ಬೆಂಗಳೂರು: ದೊಡ್ಡವರ ಹೆಸರು ಪ್ರಸ್ತಾಪಿಸಿ ಯಾವುದೇ ಗೊಂದಲಕ್ಕೀಡಾಗಲ್ಲ. ಯಾರು ಏನು ಹೇಳಿದರು ಎಂಬುದು ನನಗೆ ಸಂಬಂಧವಿಲ್ಲ. ಅಭಿವ್ಯಕ್ತಿ ಸ್ವಾತಂತ್ರವಿದೆ ಮಾತನಾಡಲಿ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಹೇಳಿದರು.
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ಜೆಡಿಎಸ್ ನಾಯಕರ ವಿರುದ್ಧ ಟೀಕೆಗೆ ಪ್ರತಿಕ್ರಿಯಿಸಿದರು.
ನಾಳೆಯಿಂದ ಮೇ 8ರವರೆಗೆ 62 ಕಡೆ ತಾತ್ಕಾಲಿಕ ಕಾರ್ಯಕ್ರಮ ನಿಗದಿಯಾಗಿದೆ. ವಾರದಲ್ಲಿ ಒಂದು ದಿನ ಆರೋಗ್ಯದ ಕಾರಣ ವಿಶ್ರಾಂತಿಗೆ ಸೂಚಿಸಿದ್ದಾರೆ. ಬೆಂಗಳೂರಿಗೆ ನನ್ನ ಕೊಡುಗೆ ಸಾಕಷ್ಟು ಇದೆ. ದಾಬಸ್ಪೇಟೆ, ಹೊಸಕೋಟೆಯಲ್ಲಿ ರಿಂಗ್ ರೋಡ್ ಮಾಡಿದ್ದೇನೆ. 7 ಗ್ರಾ.ಪಂ ಜನರಿಗೆ ಕುಡಿಯುವ ನೀರು, ಸರಿಯಾದ ರಸ್ತೆ ಇರಲಿಲ್ಲ. ಬಿಬಿಎಂಪಿಗೆ ಸೇರಿಸಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.














