ಮನೆ ರಾಜ್ಯ ಬಜೆಟ್‌ ನಲ್ಲಿ ಯಾವುದೇ ಸತ್ವವಿಲ್ಲ: ಮಾಜಿ ಶಾಸಕ ಎಲ್.ನಾಗೇಂದ್ರ

ಬಜೆಟ್‌ ನಲ್ಲಿ ಯಾವುದೇ ಸತ್ವವಿಲ್ಲ: ಮಾಜಿ ಶಾಸಕ ಎಲ್.ನಾಗೇಂದ್ರ

0

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್‌ ನಲ್ಲಿ ಯಾವುದೇ ಸತ್ವವಿಲ್ಲ. ಇದೊಂದು ಉಪ್ಪು- ಹುಳಿಕಾರವಿಲ್ಲದ ಆಯವ್ಯಯ ಎಂದು ಬಿಜೆಪಿ ನರಗಾಧ್ಯಕ್ಷರೂ ಆದ ಮಾಜಿ ಶಾಸಕ ಎಲ್.ನಾಗೇಂದ್ರ ಟೀಕಿಸಿದ್ದಾರೆ.

ಬಜೆಟ್‌ನಲ್ಲಿ ಜಿಲ್ಲೆಗೆ ಹೇಳಿಕೊಳ್ಳುವಂತಹ ಕೊಡಗುಗಳಿಲ್ಲ. ಇದೊಂದು ನಿರಾಶದಾಯಕ ಬಜೆಟ್ ಆಗಿದ್ದು, ಜನರನ್ನು ನಿರಾಸೆಗೊಳಿಸಿದೆ. ಇಂತಹ ಆಯವ್ಯಯವನ್ನು ಜನರು ನಿರೀಕ್ಷಿಸಿರಲಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮೇಲ್ನೋಟಕ್ಕೆ ಮಾತ್ರ ಸರ್ವ ಜನಾಂಗದವರಿಗೂ ಒತ್ತು ನೀಡಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಒಳಹೊಕ್ಕಿ ನೋಡಿದಾಗ ಇದು ಸುಳ್ಳು ಎಂದು ಗೊತ್ತಾಗುತ್ತದೆ. ಇದೊಂದು ರೈತ ವಿರೋಧಿ ಬಜೆಟ್ ಆಗಿದ್ದು, ಬುರುಡೆ ಬಿಡಲಾಗಿದೆ. ರೈತರು ಸಾಲ ಮನ್ನಾ ನಿರೀಕ್ಷೆಯಲ್ಲಿದ್ದರು. ಆದರೆ ಅದು ಹುಸಿಯಾಗಿದೆ. ಇನ್ನು ಜಲಸಂಪನ್ಮೂಲ ಇಲಾಖೆಗೆ ಯಾವುದೇ ಅನುದಾನ ನೀಡದಿರುವುದರಿಂದ ನೀರಾವರಿ ಕ್ಷೇತ್ರಕ್ಕೆ ಹಿನ್ನಡೆ ಉಂಟಾಗಿದೆ. ಈ ನಡುವೆ ಒಂದು ಸಮುದಾಯವನ್ನು ಓಲೈಸುವ ಕೆಲಸವನ್ನು ಸಿಎಂ ಮಾಡಿದ್ದು, ಲೋಸಭಾ ಚುನಾವಣೆಯನ್ನು ಮುಂದುಟ್ಟಿಕೊಂಡು ಅಲ್ಪಸಂಖ್ಯಾತ ಸಮುದಾಯವನ್ನು ಓಲೈಸುವ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ರೈತರ ಅಭ್ಯದಯಕ್ಕಾಗಿ ಹಣ ಮೀಸಲಿಡದ ಮುಖ್ಯಮಂತ್ರಿ ಬೇರೆ ಕಾರಣಗಳಿಗಾಗಿ ಅನುದಾನ ಮೀಸಲಿಟ್ಟಿದ್ದಾರೆ. ಇಂತಹ ಕಾರ್ಯಗಳಿಂದಲೇ ಕಾಂಗ್ರೆಸ್ ಅವನತಿಯತ್ತ ಸಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಇವರಿಗೆ ಜನರೇ ಬುದ್ಧಿ ಕಲಿಸಲಿದ್ದಾರೆ. ಜಿಲ್ಲೆಯಲ್ಲಿ ಮೂಲ ಸೌಕರ್ಯಗಳ ಕೊರತೆಯಿದ್ದು, ಇದಕ್ಕೆ ಬಗ್ಗೆ ಗಮನಹರಿಸುವ ಕೆಲಸವನ್ನು ಸಿಎಂ ಮಾಡಿಲ್ಲ ಎಂದು ಟೀಕಿಸಿದ್ದಾರೆ.

ಹಿಂದಿನ ಲೇಖನಸಿದ್ದರಾಮಯ್ಯನವರಿಂದ ಕಳಪೆ ಬಜೆಟ್​ ಮಂಡನೆ: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ
ಮುಂದಿನ ಲೇಖನಸಿಎಂಗೆ ಅಭಿನಂದನೆ ಸಲ್ಲಿಸಿದ ಸಚಿವ ಎಸ್ ಮಧು ಬಂಗಾರಪ್ಪ