Saval TV on YouTube
ಚಿತ್ರದುರ್ಗ(Chitradurga): ಕುಡಿತದ ಚಟ ಅಂಟಿಸಿಕೊಂಡು ಕುಟುಂಬವನ್ನು ನಿರ್ಲಕ್ಷಿಸಿದ್ದ ಗಂಡನನ್ನು ಪತ್ನಿ ತನ್ನ ತವರು ಮನೆಯಲ್ಲಿ ಸರಪಳಿ ಬಿಗಿದು ಕಂಬಕ್ಕೆ ಕಟ್ಟಿ ಹಾಕಿದ್ದ ಘಟನೆ ಹೊಸಹಳ್ಳಿಯಲ್ಲಿ ನಡೆದಿದೆ.
ಹಿರಿಯೂರು ತಾಲ್ಲೂಕಿನ ಹರ್ತಿಕೋಟೆ ಗ್ರಾಮದ ರಂಗನಾಥ್ ಹೊಸಹಳ್ಳಿಯ ಅಮೃತಾ ಅವರೊಡನೆ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಕುಡಿತದ ದಾಸನಾಗಿದ್ದ ರಂಗನಾಥ್ ಸಂಸಾರದ ಬಗ್ಗೆ ಗಮನ ನೀಡುತ್ತಿರಲಿಲ್ಲ.
ಕುಡಿತದ ನಶೆಯಲ್ಲಿ ಸರಿಯಾಗಿ ಊಟವನ್ನೂ ಮಾಡುತ್ತಿರಲಿಲ್ಲ. ಇದರಿಂದ ರೋಸಿ ಹೋಗಿದ್ದ ಅಮೃತಾ ಗಂಡನನ್ನು ಮನೆಯಿಂದ ಹೊರಹೋಗದಂತೆ ತಡೆಯಲು ಕಾಲಿಗೆ ಸರಪಳಿ ಬಿಗಿದು, ಮನೆಯಲ್ಲಿನ ಕಂಬಕ್ಕೆ ಕಟ್ಟಿ ಬೀಗ ಜಡಿದು ಕೂಡಿ ಹಾಕಿದ್ದರು.
ಬುಧವಾರ ಹೊಸಹಳ್ಳಿಗೆ ತೆರಳಿದ್ದ ರಂಗನಾಥ್’ನ ಪಾಲಕರಿಗೆ ಕೂಡಿ ಹಾಕಿರುವ ವಿಷಯ ತಿಳಿದಿದೆ.
ಘಟನೆ ಕುರಿತು ಪಿಎಸ್’ಐ ಪರಶುರಾಮ್ ಎನ್.ಲಮಾಣಿ ತನಿಖೆ ನಡೆಸಿದ್ದಾರೆ.