ಧರ್ಮ ಕೀರ್ತಿರಾಜ್ ನಾಯಕರಾಗಿರುವ “ದಾಸರಹಳ್ಳಿ’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆ ಯಾಗಿದೆ. ಈ ಚಿತ್ರವನ್ನು ಪಿ. ಉಮೇಶ ನಿರ್ಮಾಣ ಮಾಡಿದ್ದು, ಎಂ. ಆರ್. ಶ್ರೀನಿವಾಸ್ ನಿರ್ದೇಶನವಿದೆ.
ಟ್ರೇಲರ್ ರಿಲೀಸ್ ವೇಳೆ ಮಾತನಾಡಿದ ನಿರ್ದೇಶಕ ಎಂ.ಆರ್. ಶ್ರೀನಿವಾಸ್ , “ತಾಯಿ ಸಪೋರ್ಟ್ ಇದ್ದರೂ ತಂದೆ ಸಪೋರ್ಟ್ ಇಲ್ಲದೆ ಹೋದರೆ ಮಕ್ಕಳು ಏನಾಗುತ್ತಾರೆ ಎಂಬ ಸ್ಪಷ್ಟ ಸಂದೇಶವನ್ನು ಇದರಲ್ಲಿ ಹೇಳಲಾಗಿದೆ’ ಎಂದರು.
ನಟ ಧರ್ಮ ಕೀರ್ತಿರಾಜ್ ಮಾತನಾಡಿ, “ಈ ಸಿನಿಮಾದಲ್ಲಿ ಒಂದೊಳ್ಳೆ ಮೆಸೇಜ್ ಇದೆ. ಕುಡಿತದಿಂದ ಏನಾಗುತ್ತೆ ಎಂಬುದೇ ಕಥೆ. ನಾಲ್ಕು ಕಥೆ ಬರುತ್ತೆ ಸಿನಿಮಾದಲ್ಲಿ. ಒಂದೊಂದು ನೋಡುಗರನ್ನು ಕಾಡುತ್ತದೆ. ಹಾಡುಗಳು ತುಂಬಾ ಚೆನ್ನಾಗಿ ಬಂದಿವೆ. ಸಿನಿಮಾವನ್ನು ಫೆಬ್ರವರಿಯಲ್ಲಿ ರಿಲೀಸ್ ಮಾಡುವ ಯೋಚನೆ ಇದೆ’ ಎಂದರು. ನಟಿ ನೇಹಾ ಕೂಡಾ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಚಿತ್ರದಲ್ಲಿ 150ಕ್ಕೂ ಹೆಚ್ಚು ಹಿರಿಯ ಕಲಾವಿದರು ನಟಿಸಿದ್ದಾರೆ.