದೇವಾಲಯದಲ್ಲಿ ನಡೆದಿದೆ. ದೇವಾಲಯದ ಆವರಣದಲ್ಲಿ ಸ್ಥಾಪಿತವಾಗಿರುವ ಕಾಣಿಕೆ ಹುಂಡಿಯನ್ನು ಕಳ್ಳನೊಬ್ಬ ಭಕ್ತಿಯ ನಾಟಕವಾಡಿ ಕದ್ದು ಪರಾರಿಯಾಗಿದ್ದಾನೆ. ಈ ಕಳ್ಳತನದ ದೃಶ್ಯಗಳು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ವೈರಲ್ ಆಗುತ್ತಿವೆ.

ಹೆಚ್ಚು ಆಘಾತಕಾರಿ ವಿಷಯವೆಂದರೆ, ಈ ಕಳ್ಳನು ಕೃತ್ಯ ಎಸಗಿಸುವ ಮೊದಲು ದೇವಾಲಯಕ್ಕೆ ನಿಜವಾದ ಭಕ್ತನಂತೆ ಪ್ರವೇಶಿಸಿ, ಕೊರಗಜ್ಜನಿಗೆ ಕೈ ಜೋಡಿಸಿ ನಮಸ್ಕಾರ ಮಾಡಿದ್ದಾನೆ. ಅಲ್ಲದೆ ದೇವರ ಕಟ್ಟೆಗೆ ಮೂರು ಸುತ್ತು ಹಾಕಿ ತಪಸ್ಸಿನ ಭಾವನೆ ಮೂಡಿಸಿರುವ ನಾಟಕವಾಡಿದ್ದಾನೆ. ಈ ಎಲ್ಲ ನಡೆನಡವಳಿಕೆಯಿಂದ ಅವನು ಭಕ್ತನಂತೆ ವರ್ತಿಸಿದ್ದು, ಯಾರಿಗೂ ಅನುಮಾನಕ್ಕೆ ಆಸ್ಪದವಿಲ್ಲದೆ ತನ್ನ ಯೋಜನೆಯನ್ನೂ ಯಶಸ್ವಿಯಾಗಿಸಿದ್ದಾನೆ.

ಸ್ಥಳದ ಸುತ್ತಮುತ್ತ ಜನರ ಜಮಾವಣೆ ಇಲ್ಲದ ಸಮಯವನ್ನೇ ಆಯ್ದುಕೊಂಡ ಕಳ್ಳ, ತನ್ನ ಯೋಜನೆಯನ್ನು ನಿಖರವಾಗಿ ಅನುಷ್ಠಾನಗೊಳಿಸಿದ್ದಾನೆ. ಕಾಣಿಕೆ ಹುಂಡಿಯನ್ನು ಎತ್ತಿಕೊಂಡು ಅತೀ ವೇಗವಾಗಿ ಸ್ಥಳದಿಂದ ಹೊರಟಿದ್ದಾನೆ. ಸದ್ಯಕ್ಕೆ ಹುಂಡಿಯಲ್ಲಿ ಎಷ್ಟು ಹಣವಿತ್ತು ಎಂಬುದು ಇನ್ನೂ ಬಹಿರಂಗವಾಗಿಲ್ಲ, ಆದರೆ ಇದು ನಿತ್ಯದ ಕಾಣಿಕೆಗಳಿಂದ ತುಂಬಿದ ಹುಂಡಿಯಾಗಿರುವುದರಿಂದ ಲಕ್ಷಾಂತರ ರೂ. ನಷ್ಟವಾಗಿರುವ ಸಾಧ್ಯತೆ ಇರುತ್ತದೆ. ಈ ವಿಷಯವನ್ನು ದೇವಾಲಯದ ವ್ಯವಸ್ಥಾಪಕರು ಬೆಳಿಗ್ಗೆ ಗಮನಿಸಿದಾಗ ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದು, ಕಳ್ಳನ ಹತ್ತಿಗಾಗಿ ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ವಿಡಿಯೋ ಆಧಾರದ ಮೇಲೆ ಆರೋಪಿಯ ಗುರುತು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ.