ಬೆಂಗಳೂರು: ತುರ್ತು ವಾಹನಗಳಿಗೆ ದಾರಿ ಬಿಡುವ ಸಂದರ್ಭದಲ್ಲಿ ಸಿಗ್ನಲ್ ಜಂಪ್ ಮಾಡಿ ದಂಡಕ್ಕೆ ಸಿಲುಕಿರುವ ವಾಹನ ಸವಾರರಿಗೆ ಸಂಚಾರ ಪೊಲೀಸರು ದಂಡದಿಂದ ವಿನಾಯಿತಿ ನೀಡಲು ನಿರ್ಧರಿಸಿದ್ದಾರೆ.
ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್, ನಗರದ ಪ್ರಮುಖ ರಸ್ತೆ ಜಂಕ್ಷನ್, ಸಿಗ್ನಲ್‌ಗಳಲ್ಲಿ ತುರ್ತು ವಾಹನ ಆ್ಯಂಬುಲೆನ್ಸ್‌ಗಳಿಗೆ ಜಾಗ ಮಾಡಿಕೊಡುವುದ್ದಾಗಿ ಸಿಗ್ನಲ್ ಜಂಪ್ ಮಾಡಿದ ವಾಹನ ಸವಾರರಿಗೆ ವಿಧಿಸಲಾಗಿದ್ದ ದಂಡ ವನ್ನು ಮನ್ನಾ ಮಾಡಲಾಗುತ್ತದೆ ಎಂದರು.
ವಾಹನ ಚಾಲಕರು ಆ್ಯಂಬುಲೆನ್ಸ್‌ಗಳಿಗೆ ಜಾಗ ಬಿಡಲು ಪ್ರಯತ್ನಿಸುವಾಗ ಸಿಗ್ನಲ್‌ಗಳನ್ನು ಜಂಪ್ ಮಾಡಿರುತ್ತಾರೆ. ಈ ವೇಳೆ ಟ್ರಾಫಿಕ್ ಕ್ಯಾಮೆರಾಗಳಲ್ಲಿ ರೆಕಾರ್ಡ್ ಆಗಿ ದಂಡ ವಿಧಿಸಲಾಗಿರುತ್ತದೆ. ಅದರಿಂದ ವಾಹನ ಸವಾರರು ಅನಗತ್ಯವಾಗಿ ದಂಡಕ್ಕೆ ಸಿಲುಕಿರುತ್ತಾರೆ. ಆದರೆ, ಇದನ್ನು ಟ್ರಾಫಿಕ್ ಕಂಟ್ರೋಲ್ ರೂಂನಲ್ಲಿ ಸಂಪೂರ್ಣವಾಗಿ ಕ್ಯಾಮೆರಾ ಗಳನ್ನು ಪರಿಶೀಲಿಸಿ ಆ್ಯಂಬುಲೆನ್ಸ್‌ಗಳಿಗೆ ದಾರಿ ಬಿಡಲು ಸಿಗ್ನಲ್ ಜಂಪ್ ಮಾಡಿದ ವಾಹನಗಳಿಗೆ ವಿಧಿಸಲಾಗಿದ್ದ ದಂಡವನ್ನು ರದ್ದು ಮಾಡಲಾಗುವುದು ಎಂದು ತಿಳಿಸಿದ್ದಾರೆ.