ಮನೆ ರಾಜಕೀಯ ಬಿ.ವೈ ವಿಜಯೇಂದ್ರ ಪರ ಕೆಲ ಪೇಮೆಂಟ್ ಸ್ವಾಮೀಜಿಗಳಿದ್ದಾರೆ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ಬಿ.ವೈ ವಿಜಯೇಂದ್ರ ಪರ ಕೆಲ ಪೇಮೆಂಟ್ ಸ್ವಾಮೀಜಿಗಳಿದ್ದಾರೆ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

0

ನವದೆಹಲಿ:  ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ದ ಪದೇ ಪದೇ ಕೆಂಡಕಾರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

Join Our Whatsapp Group

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್,  ಬಿವೈ ವಿಜಯೇಂದ್ರ ಜೊತೆಯಲ್ಲಿ ಯಾರು ಇಲ್ಲ.  ಕೆಲ ಪೇಮೆಂಟ್ ಸ್ವಾಮೀಜಿಗಳಿದ್ದಾರೆ. ಅವರಿಗೆ ಒಂದು ಲಕ್ಷ ರೂಪಾಯಿ ಕೊಟ್ಟರೆ ಮಾತನಾಡುತ್ತಾರೆ ಎಂದು ಲೇವಡಿ ಮಾಡಿದರು.

ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ಪರ ಲಿಂಗಾಯತರು ಇಲ್ಲ. ಅದೆಲ್ಲ ಮುಗಿದು ಹೋದ ಅಧ್ಯಾಯ ರಾಜ್ಯದಲ್ಲಿ ಬಿಎಸ್ ವೈಗೆ  ಗೌರವವಿತ್ತು. ಆದರೆ ಅದನ್ನು ಬಿಎಸ್ ವೈ ಉಳಿಸಿಕೊಳ್ಳಲಿಲ್ಲ ಎಂದು ಯತ್ನಾಳ್ ಟೀಕಿಸಿದರು.

ಡಿಕೆ ಶಿವಕುಮಾರ್  ಆಶೀರ್ವಾದದಿಂದ  ಕಾಂಗ್ರೆಸ್  ಕೊಟ್ಟ ಭಿಕ್ಷೆಯಿಂದ ವಿಜಯೇಂದ್ರ ಶಾಸಕರಾದರು. ರಮೇಶ್ ಜಾರಕಿಹೊಳಿ ಯೋಗೇಶ್ವರ್ ರಿಂದ ಬಿಜೆಪಿ ಸರ್ಕಾರ ಬಂದಿತ್ತು ಎಂದು ತಿಳಿಸಿದ ಯತ್ನಾಳ್, ಕರ್ನಾಟಕದಲ್ಲಿ ಕುಟುಂಬ ರಾಜಕಾರಣ ಅಂತ್ಯವಾಗಬೇಕು ಎಂದರು.