ನವದೆಹಲಿ(Newdelhi): ಭಾರತೀಯ ವಾಯುಪ್ರದೇಶಕ್ಕೆ ಪ್ರವೇಶಿಸಿರುವ ಇರಾನ್ ಪ್ರಯಾಣಿಕ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದೆ ಎಂದು ಎಎನ್‌ಐ ವರದಿ ಮಾಡಿದೆ.
ಇರಾನ್ನಿಂದ ಚೀನಾಕ್ಕೆ ಹಾರಿದ್ದ ವಿಮಾನ ಭಾರತದ ವಾಯುಪ್ರದೇಶಕ್ಕೆ ಬಂದ ಬಳಿಕ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಚೀನಾದ ಭದ್ರತಾ ಸಂಸ್ಥೆಗಳು ಮಾಹಿತಿ ನೀಡಿವೆ.
ಇದರಿಂದ ವಿಮಾನವನ್ನು ಇಲ್ಲಿಯೇ ತಡೆದು, ಪ್ರಯಾಣಿಕರ ರಕ್ಷಣೆಗೆ ಕೋರಲಾಗಿದೆ. ಭಾರತದ ಯುದ್ಧ ವಿಮಾನಗಳು ಪ್ರಯಾಣಿಕರ ರಕ್ಷಣೆಯಲ್ಲಿ ತೊಡಗಿವೆ ಎಂದು ತಿಳಿದುಬಂದಿದೆ.
ಬಾಂಬ್ ಇರುವ ಬೆದರಿಕೆ ಬಂದ ಚೀನಾದ ಗುವಾಂಗ್‌ಝೌಗೆ ಹೋಗುತ್ತಿರುವ ಇರಾನ್‌ನ ವಿಮಾನವನ್ನು ದೆಹಲಿಯಲ್ಲಿ ಇಳಿಸಲು ಏರ್ ಟ್ರಾಫಿಕ್ ಕಂಟ್ರೋಲ್ಗೆ ಮಾಹಿತಿ ನೀಡಲಾಯಿತು. ಬಳಿಕ ವಿಮಾನವನ್ನು ದೆಹಲಿಯ ಬದಲಾಗಿ ಜೈಪುರದಲ್ಲಿ ತುರ್ತು ಲ್ಯಾಂಡ್ಗೆ ಅನುಮತಿಸಲಾಗಿದೆ. ಆದರೆ, ವಿಮಾನದ ಪೈಲಟ್ ಇದನ್ನು ನಿರಾಕರಿಸಿ ಚೀನಾದೆಡೆಗೆ ವಿಮಾನವನ್ನು ಕೊಂಡೊಯ್ದಿದ್ದಾರೆ ಎಂದು ತಿಳಿದುಬಂದಿದೆ. ವಿಮಾನ ಈಗ ಭಾರತದ ವಾಯುಸೀಮೆ ದಾಟಿ ಚೀನಾದೆಡೆಗೆ ಸಾಗಿದೆ.