ನಮಗೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಎದುರಾದರೆ ನಾವು ತಕ್ಷಣ ಡಾಕ್ಟರ್ ಬಳಿಗೆ ಹೋಗುತ್ತೇವೆ. ಆದರೆ ನಿಜ ಹೇಳಬೇಕು ಎಂದರೆ ಮನೆ ಮದ್ದುಗಳ ಮೂಲಕ ಅಥವಾ ಸಾಂಪ್ರದಾಯಿಕ ಪದ್ಧತಿಗಳ ಅನುಭವದಲ್ಲಿ ಕಾಯಿಲೆಗಳನ್ನು ವಾಸಿ ಮಾಡಿಕೊಳ್ಳಬಹುದು.
ಬಹುತೇಕ ಜನರಿಗೆ ಇದು ಗೊತ್ತೇ ಇಲ್ಲ. ಅಸ್ತಮಾ ಅಥವಾ ಕೆಮ್ಮು ಸಮಸ್ಯೆಯಿಂದ ದೀರ್ಘಕಾಲ ತೊಂದರೆ ಅನುಭವಿಸುತ್ತಿರುವ ಜನರಿಗೂ ಕೂಡ ಸಿಂಪಲ್ ಯೋಗಾಸನಗಳು ಪರಿಹಾರ ಕೊಡುತ್ತವೆ. ಇಲ್ಲಿ ತಿಳಿಸಿರುವ ಯೋಗಾಸನಗಳು ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವವರಿಗಾಗಿ ಹೇಳಿ ಮಾಡಿಸಿದ ಯೋಗಭ್ಯಾಸಗಳಾಗಿವೆ. ತುಂಬ ಸರಳವಾಗಿ ಇವುಗಳನ್ನು ಮಾಡಬಹುದು ಮತ್ತು ಯಾರು ಬೇಕಾದರೂ ಮಾಡಬಹುದು. ಅದರಲ್ಲಿ ಚಕ್ರಸನ ಮಾತ್ರ ಅನುಭವಿ ಆಗಿದ್ದರೆ ಮಾಡುವುದು ಒಳ್ಳೆಯದು ಜೊತೆಗೆ ನಿಮಗೆ ಬೆನ್ನು ನೋವು ಇರಬಾರದು. ಬನ್ನಿ ಯೋಗಸನಗಳನ್ನು ನೋಡೋಣ…
ವಜ್ರಾಸನ
• ಮೊದಲಿಗೆ ಒಂದು ಯೋಗ ಚಾಪೆಯ ಮೇಲೆ ನಿಮ್ಮ ಮಂಡಿಗಳನ್ನು ಇರಿಸಿ
• ನಿಮ್ಮ ಹಿಮ್ಮಡಿಗಳ ಮೇಲೆ ನಿಮ್ಮ ಸೊಂಟ ಇರಿಸಿ ಕುಳಿತುಕೊಳ್ಳಿ.
• ನಿಮ್ಮ ಎರಡು ಹಿಮ್ಮಡಿಗಳನ್ನು ಸ್ವಲ್ಪ ಅಂತರದಲ್ಲಿ ಇಟ್ಟುಕೊಳ್ಳಿ.
• ಈಗ ನಿಮ್ಮ ಕೈಗಳನ್ನು ನಿಮ್ಮ ತೊಡೆಗಳ ಮೇಲೆ ಇಟ್ಟುಕೊಳ್ಳಿ
• ಮುಂದೆ ನೋಡುತ್ತಾ ನಿಮ್ಮ ಬೆನ್ನನ್ನು ನೇರವಾಗಿ ಇಟ್ಟುಕೊಳ್ಳಿ.
• ಇದೇ ಭಂಗಿಯಲ್ಲಿ ಸ್ವಲ್ಪ ಹೊತ್ತು ಇರಿ
ಪಶ್ಚಿಮೋತ್ತನಾಸನ
• ಯೋಗ ಚಾಪೆಯ ಮೇಲೆ ಕುಳಿತು ಕಾಲುಗಳನ್ನು ಮುಂದಕ್ಕೆ ಚಾಚಿ
• ಈಗ ನಿಮ್ಮ ಕೈಗಳನ್ನು ನೇರವಾಗಿ ಮೇಲೆತ್ತಿ ಉಸಿರನ್ನು ಹೊರಗೆ ಬಿಡುತ್ತಾ ಸಾಧ್ಯವಾದಷ್ಟು ಮುಂದಕ್ಕೆ ಬಾಗುವ ಪ್ರಯತ್ನ ಮಾಡಿ.
• ಆದರೆ ಮಂಡಿಗಳನ್ನು ಮಡಚಬೇಡಿ. ಹತ್ತು ಸೆಕೆಂಡುಗಳ ಕಾಲ ಹೀಗೆ ಇರಿ.
ಉಷ್ಟ್ರಾಸನ (ಒಂಟೆಯ ಭಂಗಿ)
• ಯೋಗ ಚಾಪೆಯ ಮೇಲೆ ಮಂಡಿಯೂರಿ ಕುಳಿತುಕೊಂಡು ನಿಮ್ಮ ಕೈಗಳನ್ನು ಸೊಂಟದ ಮೇಲೆ ಇರಿಸಿಕೊಳ್ಳಿ.
• ಇದೇ ಸಂದರ್ಭದಲ್ಲಿ ನಿಮ್ಮ ಬೆನ್ನನ್ನು ಭಾಗಿಸಿ ನಿಮ್ಮ ಅಂಗೈ ಗಳನ್ನು ನಿಮ್ಮ ಪಾದಗಳ ಬಳಿಗೆ ತೆಗೆದುಕೊಂಡು ತನ್ನಿ, ನಿಮ್ಮ ತೋಳುಗಳು ಈ ಸಂದರ್ಭದಲ್ಲಿ ನೇರವಾಗಿರಲಿ.
• ಆದರೆ ನೆನಪಿರಲಿ, ನಿಮ್ಮ ಕುತ್ತಿಗೆ ಭಾಗಕ್ಕೆ ಯಾವುದೇ ಒತ್ತಡ ಎದುರಾಗಬಾರದು.
ಅರ್ಧ ಮತ್ಸ್ಯಾಸನ
• ದಂಡಸನದಿಂದ ಮೊದಲು ಶುರು ಮಾಡಿ.
• ಇದಕ್ಕಾಗಿ ನೀವು ಎಡಗಾಲನ್ನು ಮಡಚಿ ನೆಲದ ಮೇಲೆ ಬಲಗಾಲನ್ನು ಇಟ್ಟು, ಬಲ ಮಂಡಿಯ ಮೇಲೆ ಎಡ ಪಾದವನ್ನು ಇರಿಸಿ.
• ಈಗ ನಿಮ್ಮ ಬಲಗಾಲನ್ನು ಮಡಚಿ ಎಡಗಾಲಿನ ಹೆಬ್ಬೆರಳನ್ನು ಬಲಗೈಯಿಂದ ಹಿಡಿದುಕೊಳ್ಳಿ.
• ಈಗ ನಿಧಾನವಾಗಿ ಉಸಿರನ್ನು ಹೊರಬಿಡುತ್ತ ನಿಮ್ಮ ಸೊಂಟದ ಭಾಗವನ್ನು ತಿರುಗಿಸಿ, ನಿಮ್ಮ ಕುತ್ತಿಗೆಯನ್ನು ಸಹ ತಿರುಗಿಸಿ.
• ಈ ಸಂದರ್ಭದಲ್ಲಿ ನಿಮ್ಮ ಕಣ್ಣುಗಳು ನಿಮ್ಮ ಎಡ ಭುಜ ವನ್ನು ನೋಡುತ್ತಿರಲಿ. ನಿಮ್ಮ ಸೊಂಟದ ಭಾಗವನ್ನು ನಿಮ್ಮ ಎಡಗೈ ಸುತ್ತುವರಿದು ಅಂಗೈ ಮೇಲ್ಭಾಗಕ್ಕೆ ಇರಲಿ.
• ಬಲಗಾಲು ಮತ್ತು ಬಲ ಮಂಡಿ ಈ ಸಂದರ್ಭದಲ್ಲಿ ನೆಲದ ಮೇಲಿರಲಿ. ಎಡಗಡೆ ಮಂಡಿ ಬಲಗಡೆಯ ತೋಳಿನ ಹತ್ತಿರದಲ್ಲಿ ಇರುವಂತಹ ನೋಡಿಕೊಳ್ಳಿ.
ಚಕ್ರಾಸನ
• ಬೆನ್ನಿನ ಮೇಲೆ ಮಲಗಿಕೊಂಡು ಕಾಲುಗಳನ್ನು ಮಡಚಿ
• ನಿಮ್ಮ ಕೈಗಳನ್ನು ಮಡಚಿ ನಿಮ್ಮ ಅಂಗೈಗಳನ್ನು ನಿಮ್ಮ ತಲೆಗೆ ಅಕ್ಕಪಕ್ಕ ಉಲ್ಟಾ ತಿರುಗಿಸಿ ಇಟ್ಟುಕೊಳ್ಳಿ.
• ಈಗ ನಿಧಾನವಾಗಿ ಉಸಿರನ್ನು ಒಳಗೆ ತೆಗೆದುಕೊಂಡು ಕಾಲುಗಳನ್ನು ಮತ್ತು ಅಂಗೈಗಳನ್ನು ಬೆಂಬಲವಾಗಿ ಇಟ್ಟುಕೊಂಡು ನಿಮ್ಮ ಇಡೀ ದೇಹವನ್ನು ಮೇಲೆತ್ತಲು ಪ್ರಯತ್ನಿಸಿ.
• ನಿಮ್ಮ ಕುತ್ತಿಗೆ ಈ ಸಂದರ್ಭದಲ್ಲಿ ವಿಶ್ರಾಂತವಾಗಿರಲಿ ಮತ್ತು ನಿಮ್ಮ ತಲೆಯನ್ನು ಹಿಂಬದಿಗೆ ತನ್ನಿ.