ಮನೆ ರಾಷ್ಟ್ರೀಯ ದೇಶದಲ್ಲಿ ಕೋವಿಡ್‌ 4ನೇ ಅಲೆಯ ಸುಳಿವಿಲ್ಲ, ಆತಂಕಪಡುವ ಅಗತ್ಯವಿಲ್ಲ: ತಜ್ಞರು

ದೇಶದಲ್ಲಿ ಕೋವಿಡ್‌ 4ನೇ ಅಲೆಯ ಸುಳಿವಿಲ್ಲ, ಆತಂಕಪಡುವ ಅಗತ್ಯವಿಲ್ಲ: ತಜ್ಞರು

0

ಮುಂಬೈ (Mumbai): ದೇಶದಲ್ಲಿ ಕೋವಿಡ್‌ 4ನೇ ಅಲೆಯ ಸುಳಿವು ಇಲ್ಲ. ಹೀಗಾಗಿ ಆತಂಕಪಡುವ ಅಗತ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಭಾರತದಲ್ಲಿ ಏರಿಕೆಯಾಗುತ್ತಿರುವ ಕೊರೊನಾ ಪ್ರಕರಣಗಳು ನಾಲ್ಕನೇ ಅಲೆಗೆ ಕಾರಣವಾಗುವ ಸುಳಿವು ಕಂಡುಬರುತ್ತಿಲ್ಲ. ಆದಾಗ್ಯೂ, ಲಸಿಕಾ ಕಾರ್ಯಕ್ರಮವನ್ನು ತೀವ್ರಗೊಳಿಸಬೇಕು. ಜೊತೆಗೆ ಸಾಮಾಜಿಕ ಅಂತರ ಸೇರಿದಂತೆ ಕೋವಿಡ್ ನಿರ್ಬಂಧ ಕ್ರಮಗಳನ್ನು ಪಾಲಿಸಬೇಕು ಎಂದು ಹೇಳಿದ್ದಾರೆ.

ಈ ಬಗ್ಗೆ ಭಾನುವಾರ ಮಾತನಾಡಿದ ಡಾ. ಈಶ್ವರ ಗಿಲಡಾ, ಮಹಾರಾಷ್ಟ್ರ ಅಥವಾ ಮುಂಬೈನಲ್ಲಿ ಅಷ್ಟೇ ಅಲ್ಲದೆ, ಕೇರಳದಲ್ಲೂ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬುದರಲ್ಲಿ ಅನುಮಾನವೇನಿಲ್ಲ. ದೇಶದಲ್ಲಿನ 3ನೇ ಅಲೆಗೆ ಈ ಎರಡೂ ರಾಜ್ಯಗಳು ಕಾರಣವಾಗಿದ್ದವು. ಆದರೆ, ಆಮ್ಲಜನಕ, ಬೆಡ್‌ಗಳ ಬೇಡಿಕೆ ಹೆಚ್ಚಾಗಿಲ್ಲ. ಜೊತೆಗೆ ಕೋವಿಡ್‌ಗೆ ಬಲಿಯಾಗುವವರ ಸಂಖ್ಯೆಯೂ ಹೆಚ್ಚಾಗುತ್ತಿಲ್ಲ. ಹೀಗಾಗಿ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಕಳೆದ ವಾರ ದೇಶದಲ್ಲಿ ಕೋವಿಡ್‌ಗೆ 106 ಮಂದಿ ಬಲಿಯಾಗಿದ್ದರು. ಕೋವಿಡ್ ಪ್ರಕರಣಗಳಲ್ಲಿ ಕಳೆದ ವಾರ 25,036 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದವು. ಇದು 2 ವಾರಗಳ ಹಿಂದೆ ದಾಖಲಾಗಿದ್ದ 16,672ಕ್ಕೆ ಹೋಲಿಸಿದರೆ, ಶೇ. 50ರಷ್ಟು ಪ್ರಕರಣಗಳು ಏರಿಕೆ ಕಂಡುಬಂದಿತ್ತು. ಆದರೆ ಸಾವಿನ ಸಂಖ್ಯೆಯಲ್ಲಿ ಶೇ.39ರಷ್ಟು ಇಳಿಕೆ ಕಂಡುಬಂದಿದೆ.