ಮನೆ ರಾಜ್ಯ ವಿನಾಕಾರಣ ಪ್ರಧಾನಿಯನ್ನು ಟೀಕಿಸುವುದರಲ್ಲಿ ಅರ್ಥವಿಲ್ಲ: ಬಿಜೆಪಿ ಮುಖಂಡ ಜೋಗಿ ಮಂಜು

ವಿನಾಕಾರಣ ಪ್ರಧಾನಿಯನ್ನು ಟೀಕಿಸುವುದರಲ್ಲಿ ಅರ್ಥವಿಲ್ಲ: ಬಿಜೆಪಿ ಮುಖಂಡ ಜೋಗಿ ಮಂಜು

0

ಮೈಸೂರು: ಇಡೀ ವಿಶ್ವವೇ ಪ್ರಧಾನಿ ಮೋದಿ ಅವರನ್ನು ವಿಶ್ವಗುರು ಎಂದು ಮನ್ನಿಸಿದೆ. ವಿಶ್ವದ ಸೂಪರ್ ಪವರ್ ರಾಷ್ಟ್ರಗಳು ಸಹ ಮೋದಿ ಅವರ ನಾಯಕತ್ವಕ್ಕೆ ತಲೆದೂಗಿವೆ. ಇಂಥ ಸಂದರ್ಭಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರನ್ನು ಟೀಕಿಸುವುದು ಮೂರ್ಖತನ ಹಾಗೂ ಹುಚ್ಚುತನದ ಪರಮಾವಧಿ ಎಂದು ಬಿಜೆಪಿ ಹಿಂದುಳಿದ ವರ್ಗದ ಮೊರ್ಚಾದ  ಅಧ್ಯಕ್ಷ ಜೋಗಿ ಮಂಜು ವಾಗ್ದಾಳಿ ನಡೆಸಿದರು.

Join Our Whatsapp Group

ಇಂದು ಈ ಕುರಿತು ಮಾತನಾಡಿದ ಜೋಗಿ ಮಂಜು,  ಚುನಾವಣೆಗೂ ಮುನ್ನ ಅಕ್ಕಿ ಕೊಡುವುದಾಗಿ ಭರವಸೆ ನೀಡಿ ಈಗ ಅಕ್ಕಿ ಬದಲು ಹಣ ಕೊಡುವುದಾಗಿ ಹೇಳಿ ಜನರಿಗೆ ದಾರಿ ತಪ್ಪಿಸುವ ಕಾರ್ಯಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಅಕ್ಕಿ ವಿಚಾರದಲ್ಲಿ ವಿನಾಕಾರಣ ಪ್ರಧಾನಿಮೋದಿ ಅವರನ್ನ ಟೀಕಿಸುವುದರಲ್ಲಿ ಅರ್ಥವಿಲ್ಲ  ಎಂದು ಕಿಡಿ ಕಾರಿದ್ದಾರೆ.

ಬೇರೆ ರಾಜ್ಯದ ಮುಖ್ಯಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅಕ್ಕಿಗಾಗಿ ಪರದಾಡುತ್ತಿರುವುದು ರಾಜ್ಯದ ಜನ ಬೇರೆ ರಾಜ್ಯದ ಜನರ ಮುಂದೆ ತಲೆ ತಗ್ಗಿಸುವ ರೀತಿ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯ ಮಂತ್ರಿಯಾದ ಮೇಲೆ ಕೇವಲ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡುವುದೇ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಿಂದಿನ ಲೇಖನಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಅಪಘಾತ: ಇಬ್ಬರು ಸವಾರರ ಸಾವು
ಮುಂದಿನ ಲೇಖನಮಂಡ್ಯ: ರೌಡಿಶೀಟರ್ ನನ್ನು ಹತ್ಯೆಗೈದ ಸ್ನೇಹಿತರು