ಮನೆ ರಾಜಕೀಯ ಡಿ.ಕೆ. ಶಿವಕುಮಾ‌ರ್ ಸಾಹೇಬ್ರು ಹೇಳಿರುವುದರಲ್ಲಿ ತಪ್ಪೇನಿಲ್ಲ: ರಮ್ಯಾ

ಡಿ.ಕೆ. ಶಿವಕುಮಾ‌ರ್ ಸಾಹೇಬ್ರು ಹೇಳಿರುವುದರಲ್ಲಿ ತಪ್ಪೇನಿಲ್ಲ: ರಮ್ಯಾ

0

ವಿಜಯನಗರ: ನೆಲ, ಜಲ, ಭಾಷೆಯ ವಿಚಾರದಲ್ಲಿ ಕಲಾವಿದರಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್​ ಎಚ್ಚರಿಕೆ ನೀಡಿದ್ದನ್ನು ನಟಿ ಹಾಗೂ ಕಾಂಗ್ರೆಸ್​ ನಾಯಕಿ ರಮ್ಯಾ ಸಮರ್ಥಿಸಿಕೊಂಡಿದ್ದಾರೆ.

Join Our Whatsapp Group

ಹಂಪಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಭಾಗವಹಿಸುವುದಕ್ಕೂ ಮುನ್ನ ಹಂಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾಹೇಬ್ರು ಹೇಳಿರುವುದರಲ್ಲಿ ತಪ್ಪೇನಿಲ್ಲ. ನೀರಿನ ವಿಚಾರ ಬಂದಾಗ ಕಲಾವಿದರೆಲ್ಲರೂ ಬೆಂಬಲಿಸಬೇಕು. ಡಾ.ರಾಜ್‌ಕುಮಾರ್ ಅವರು, ನೆಲ, ಜಲ ಭಾಷೆ ವಿಚಾರದಲ್ಲಿ ಹೋರಾಟ ಮಾಡಿದ್ದಾರೆ. ಉತ್ತರ ಕರ್ನಾಟಕದ ನದಿಗಳು, ಜಲಾಶಯಗಳ ಬಗ್ಗೆಯೂ ಕಲಾವಿದರು ಮಾತನಾಡಬೇಕು. ಡಿಸಿಎಂ ಡಿ.ಕೆ.ಶಿವಕುಮಾರ್​ ಅವರು ಅದನ್ನೇ ಹೇಳಿದ್ದಾರೆ. ಅದಕ್ಕೆ ನನ್ನ ಸಹಮತವಿದೆ ಎಂದರು.

ಸದ್ಯ ನನಗೆ ಯಾವುದೇ ಹೊಸ ಚಲನಚಿತ್ರದ ಯೋಜನೆಗಳಿಲ್ಲ. ಬಹಳ ದಿನಗಳ ಬಳಿಕ ಹಂಪಿಗೆ ಬಂದಿದ್ದೇನೆ. ಸಚಿವ ಜಮೀರ್ ಅಹಮ್ಮದ್ ಅವರು ಮತ್ತು ವಿಜಯನಗರ ಜಿಲ್ಲಾಡಳಿತ ನನಗೆ ಆಹ್ವಾನ ನೀಡಿದ್ದರು. ಹಾಗಾಗಿ ಬಂದಿದ್ದೇನೆ, ಖುಷಿಯಾಯಿತು ಎಂದು ರಮ್ಯಾ ತಿಳಿಸಿದರು.