ಮನೆ ಯೋಗಾಸನ ಹೆಚ್ಚುವರಿ ಕ್ಯಾಲೋರಿಗಳನ್ನು ಸುಡಲು ಈ ೪ ಯೋಗ ಬಹಳ ಪರಿಣಾಮಕಾರಿ…

ಹೆಚ್ಚುವರಿ ಕ್ಯಾಲೋರಿಗಳನ್ನು ಸುಡಲು ಈ ೪ ಯೋಗ ಬಹಳ ಪರಿಣಾಮಕಾರಿ…

0

ಯೋಗದ ಭಂಗಿ ದೇಹ ಮತ್ತು ಮನಸ್ಸಿಗೆ ಬಹಳ ಉತ್ತಮವಾದ ಪ್ರಯೋಜನಗಳನ್ನು ನೀಡುತ್ತವೆ. ಪ್ರತಿನಿತ್ಯ ೩೦ ನಿಮಿಷಗಳ ಕಾಲ ಯೋಗ ಮಾಡುವುದರಿಂದ ಒತ್ತಡ, ಖಿನ್ನತೆಗೆ ಚಿಕಿತ್ಸೆ ದೊರೆಯುವುದಲ್ಲದೆ, ದೇಹದಲ್ಲಿರುವ ಅನಾವಶ್ಯಕ ಕೊಬ್ಬನ್ನು ಕೂಡ ಕಡಿಮೆ ಮಾಡುತ್ತದೆ.

ಬಹುತೇಕರು ತಮ್ಮ ಕ್ಯಾಲೋರಿಗಳನ್ನು ಬರ್ನ್ ಮಾಡಲು ಹಲವಾರು ದೇಹದಂಡನೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅವುಗಳಲ್ಲಿ ಯೋಗ ಅತ್ಯಂತ ಪರಿಣಾಮಕಾರಿ ಎಂದೇ ಹೇಳಬಹುದು. ಇತರ ಪ್ರಭಾವಶಾಲಿ ದೇಹದಂಡನೆಗಳಿಗೆ ಹೋಲಿಸಿದರೆ ಯೋಗ ಅಷ್ಟೇನೂ ಕ್ಲಿಷ್ಠಕರವೆಂದು ಅನ್ನಿಸುವುದಿಲ್ಲ.

ನಿಮ್ಮ ದೇಹದಲ್ಲಿರುವ ಹೆಚ್ಚುವರಿ ಕ್ಯಾಲೋರಿ ಮತ್ತು ದೇಹದ ತೂಕವನ್ನು ಕಳೆದುಕೊಳ್ಳಲು ಲೇಖನದಲ್ಲಿ ಹೇಳಲಾಗಿರುವ ೪ ಯೋಗದ ಭಂಗಿಗಳು ಬಹಳ ಪರಿಣಾಮಕಾರಿಯಾಗಿದೆ.

ವಿನ್ಯಾಸ ಯೋಗ

ಈ ವಿನ್ಯಾಸ ಯೋಗವು ನಿಮ್ಮ ಸೊಂಟದ ಸುತ್ತಲಿನ ಕೊಬ್ಬನ್ನು ತ್ವರಿತಗತಿಯಲ್ಲಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ಫ್ಲೋ ಯೋಗ ಎಂದು ಕೂಡ ಕರೆಯುತ್ತಾರೆ. ಈ ವಿನ್ಯಾಸ ಯೋಗವು ಬಗೆ ಬಗೆಯ ಆವೃತ್ತಿ ಮತ್ತು ವರ್ಗಗಳನ್ನು ಹೊಂದಿದೆ.

ಉದಾಹರಣೆಗೆ ನಿಂತು ಮಾಡುವ ಭಂಗಿಗಳು, ಬ್ಯಾಕ್ಬೆಂಡ್ಗಳು, ಫಾರ್ವರ್ಡ್ ಬೆಂಡ್ಗಳು ಸೇರಿದಂತೆ ಇನ್ನು ಮುಂತಾದ ಭಂಗಿಗಳು ಸೇರಿವೆ. ಈ ವಿಶೇಷವಾದ ಭಂಗಿಗಳು ದೇಹವನ್ನು ಹೆಚ್ಚು ಚುರುಕುಗೊಳಿಸುವ ಮೂಲಕ ೬೦ ರಿಂದ ೯೦ ನಿಮಿಷದ ಈ ವಿನ್ಯಾಸ ಯೋಗದಿಂದಾಗಿ ಸರಿಸುಮಾರು ೪೦೦ ರಿಂದ ೫೦೦ ಕ್ಯಾಲೋರಿಗಳನ್ನು ನೀವು ಕಳೆದುಕೊಳ್ಳುವಿರಿ.

ಬ್ರಿಕಮ್ ಯೋಗ

ಬ್ರಿಕಮ್ ಯೋಗವು ಬಿಸಿ ಯೋಗದ ಒಂದು ವ್ಯವಸ್ಥೆ ಎಂದೇ ಕರೆಯಲಾಗುತ್ತದೆ. ಇದು ೧೯೭೦ ರ ದಶಕದ ಆರಂಭದಲ್ಲಿ ಜನಪ್ರಿಯವಾಯಿತು. ಒಟ್ಟು ೨೬ ಮೂಲಭೂತ ಭಂಗಿಗಳನ್ನು ಎರಡು ಬಾರಿ ನಿರ್ವಹಿಸುತ್ತದೆ. ಈ ಯೋಗಾಸನಗಳು ವಿಶೇಷವಾಗಿ ಬಿಸಿಯಾದ ಕೊಠಡಿಯಲ್ಲಿ ನಡೆಯುತ್ತದೆ.

ಸಾಮಾನ್ಯವಾಗಿ ಕೋಣೆಯ ಉಷ್ಣತೆಯು ದೇಹವನ್ನು ಅತಿಯಾಗಿ ಬೆವರುವಂತೆ ಮಾಡುತ್ತದೆ. ಇದರ ಪರಿಣಾಮವಾಗಿ ಹೆಚ್ಚುವರಿ ಕೊಬ್ಬನ್ನು ಸುಡುತ್ತದೆ.

ಕೊಲೊರಾಡೊ ಸ್ಟೇಟ್ ಯೂನಿವರ್ಸಿಟಿ ೨೦೧೪ರ ಅಧ್ಯಯನದ ಪ್ರಕಾರ, ಪ್ರತಿ ಸೆಷನ್ನಲ್ಲಿ ಮಹಿಳೆಯರು ೩೩೦ ಕ್ಯಾಲೋರಿಗಳನ್ನು ಮತ್ತು ಪುರುಷರು ೪೯೦ ಕ್ಯಾಲೋರಿಗಳನ್ನು ಸುಡುತ್ತಾರೆ ಎಂದು ತಿಳಿಸುತ್ತದೆ.

ಹಠ ಯೋಗ

ಹಠ ಯೋಗವು ಯೋಗದ ಶಾಖೆಯಾಗಿದ್ದು, ಈ ಅಭ್ಯಾಸವು ಉಸಿರು, ದೇಹ ಮತ್ತು ಮನಸ್ಸನ್ನು ಒಳಗೊಂಡಿರುತ್ತದೆ. ಹಠ ಎಂಬ ಪದವು ಎರಡು ಪದಗಳಿಂದ ಮಾಡಲ್ಪಟ್ಟಿದೆ. ಅದೇನೆಂದರೆ, ‘ಹ’ ಎಂದರೆ ಸೂರ್ಯ ‘ಠ’ ಎಂದರೆ ಚಂದ್ರ. ಇದು ೪೫ ನಿಮಿಷಗಳಿಂದ ೯೦ ನಿಮಿಷಗಳವರೆಗೆ ಉಸಿರಾಟ, ಯೋಗ ಭಂಗಿಗಳು ಮತ್ತು ಧ್ಯಾನವನ್ನು ಒಳಗೊಂಡಿರುತ್ತದೆ.

ಈ ಯೋಗದ ದಿನಚರಿಯು ಆಹಾರದ ಬಗ್ಗೆ ವಿಶೇಷವಾದ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ತೂಕ ಇಳಿಕೆಗೆ ಇಂತಹ ಯೋಗವು ಬಹಳ ಪ್ರಯೋಜನಕಾರಿಯಾಗಿದೆ. ಬ್ರಿಕಮ್ ಯೋಗಕ್ಕೆ ಹೋಲಿಸಿದರೆ ಈ ಹಠ ಯೋಗವು ಅಷ್ಟೊಂದು ತೀವ್ರವಾಗಿರುವುದಿಲ್ಲ. ೩೦ ನಿಮಿಷಗಳ ಹಠ ಯೋಗ ಮಾಡುವುದರಿಂದ ಒಬ್ಬ ವ್ಯಕ್ತಿಯು ೧೪೯ ಕ್ಯಾಲೋರಿಗಳನ್ನು ಸುಡಲು ಸಹಾಯ ಮಾಡುತ್ತದೆ.

ಅಷ್ಟಾಂಗ ಯೋಗ

ಈ ಅಷ್ಟಾಂಗ ಯೋಗವು ಕೇವಲ ನಿಮ್ಮ ದೇಹದ ತೂಕವನ್ನು ಮಾತ್ರ ಕಡಿಮೆ ಮಾಡಲು ಸಹಾಯ ಮಾಡುವುದಿಲ್ಲ ಬದಲಾಗಿ ದೇಹ ಮತ್ತು ಮನಸ್ಸಿನ ಶುದ್ಧೀಕರಣದ ಮೇಲೂ ಕೂಡ ಗಮನವಹಿಸುತ್ತದೆ. ಈ ಅಷ್ಟಾಂಗ ಯೋಗ ಮಾಡುವುದರಿಂದ ನೀವು ದೈಹಿಕ ಮತ್ತು ಮಾನಸಿಕ ಪ್ರಯೋಜನಗಳನ್ನು ಪಡೆಯುತ್ತೀರಿ.

ಹೆಸರೇ ಸೂಚಿಸುವಂತೆ ಅಷ್ಟಾಂಗ ಯೋಗವು ೮ ಯೋಗದ ಭಂಗಿಗಳನ್ನು ಹೊಂದಿವೆ. ಇದು ಶಕ್ತಿ ಮತ್ತು ಉಸಿರಾಟದ ಮೇಲೆ ಕೇಂದ್ರೀಕರಿಸುತ್ತದೆ. ಅಷ್ಟಾಂಗದ ಆಸನಗಳನ್ನು ಒಂದರ ನಂತರ ಒಂದರಂತೆ ನಿರ್ವಹಿಸವುದರಿಂದ ದೇಹದಲ್ಲಿ ಸಹಜವಾಗಿಯೇ ಉಷ್ಣತೆ ಹೆಚ್ಚಾಗುತ್ತದೆ. ಇದು ಬೆವರುವಿಕೆಗೆ ಕಾರಣವಾಗುವ ಮೂಲಕ ಕ್ಯಾಲೋರಿಗಳನ್ನು ಸುಡುತ್ತದೆ.

ಈ ಅಷ್ಟಾಂಗ ಯೋಗದಲ್ಲಿ ಒಟ್ಟು ೮ ಭಂಗಿಯಲ್ಲಿ ನಿಂತಿರುವ ಮತ್ತು ಕುಳಿತಿರುವ ಭಂಗಿಗಳನ್ನು ಒಳಗೊಂಡಿರುತ್ತದೆ. ಈ ಯೋಗಗಳನ್ನು ಒಂದು ಗಂಟೆಯ ಕಾಲ ಅಭ್ಯಾಸ ಮಾಡುವುದರಿಂದ ಸುಮಾರು ೪೫೦ ರಿಂದ ೫೫೦ ಕ್ಯಾಲೋರಿಗಳನ್ನು ಸುಡಬಹುದು ಎನ್ನಲಾಗುತ್ತದೆ.